ಭಾರತದಲ್ಲಿ ಬಿಡುಗಡೆಗೂ ಮುನ್ನವೇ ನಿರೀಕ್ಷೆ ಮೂಡಿಸಿರುವ ಟಾಪ್ ಎಲೆಕ್ಟ್ರಿಕಲ್ ಕಾರ್ಗಳು ಯಾವ್ಯಾವು ಗೊತ್ತೇ??
ಕ್ಲೀನರ್ ಕಾರ್ ಗಳನ್ನು ಖರೀದಿ ಮಾಡಲು ಬಯಸುತ್ತಿರುವವರು ಇದೀಗ ಹೈಬ್ರಿಡ್ ಪವರ್ ಟ್ರೇನ್ ಗಳಿರುವ ಹಾಗೂ ಪರ್ಯಾಯ ಕಾರ್ ಗಳನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಇತ್ತೀಚೆಗೆ ಮಾರುಕಟ್ಟಯಲ್ಲಿ ಎಲೆಕ್ಟ್ರಿಕ್ ಕಾರ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರ್ ಗಳ ಸಂಖ್ಯೆ ಸಹ ಏರಿಕೆಯಾಗಲಿದೆ. ಅತ್ಯುತ್ತಮವಾದ ಹೈಬ್ರಿಡ್ ಮತ್ತು ಪ್ಲಗ್ ಇನ್ ಹೈಬ್ರಿಡ್ ಇಂಜಿನ್ ವಿಚಾರದಲ್ಲಿ ಹಳೆಯ ಕಾರ್ ಗಳ ಇಂಜಿನ್ ಗಳನ್ನು ಮೀರಿಸುವುದಷ್ಟೇ ಅಲ್ಲದೆ. ಕಾರ್ಯಕ್ಷಮತೆಯ ದೃಷ್ಟಿಯಲ್ಲೂ ಅವುಗಳನ್ನು ಮೀರಿಸುತ್ತದೆ. ಎಲೆಕ್ಟ್ರಿಕ್ ವಾಹನಗಳು ನೋಡಲು ಬಹಳ ಆಕರ್ಷಕವಾಗಿದೆ, ಹಾಗೂ ಚಾರ್ಜಿಂಗ್ ದರ ಸಹ ಕಡಿಮೆ ಇದೆ. ಪ್ರಾಯೋಗಿಕವಾಗಿಯೂ ಇದೆ. 2022ರಲ್ಲಿ ಹೊಸದಾಗಿ ಬರಲಿರುವ ಎಲೆಕ್ಟ್ರಿಕ್ ಕಾರ್ ಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..
ಹುಂಡೈ ಐಕಾನಿಕ್ 5EV :- ಕೊರಿಯಾದ ಆಟೋ ಮೇಕರ್ ಕಂಪನಿ ಆಗಿರುವ ಹುಂಡೈ, 2022ರ ಮಧ್ಯಭಾಗದಲ್ಲಿ ಭಾರತದಲ್ಲಿ ಹೊಸದಾದ 5EV ಮಾಡೆಲ್ ಅನ್ನು ಪರಿಚಯ ಮಾಡುವ ಸಾಧ್ಯತೆ ಇದೆ. ಇದರಲ್ಲಿ 58kWh ಬ್ಯಾಟರಿ ಪ್ಯಾಕ್ ಮತ್ತು, ದೊಡ್ಡದಾದ 77.4kWh ಬ್ಯಾಟರಿ ಪ್ಯಾಕ್ ಜೊತೆಗೆ, ಅಂತಾರಾಷ್ಟ್ರೀಯವಾಗಿ ನೀಡಲಾಗುತ್ತದೆ. ಈ ದೊಡ್ಡ ಬ್ಯಾಟರಿಯನ್ನು 4WD configuration ನಲ್ಲಿ ನಿರ್ದಿಷ್ಟ ಪಡಿಸಬಹುದು. ಗರಿಷ್ಠ 305 BNP ಪವರ್ ಇರುವ ಎಲೆಕ್ಟ್ರಿಕಲ್ ಪವರ್ ಟ್ರೇನ್, ಮತ್ತು 605Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. ಈ 5EV ಕಾರ್ 481 ಕಿಮೀ ನಷ್ಟು ದೂರ ಕ್ರಮಿಸುತ್ತದೆ.
