ಇಬ್ಬರು ಯುವ ಆಟಗಾರ ಪ್ರದರ್ಶನಕ್ಕೆ ಸಂಪೂರ್ಣ ಫಿದಾ ಆದ ಸೌರವ್ ಗಂಗೂಲಿ, ಆ ಇಬ್ಬರ ಬಗ್ಗೆ ಹೇಳಿದ್ದೇನು ಗೊತ್ತೇ??
ಐಪಿಎಲ್ ಎನ್ನುವುದು ಯುವಆಟಗಾರರಿಗೆ ಅತ್ಯುತ್ತಮವಾದ ವೇದಿಕೆ. ಐಪಿಎಲ್ ಅದ್ಭುತ ಪ್ರದರ್ಶನ ನೀಡಿದ ಆಟಗಾರರು ಟೀಮ್ ಇಂಡಿಯಾಗೆ ಸೆಲೆಕ್ಟ್ ಆಗಿ, ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈಗಾಗಲೇ ಐಪಿಎಲ್ ಉತ್ತಮ ಪ್ರದರ್ಶನದಿಂದ ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರ ಸೇರಿದಂತೆ ಅನೇಕ ಕಲಾವಿದರು ಟೀಮ್ ಇಂಡಿಯಾ ಸೇರಿದ್ದಾರೆ. ಈ ವರ್ಷ ಸಹ ಅದೇ ರೀತಿ ಕೆಲವು ಯುವ ಆಟಗಾರರು ಅತ್ಯುತ್ತಮವಾದ ಪ್ರದರ್ಶನ ನೀಡುತ್ತಿದ್ದು, ಬಿಸಿಎಐಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಸಹ ಕೆಲವು ಆಟಗಾರರ ಪ್ರದರ್ಶನ ನೋಡಿ, ಪ್ರಭಾವಿತರಾಗಿದ್ದು ಅವರ ಬಗ್ಗೆ ಮಾತನಾಡಿದ್ದಾರೆ. ಸೌರವ್ ಗಂಗೂಲಿ ಅವರು ಮೆಚ್ಚಿಕೊಂಡಿರುವ ಆ ಇಬ್ಬರು ಆಟಗಾರರು ಯಾರು ಎಂದು ತಿಳಿಸುತ್ತೇವೆ ನೋಡಿ..
ಈ ಸಾರಿ ಐಪಿಎಲ್ ನಲ್ಲಿ ಬೌಲರ್ ಗಳು ಉತ್ತಮವಾದ ಪ್ರದರ್ಶನ ನೀಡುತ್ತಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ಬೌಲರ್ ಗಳು ಉತ್ತಮವಾದ ಬೌನ್ಸರ್ ಗಳನ್ನು ಹಾಕುತ್ತಿದ್ದಾರೆ. ಸ್ಪಿನ್ನರ್ ಗಳು ಕೂಡ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ.. ಯುವ ವೇಗಿಗಳು ಆಕರ್ಷಕ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಸನ್ ರೈಸರ್ಸ್ ಹೈದರಾಬಾದ್ ತಂಡದ ವೇಗಿ ಉಮ್ರಾನ್ ಮಲಿಕ್ ಅವರ ಬೌಲಿಂಗ್ ಪ್ರದರ್ಶನ ಅದ್ಭುತವಾಗಿದೆ. 150ಕಿಮಿ ವೇಗದಲ್ಲಿ ಬೌಲ್ ಮಾಡಲು ಎಷ್ಟು ಜನರಿಗೆ ಸಾಧ್ಯವಾಗುತ್ತದೆ? ಎಲ್ಲರಿಂದಲೂ ಅದು ಸಾಧ್ಯವಿಲ್ಲ. ಜೊತೆಗೆ ವಿಕೆಟ್ ತೆಗೆಯುವುದರಲ್ಲಿ ಸಹ ಅವರು ಉತ್ತಮವಾಗಿದ್ದಾರೆ. ಹಾಗಾಗಿ ಉಮ್ರಾಮ್ ಮಲಿಕ್ ಭಾರತ ತಂಡಕ್ಕೆ ಆಯ್ಕೆಯಾದರೆ ನನಗೆ ಆಶ್ಚರ್ಯವಿಲ್ಲ ಎಂದಿದ್ದಾರೆ ಸೌರವ್ ಗಂಗೂಲಿ.
ಇವರೊಬ್ಬರೇ ಅಲ್ಲದೆ ಮತ್ತೊಬ್ಬ ಆಟಗಾರರನ್ನು ಸಹ ಸೌರವ್ ಗಂಗೂಲಿ ಅವರು ಮೆಚ್ಚಿಕೊಂಡಿದ್ದಾರೆ. ಅದು ಆರ್.ಆರ್ ತಂಡದ ಕುಲದೀಪ್ ಸೇನ್, “ಕುಲದೀಪ್ ಅವರ ಬೌಲಿಂಗ್ ಸಹ ನನಗೆ ತುಂಬಾ ಇಷ್ಟವಾಗಿದೆ. 7 ಪಂದ್ಯಗಳಲ್ಲಿ 8 ವಿಕೆಟ್ಸ್ ಪಡೆದಿದ್ದಾರೆ. ಅದರಲ್ಲಿ ಡೆತ್ ಓವರ್ ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುತ್ತಾರೆ. ಈ ಅನ್ ಕ್ಯಾಪ್ಡ್ ಬೌಲರ್ ಗಳ ಪ್ರದರ್ಶನಕ್ಕೆ ನಾನು ಫಿದಾ..” ಎಂದಿದ್ದಾರೆ ಸೌರವ್. ಇದಷ್ಟೇ ಅಲ್ಲದೆ, ಇವರಿಬ್ಬರನ್ನು ಇಂಡಿಯನ್ ಟೀಮ್ ಗೆ ಆಯ್ಕೆ ಮಾಡುವುದು ಬಿಡುವುದು ಆಯ್ಕೆ ಮಾಡುವವರಿಗೆ ಬಿಟ್ಟಿದ್ದು. ಈಗ ಟಿ.ನಟರಾಜನ್ ಒಳ್ಳೆ ಫಾರ್ಮ್ ನಲ್ಲಿದ್ದಾರೆ. ಜೊತೆಗೆ ಜಸ್ಪ್ರೀತ್ ಬುಮ್ರ ಸಹ ಇದ್ದಾರೆ. ಯುವ ಆಟಗಾರರನ್ನು ಸೆಲೆಕ್ಟ್ ಮಾಡಿದರೆ ಒಂದು ರೀತಿ ಕಷ್ಟ, ಅವರಿಗೆ ಅನುಭವ ಇರುವುದಿಲ್ಲ. ಹಾಗಾಗಿ ಯಾರನ್ನು ಸೆಲೆಕ್ಟ್ ಮಾಡಬೇಕು ಎಂದು ಅವರಿಗೆ ಗೊತ್ತಿರುತ್ತದೆ.. ಎನ್ನುತ್ತಾರೆ ಸೌರವ್ ಗಂಗೂಲಿ.
Comments are closed.