ಭಾರತೀಯ ಸೇನೆಯಲ್ಲಿ ಕೆಲಸ ಮಾಡಿರುವ ಭಾರತೀಯ ನಟರು ಯಾರ್ಯಾರು ಗೊತ್ತೇ?? ಇವರೆಲ್ಲರೂ ದೇಶ ಸೇವೆ ಮಾಡಿ ಬಣ್ಣ ಹಚ್ಚಿದ್ದಾರೆ..
ಮನುಷ್ಯ ಮಾಡಬಹುದಾದ ಅತ್ಯಂತ ಗೌರವಾನ್ವಿತ ಕೆಲಸವೆಂದರೆ ದೇಶಕ್ಕೆ ಯಾವುದೇ ರೀತಿಯಲ್ಲಿ ಮಾಡುವ ಸೇವೆ. ಸೇನೆಯ ಸಮವಸ್ತ್ರವನ್ನು ಧರಿಸುವ ಸಂತೋಷ ಮತ್ತು ಘನತೆ ಇನ್ಯಾವುದೇ ಸೇವೆಗೆ ಸಾಟಿಯಿಲ್ಲ, ಹಾಗೂ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸಿಗುವ ಈ ಸವಲತ್ತು ಬೆರಳೆಣಿಕೆಯಷ್ಟು ವ್ಯಕ್ತಿಗಳಿಗೆ ಮಾತ್ರ ನೀಡಲಾಗುತ್ತದೆ. ಆದರೆ, ಕೆಲವು ಬಾಲಿವುಡ್ ಬಣ್ಣದ ಪ್ರಪಂಚಕ್ಕೆ ಬರುವ ಮೊದಲು ದೇಶಕ್ಕಾಗಿ ಸೇವೆ ಸಹ ಸಲ್ಲಿಸಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ? ನಮ್ಮ ಭಾರತೀಯ ಸಿನಿಮಾ ತಾರೆಯರು ಅಂತಹ ಪಾತ್ರಗಳನ್ನು ಮಾಡಲು ಇಷ್ಟಪಡುತ್ತಾರೆ ಏಕೆಂದರೆ ದೇಶಭಕ್ತಿಯು ನಮ್ಮ ಚಿತ್ರರಂಗದ ಬರಹಗಾರರು ಮತ್ತು ಚಲನಚಿತ್ರ ನಿರ್ಮಾಪಕರಲ್ಲಿ ಮತ್ತು ಪ್ರೇಕ್ಷಕರಲ್ಲಿ ಬಹಳ ಹಿಂದಿನಿಂದಲೂ ನೆಚ್ಚಿನ ವಿಷಯವಾಗಿದೆ.
ಅಯಾರಿ, ಬಾರ್ಡರ್, ಹಾಲಿಡೇ, ದಿ ಘಾಜಿ ಅಟ್ಯಾಕ್, ಲಕ್ಷ್ಯ, ಶೌರ್ಯ, ಉರಿ: ದಿ ಸರ್ಜಿಕಲ್ ಸ್ಟ್ರೈಕ್, ಶೇರ್ಷಾ ಮತ್ತು ಇತರ ಅನೇಕ ಚಲನಚಿತ್ರಗಳು ನಮ್ಮ ಭಾರತೀಯ ಸೇನೆಗೆ ಮೀಸಲಾಗಿವೆ.
ನಮ್ಮ ನೆಚ್ಚಿನ ಸೆಲೆಬ್ರಿಟಿಗಳನ್ನು ಸೇನೆಯ ಸಮವಸ್ತ್ರದ ಪಾತ್ರಗಳಲ್ಲಿ ನೋಡುವುದನ್ನು ನಾವು ಇಷ್ಟಪಡುತ್ತೇವೆ ಮತ್ತು ಅಂತಹ ಪಾತ್ರಗಳು ಹಾಗೂ ಸಿನಿಮಾಗಳ ದೊಡ್ಡ ಅಭಿಮಾನಿಗಳಾಗಿದ್ದರೂ, ಅವರ ಹಿಂದಿನ ಉದ್ಯೋಗಗಳ ಬಗ್ಗೆ ತಿಳಿದುಕೊಳ್ಳುವುದು ಆಕರ್ಷಕವಾಗಿದೆ. ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ಆ ನಟರು ಯಾರು ಎಂದು ತಿಳಿದುಕೊಳ್ಳೋಣ..