ಕಿಯಾ EV6 :- EV6 ದಕ್ಷಿಣ ಕೊರಿಯಾದ ಮತ್ತೊಂದು ಕಾರು ತಯಾರಿಕಾ ಕಂಪನಿ ಕಿಯಾ ಸಂಸ್ಥೆಯ ಮೊದಲ ಆಲ್ಎಲೆಕ್ಟ್ರಿಕ್ ಕಾರ್ ಆಗಿದೆ. ಹುಂಡೈ 5EVನ ಸೋದರ ಇದು ಎಂದರೆ ತಪ್ಪಾಗುವುದಿಲ್ಲ. ಈ ಕಾರ್ ಅನ್ನು EV ಪ್ಲಾಟ್ ಫಾರ್ಮ್ ನಲ್ಲಿ ನಿರ್ಮಿಸಲಾಗಿದೆ. ಈ ಕಾರ್ 2022ರ ಜೂನ್ ಒಳಗೆ ಭಾರತಕ್ಕೆ ಲಗ್ಗೆ ಇಡಲಿದೆ. ಭಾರತದಲ್ಲಿ ಯಾವ ರೀತಿಯ ಇಂಜಿನ್ ಸೌಲಭ್ಯವನ್ನು ಕಿಯಾ ನೀಡುತ್ತದೆ ಎಂದು ತಿಳಿದುಬಂದಿಲ್ಲ. ಆದರೆ, ಹಲವು ಕಾರ್ ಗಳ ಮೂಲಕ ಇದು ಹೇಗಿರಲಿದೆ ಎಂದು ತಿಳಿದುಬಂದಿದೆ. ಎರಡು configuration ನಲ್ಲಿ ಬರಲಿದ್ದು, 58kWh ಬ್ಯಾಟರಿ ಪ್ಯಾಕ್ ಇರುತ್ತದೆ. ರಿಯರ್ ವೀಲ್ ಡ್ರೈವ್ (RWD) ಇದರ ಜೊತೆಗೆ, 170hp ಉತ್ಪಾದನೆ ಮಾಡುವ ಸಿಂಗಲ್ ಮೋಟಾರ್ ಹಾಗೂ ಆಲ್ ವೀಲ್ ಡ್ರೈವ್ ಜೊತೆಗೆ 235hp ಉತ್ಪಾದನೆ ಮಾಡುವ, ಡ್ಯುಯೆಲ್ ಮೋಟಾರ್ ಸೆಟಪ್ ಇರುತ್ತದೆ.
ಹೋಂಡಾ ಸಿಟಿ ಹೈಬ್ರಿಡ್ :- ಇದು ಮುಂಬರುವ ಮಾಡೆಲ್ ಎಂದು ಸ್ಪಷ್ಟವಾಗಿ ಹೇಳಲಿಕ್ಕೆ ಸಾಧ್ಯವಿಲ್ಲವಾದರು, ಎಲೆಕ್ಟ್ರಿಕ್ ವಾಹನಗಳಿಗೆ ಇದು ಪ್ರತಿಸ್ಪರ್ಧಿ ಆಗಿದೆ. 19.49 ಲಾಕ್ಷಕ್ಕೆ ಈ ಕಾರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಈ ತಯಾರಕರು ತಯಾರಿಸಿ ಮಾರುಕಟ್ಟೆಗೆ ಬಂದಿರುವ ಮೊದಲ ಎಲೆಕ್ಟ್ರಿಕ್ ವಾಹನ ಆಗಿದೆ. ಸ್ವಯಂ ಚಾರ್ಜಿಂಗ್ ಹೈಬ್ರಿಡ್ ವ್ಯವಸ್ಥೆ ಹೊಂದಿರುವ ಮೊದಲ ಕಾರ್ ಇದಾಗಿದೆ. ಪೆಟ್ರೋಲ್ ಇಂಜಿನ್ ಗಳ ಜೊತೆಗೆ ಎರಡು ಎಲೆಕ್ಟ್ರಿಕ್ ಮೋಟಾರ್ ಗಳನ್ನು ಸೇರಿಸಿ ಸಂಯೋಜಿಸಲಾಗಿದೆ. ಇದರಲ್ಲಿ 98PS ಹಾಗೂ 127Nm ಟಾರ್ಕ್ ಹಾಗೂ 1.5 ಲೀಟರ್ ಪೆಟ್ರೋಲ್ ಇಂಜಿನ್ ಸಹ ಇದರಲ್ಲಿದೆ. ಎಲೆಕ್ಟ್ರಿಕ್ ಮೋಟಾರ್ 109 PS ನೀಡುತ್ತದೆ. ಇದರ ಒಟ್ಟು ವಿದ್ಯುತ್ ಉತ್ಪಾದನೆ 126PS ತರುತ್ತದೆ. ಟಾರ್ಕ್ 253Nm ಆಗಿರುತ್ತದೆ.
Comments are closed.