ಪ್ರತಿ ಮ್ಯಾಚ್ ಉತ್ತಮ ಆಟವಾಡುತ್ತಿದ್ದ ಲೆಜೆಂಡ್ ಆಂಡ್ರ್ಯೂ ಸೈಮಂಡ್ಸ್ ರವರ ಬಗ್ಗೆ ಹೆಚ್ಚು ಜನರರಿಗೆ ತಿಳಿಯದೆ ವಿಷಯಗಳೇನು ಗೊತ್ತೇ??
ಕ್ರಿಕೆಟ್ ಲೋಕದ ದಿಗ್ಗಜರಾದ ಆಂಡ್ರ್ಯೂ ಸೈಮಂಡ್ಸ್ ಅವರು ಮೇ 14ರಂದು ಅಪಘಾತದಲ್ಲಿ ವಿಧಿವಶರಾದರು. ಇವರ ನಿಧನಕ್ಕೆ ಕ್ರಿಕೆಟ್ ಲೋಕದ ಗಣ್ಯರು ಹಾಗೂ ವಿಶ್ವಾದ್ಯಂತ ಇರುವ ಆಂಡ್ರ್ಯೂ ಅವರ ಅಭಿಮಾನಿಗಳು ಕಂಬನಿ ಮಿಡಿದರು. ಆಂಡ್ರ್ಯೂ ಅವರು ಕ್ರಿಕೆಟ್ ಒಂದೇ ಅಲ್ಲದೆ ಇನ್ನಿತರ ಅನೇಕ ವಿಚಾರಗಳಿಂದ ಸುದ್ದಿಯಾಗಿದ್ದರು ಅವರ ಬಗ್ಗೆ ಕೆಲವು ಅಚ್ಚರಿ ಎನ್ನಿಸುವ ವಿಚಾರಗಳನ್ನು ಇಂದು ನಿಮಗೆ ತಿಳಿಸಲಿದ್ದೇವೆ..
ಆಂಡ್ರ್ಯೂ ಅವರು ಮೂಲತಃ ವೆಸ್ಟ್ ಇಂಡೀಸ್ ನವರು. ಇಂಗ್ಲೆಂಡ್ ಮೂಲದ ದಂಪತಿ ಇವರನ್ನು ದತ್ತು ಪಡೆದರು. ಬ್ರಿಟಿಷ್ ದೇಶದ ಪೌರತ್ವ ಇವರಿಗೆ ಸಿಕ್ಕಿತು. ಇವರು ಚಿಕ್ಕವರಿದ್ದಾಗಲೇ ಆಸ್ಟ್ರೇಲಿಯಾಗೆ ತೆರಳಿದ್ದರು, ಆಂಡ್ರ್ಯೂ ಅವರ ಬಳಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಎರಡು ದೇಶಗಳ ಪಾಸ್ ಪೋರ್ಟ್ ಇತ್ತು. ಕ್ರಿಕೆಟ್ ಗಾಗಿ ಆಂಡ್ರ್ಯೂ ಅವರು ಆಯ್ಕೆಮಾಡಿಕೊಂಡಿದ್ದು ಆಸ್ಟ್ರೇಲಿಯಾ ದೇಶವನ್ನು. 1995ರಲ್ಲಿ ಇಂಗ್ಲೆಂಡ್ ಕ್ರಿಕೆಟ್ ಟೀಮ್ ನಲ್ಲಿ ಸೈಮಂಡ್ಸ್ ಅವರಿಗೆ ಸ್ಥಾನ ನೀಡಿದರು ಸಹ ಅವರು ಅದನ್ನು ನಿರಾಕರಣೆ ಮಾಡಿದರು. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾನ್ಡ್ ತಂಡಕ್ಕೆ ಆಯ್ಕೆಯಾಗಿ, ಇಂಗ್ಲೆಂಡ್ ವಿರುದ್ಧ 108 ರನ್ ಗಳಿಸಿದರು, ಅದು ಆಂಡ್ರ್ಯೂ ಅವರ ಮೊದಲ ಶತಕ ಆಗಿತ್ತು.
ಅವರು 23ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ನಂತರ ಐದು ವರ್ಷಗಳ ಕಾಲ ಸೈಮಂಡ್ಸ್ ಅವರು ಉತ್ತಮವಾದ ಪ್ರದರ್ಶನ ನೀಡಲಿಲ್ಲ. ಹಾಗಾಗಿ ಕ್ರಿ ಕೆಟ್ ಬಿಡುವ ಹಂತವನ್ನು ತಲುಪಿದ್ದರು. ಬಳಿಕ ರಗ್ಬಿ ಆಟದ ತರಬೇತಿಯನ್ನು ಸಹ ಪಡೆದರು. 2003ರ ವಿಶ್ವಕಪ್ ಪಂದ್ಯಗಳಲ್ಲಿ ಸೈಮಂಡ್ಸ್ ಅವರು ಅದ್ಭುತವಾದ ಪ್ರದರ್ಶನ ನೀಡಿದರು. ನಂತರ ಆಸ್ಟ್ರೇಲಿಯಾ ತಂಡದಲ್ಲಿ ಅವಕಾಶಗಳನ್ನು ಪಡೆದುಕೊಂಡರು. ಇವರಿಗೆ ಮೀನುಗಾರಿಕೆಯಲ್ಲಿ ಸಹ ಬಹಳ ಆಸಕ್ತಿ ಇತ್ತು. ಅದನ್ನು ಸಹ ಅಭ್ಯಾಸ ಮಾಡುತ್ತಿದ್ದರು. ಆಸ್ಟ್ರೇಲಿಯಾ ಆಟಗಾರರು ಸೈಮಂಡ್ಸ್ ಅವರನ್ನು ಬಹಳ ಪ್ರೀತಿಯಿಂದ ರಾಯ್ ಎಂದು ಕರೆಯುತ್ತಿದ್ದರು.
Comments are closed.