1.ಗುಫಿ ಪೈಂಟಲ್ :- ಇವರು ಕ್ಲಾಸಿಕ್ ಕಾಲದ ಪ್ರಮುಖ ಗಾಯಕರಲ್ಲಿ ಒಬ್ಬರಾಗಿದ್ದು, ಪ್ರಸಿದ್ಧ ಧಾರವಾಹಿ ಮಹಾಭಾರತದಲ್ಲಿ ಶಕುನಿ ಮಾಮಾ ಚೋರ ಪಾತ್ರ ಮಾಡಿದ್ಫಾರೂ. ಗುಫಿ ಅವರು 1980ರ ದಶಕದ ಹೆಸರಾಂತ ನಟ. ಇವರು ಮೂಲತಃ ಇಂಜಿನಿಯರ್ ಆಗಿ ತರಬೇತಿ ಪಡೆದು. ನಂತರ ಮಾಡೆಲಿಂಗ್ ಆರಂಭ ಮಾಡಿದರು. ಧಾರವಾಹಿ ಮತ್ತು ಸಿನಿಮಾ ಎರಡನ್ನು ಬ್ಯಾಲೆನ್ಸ್ ಮಾಡುತ್ತಿದ್ದರು. ಜೊತೆಗೆ ಒಂದು ಬಾರಿ ಭಾರತೀಯ ಆರ್ಮಿಯ ಕ್ಯಾಪ್ಟನ್ ಸಹ ಆಗಿದ್ದರು.
2. ಆನಂದ್ ಬಕ್ಷಿ :- ಭಾರತ ಚಿತ್ರರಂಗದ ಅತ್ಯುತ್ತಮ ಸಾಹಿತಿಗಳಲ್ಲಿ ಆನಂದ್ ಬಕ್ಷಿ ಕೂಡ ಒಬ್ಬರು. ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಜನಿಸಿದ ಅವರ ಕುಟುಂಬ ನಂತರ ಭಾರತಕ್ಕೆ ಸ್ಥಳಾಂತರಗೊಂಡಿತು. ಆನಂದ್ ಅವರು ಚಿಕ್ಕ ವಯಸ್ಸಿನಿಂದಲು ಹವ್ಯಾಸವಾಗಿ ಬರವಣಿಗೆಯನ್ನು ಇಷ್ಟಪಡುತ್ತಿದ್ದರು. ಭಲಾ ಆದ್ಮಿ (1958) ಚಿತ್ರದ ಮೂಲಕ ಅವರು ಬಾಲಿವುಡ್ನಲ್ಲಿ ಯಶಸ್ಸು ಪಡೆದರು. ಆನಂದ್ ಅವರು ಒಟ್ಟು 40 ಬಾರಿ ಅತ್ಯುತ್ತಮ ಗೀತರಚನೆಕಾರರಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು. 4 ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಗೆದ್ದಿದ್ದಾರೆ. ಆನಂದ್ ಬಕ್ಷಿ ಅವರು ನಟನೆ ಜೊತೆಗೆ ರಾಯಲ್ ಇಂಡಿಯನ್ ನೇವಿಗೆ ಸೇರಿಕೊಳ್ಳುತ್ತಾರೆ. ವಿಭಜನೆಯ ನಂತರ ಅವರ ಕುಟುಂಬವು ಪಾಕಿಸ್ತಾನವನ್ನು ತೊರೆದು ದೆಹಲಿಹೇ ಬಂದಿತು. ನಂತರ ಆನಂದ್ ಬಕ್ಷಿ ಅವರು ಭಾರತೀಯ ಸೇನೆಗೆ ಸೇರಿತು.
