ಕಿರುತೆರೆಯಲ್ಲಿ ಸದ್ದು ಮಾಡುತ್ತಿರುವ ಕಾವ್ಯಾಂಜಲಿ ಧಾರಾವಾಹಿಯಲ್ಲಿ ಮುದ್ದು ಮುದ್ದಾಗಿ ಪಾತ್ರ ಮಾಡುತ್ತಿರುವ ವಿದ್ಯಾಶ್ರೀ ರವರು ನಿಜಕ್ಕೂ ಯಾರು ಗೊತ್ತೇ??
ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳು ಪ್ರಸಾರವಾಗುತ್ತವೆ, ಆದರೆ ಜನರಿಗೆ ಇಷ್ಟ ಆಗುವುದು ಕೆಲವೇ ಧಾರಾವಾಹಿಗಳು ಮಾತ್ರ, ಅವುಗಳಲ್ಲಿ ಒಂದು ಕಾವ್ಯಂಜಲಿ ಧಾರವಾಹಿ. ಉದಯ ಟಿವಿಯಲ್ಲಿ ಪ್ರಸಾರವಾಗುವ ಈ ಧಾರಾವಾಹಿಯಲ್ಲಿ ಕಾವ್ಯ ಪಾತ್ರದ ಮೂಲಕ ಫೇಮಸ್ ಆಗಿರುವವರು ನಟಿ ವಿದ್ಯಾಶ್ರೀ. ನೋಡಲು ಬಹಳ ಸುಂದರವಾಗಿ ಮತ್ತು ಮುಗ್ಧವಾಗಿರುವ ಈ ನಟಿ ನಟನೆಗಿಂತ ಮೊದಲು ಯಾವ ಕೆಲಸ ಮಾಡುತ್ತಿದ್ದರು ಗೊತ್ತಾ?
ವಿದ್ಯಾಶ್ರೀ ಅವರು ಹುಟ್ಟಿ ಬೆಳೆದದ್ದು ಸಾಂಪ್ರದಾಯಿಕ ಕುಟುಂಬದಲ್ಲಿ, ಚಿತ್ರರಂಗ ನಟನೆ ಬಗ್ಗೆ ಇವರಿಗೆ ಕಲ್ಪನೆ ಸಹ ಇರಲಿಲ್ಲ. ಚಿಕ್ಕ ವಯಸ್ಸಿನಿಂದ ಓದಿನ ಬಗ್ಗೆ ಆಸಕ್ತಿ ವಹಿಸಿಕೊಂಡಿದ್ದ ವಿದ್ಯಾಶ್ರೀ ಅವರು, ಎವಿಯೇಷನ್ ನಲ್ಲಿ ಡಿಪ್ಲೊಮಾ ಕೋರ್ಸ್ ಮಾಡಿ ಮೂರು ವರ್ಷಗಳ ಕಾಲ ಗಗನಸಖಿಯಾಗಿ ಗೋ ಏರ್ ಲೈನ್ಸ್ ಗೆ ಕೆಲಸ ಮಾಡಿದ್ದಾರೆ. ನಂತರ ಇವರಿಗೆ ಆ ಕೆಲಸ ಬೋರ್ ಆಗಿ, ಜೀವನದಲ್ಲಿ ಹೊಸದೇನಾದರು ಮಾಡಬೇಕು ಎಂದು ಅನ್ನಿಸಿ, ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟರು. ತಕಧಿಮಿತ ಡ್ಯಾನ್ಸಿಂಗ್ ಸ್ಟಾರ್ ಶೋನಲ್ಲಿ ಅಗ್ನಿಸಾಕ್ಷಿ ಖ್ಯಾತಿಯ ರಾಜೇಶ್ ಧ್ರುವ ಅವರ ಪಾರ್ಟ್ನರ್ ಆಗಿ ಡ್ಯಾನ್ಸ್ ಶೋ ನಲ್ಲಿ ಸ್ಪರ್ಧಿಯಾಗಿ ಬಂದು 14 ವಾರಗಳ ಕಾಲ ಮುಂದುವರೆದಿದ್ದರು. ಶೋ ಇಂದ ಹೊರಬಂದ ಬಳಿಕ ನಟನೆ ಆಯ್ಕೆ ಮಾಡಿಕೊಂಡು, ತಂದೆ ತಾಯಿಯ ಒಪ್ಪಿಗೆ ಪಡೆದುಕೊಂಡರು ವಿದ್ಯಾಶ್ರೀ.
ಬಳಿಕ ಅವರು ಧಾರವಾಹಿಗಳಿಗೆ ಆಡಿಷನ್ ಗಳನ್ನು ಕೊಡಲು ಶುರು ಮಾಡಿದರು. ಪ್ರತಿ ಬಾರಿಯೂ ಆಮೇಲೆ ಕರೆ ಮಾಡುತ್ತೇವೆ ಎನ್ನುವ ಮಾತುಗಳನ್ನೇ ಕೇಳಿ, ಇನ್ನುಮುಂದೆ ಆಡಿಷನ್ ಗೆ ಹೋಗುವುದೇ ಬೇಡ ಎಂದುಕೊಳ್ಳುವ ಸಮಯದಲ್ಲಿ ಸ್ಟಾರ್ ಸುವರ್ಣ ವಾಹಿನಿಯ, ವರಲಕ್ಷ್ಮಿ ಸ್ಟೋರ್ಸ್ ಧಾರವಾಹಿಯಲ್ಲಿ ರಮ್ಯಾ ಎನ್ನುವ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಮೊದಲ ಧಾರಾವಾಹಿಯಲ್ಲೇ ನೆಗಟಿವ್ ಶೇಡ್ ಪಾತ್ರದಲ್ಲಿ ನಟಿಸಿ, ಸೈ ಎನ್ನಿಸಿಕೊಂಡಿದ್ದರು ವಿದ್ಯಾಶ್ರೀ. ಬಳಿಕ ಇವರಿಗೆ ಕಾವ್ಯಂಜಲಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು, ಕಾವ್ಯ ಪಾತ್ರದ ಮೂಲಕ ಈಗ ಮನೆಮಾತಾಗಿದ್ದಾರೆ. ಧಾರವಾಹಿ ಮಾತ್ರವಲ್ಲದೆ, ವಿದ್ಯಾಶ್ರೀ ಅವರಿಗೆ ಚಿತ್ರರಂಗದಲ್ಲಿ ನಟಿಸುವ ಅವಕಾಶ ಸಹ ಸಿಗುತ್ತಿದ್ದು, ಮುಂದಿನ ದಿನಗಳಲ್ಲಿ ಬೆಳ್ಳಿ ಪರದೆಯ ಮೇಲೆ ಸಹ ಇವರು ಮಿಂಚುತ್ತಾರೆ ಎನ್ನಲಾಗುತ್ತಿದೆ.
Comments are closed.