3. ರಾಜ್ ಕುಮಾರ್ :- ಬಾಲಿವುಡ್ ನಟ ರಾಜ್ ಕುಮಾರ್ ಅವರನ್ನು ಬಾಲಿವುಡ್ ನಲ್ಲಿ “ಜಾನಿ” ಎಂದು ಕರೆಯಲಾಗುತ್ತಿತ್ತು. ರಾಜ್ ಕುಮಾರ್ ಅವರು ವಕ್ತ್, ಪಕೀಜಾ, ತಿರಂಗ, ಮದರ್ ಇಂಡಿಯಾ, ನೌಶೆರ್ವಾನ್-ಇ-ಆದಿಲ್ ಹಾಗೂ ಇನ್ನಿತರ ಅದ್ಭುತವಾದ ಸಿನಿಮಾಗಳಲ್ಲಿ ತಮ್ಮ ಅಭಿನಯದಿಂದ ಭಾರತೀಯ ಸಿನಿಪ್ರಿಯರ ಫೇವರೆಟ್ ಆಗಿದ್ದರು. ರಾಜ್ ಕುಮಾರ್ ಅವರು 1940ರ ದಶಕದ ಅರ್ಧ ಭಾಗದಲ್ಲಿ ಬಣ್ಣದ ಲೋಕಕ್ಕೆ ಪ್ರವೇಶಿಸುವ ಮೊದಲು ಮುಂಬೈ ಪೊಲೀಸ್ ಇಲಾಖೆಯಲ್ಲಿ ಸಬ್-ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದರು.
4. ಬಿಕ್ರಮಜೀತ್ ಕನ್ವರ್ಪಾಲ್ :- ದಿವಂಗತ ನಟ ಬಿಕ್ರಮಜೀತ್ ಕನ್ವರ್ಪಾಲ್ ಅವರು ಅನೇಕ ಸಿನಿಮಾಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಪೋಷಕ ನಟನಾಗಿ ಗಮನಾರ್ಹ ಅಭಿನಯಕ್ಕಾಗಿ ಹೆಸರು ಮಾಡಿದ್ದರು. ಆದರೆ ಇವರು ಭಾರತೀಯ ಸೇನೆಯಲ್ಲಿ ಮೇಜರ್ ಸಹ ಆಗಿದ್ದರು. 2002 ರಲ್ಲಿ ಸೈನ್ಯದಿಂದ ನಿವೃತ್ತರಾದ ನಂತರ, ಇವರು 2003 ರಲ್ಲಿ ನಟನೆಯ ಉದ್ಯಮಕ್ಕೆ ಮತ್ತೆ ಮರಳಿದರು, ಮಧುರ್ ಭಂಡಾರ್ಕರ್ ಸಿನಿಮಾ, ಪೇಜ್ 3 ನಲ್ಲಿ ನಟಿಸಿದರು.
5. ರೆಹಮಾನ್ :- ರೆಹಮಾನ್ ಅವರ ವೃತ್ತಿಜೀವನವು 1940 ರ ದಶಕದ ಅಂತ್ಯದಿಂದ 1970 ರ ದಶಕದ ಅಂತ್ಯದವರೆಗೆ ನಡೆಯಿತು. ರೆಹಮಾನ್ ಅವರನ್ನು ಸುವರ್ಣ ಯುಗದ ಶ್ರೇಷ್ಠ ನಟನನ್ನಾಗಿ ಮಾಡಿತು. ರೆಹಮಾನ್ ಅವರು ಪ್ಯಾಸಾ, ಚೌಧರಿ ಕಾ ಚಂದ್, ವಕ್ತ್, ಜೀತ್, ಬಡಿ ಬೆಹೆನ್, ಪರ್ದೇಸ್ ಮತ್ತು ಇತರವುಗಳನ್ನು ಒಳಗೊಂಡಂತೆ ಪೌರಾಣಿಕ ಮೇರುಕೃತಿಗಳಲ್ಲಿ ಕಾಣಿಸಿಕೊಂಡ ನಂತರ ಖ್ಯಾತಿಗೆ ಹೆಚ್ಚಾಯಿತು. ಯುವ ಪೀಳಿಗೆಯವರು ಈ ನಟನ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲ. ಆದರೆ ಅವರು ರಾಯಲ್ ಇಂಡಿಯನ್ ಏರ್ ಫೋರ್ಸ್ನಲ್ಲಿ ಪೈಲಟ್ ಆಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ ಎನ್ನುವ ವಿಚಾರ ಎಲ್ಲರಿಗೂ ಆಶ್ಚರ್ಯ ತರುವುದು ಖಂಡಿತ. ಇವರು ನಟನೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಪೈಲಟ್ ಆಗಿ ತನ್ನ ಪ್ರತಿಷ್ಠಿತ ವೃತ್ತಿಯನ್ನು ತೊರೆದರು.
6. ರುದ್ರಶಿಷ್ ಮಜುಮ್ದಾರ್ :- ರುದ್ರಶಿಷ್ ಮಜುಂದಾರ್ ಅವರು ಮಾಜಿ ಸೇನಾಧಿಕಾರಿಯಾಗಿದ್ದರು ನಂತರ ನಟರಾದರು. ಇವರು ಚಿಚೋರೆ, ಹವಾ ಸಿಂಗ್, ಶ್ರೀಮತಿ ಅಂಡರ್ಕವರ್, ಮತ್ತು ಜೆರ್ಸಿ ಸಿನಿಮಾದಲ್ಲಿ ನಟಿಸಿದ್ದಾರೆ.. ಸಿನಿಮಾ ಮಾತ್ರವಲ್ಲದೆ, Coco cola, MG ಹೆಕ್ಟರ್ ಸೇರಿದಂತೆ, ಅನೇಕ ಜಾಹೀರಾತುಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ.ಇವಳ ಜೊತೆಗೆ ಏಳು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ ಎನ್ನುವುದು ಅನೇಕರಿಗೆ ಗೊತ್ತಿಲ್ಲ.
7. ಅಚ್ಯತ್ ಪೋತದಾರ್ :- 3 ಈಡಿಯಟ್ಸ್, ದಬಾಂಗ್ 2, ಲಗೇ ರಹೋ ಮುನ್ನಾ ಭಾಯ್ ಹಾಗೂ ಇನ್ನಿತರ ಸಿನಿಮಾಗಳಲ್ಲಿ ಉತ್ತಮವಾದ ಅಭಿನಯ ನೀಡಿದ್ದಾರೆ. ಅಚ್ಯುತ್ ಪೋತದಾರ್ ಅವರು ಬಾಲಿವುಡ್ನ ಅತ್ಯಂತ ಭರವಸೆಯ ಪ್ರದರ್ಶಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.. ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಸಹ, ಸಿನಿಪ್ರಿಯರಿಂದ ಸಾಕಷ್ಟು ಮೆಚ್ಚುಗೆ ಪಡೆದಿದ್ದಾರೆ. ಇವರು ಚಿತ್ರರಂಗಕ್ಕೆ ಬರುವ ಮೊದಲು, ಭಾರತೀಯ ಸೇನೆಗೆ ಕ್ಯಾಪ್ಟನ್ ಆಗಿ ಸೇರುವ ಮೊದಲು ಮಧ್ಯಪ್ರದೇಶದ ರೇವಾದಲ್ಲಿ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1967 ರಲ್ಲಿ ನಿವೃತ್ತಿ ಪಡೆದರು. ಭಾರತೀಯ ತೈಲ ಉದ್ಯಮದಲ್ಲಿ ಕಾರ್ಯನಿರ್ವಾಹಕರಾಗಿ 25 ವರ್ಷಗಳ ಕಾಲ ಕೆಲಸ ಮಾಡಿದರು. ನಂತರ ಅವರು 44 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದರು.
Comments are closed.