ಕೇವಲ ಧ್ರುವ ರವರ ಇಂಟ್ರೊಡಕ್ಷನ್ ದೃಶ್ಯಕ್ಕೆ ಮಾರ್ಟಿನ್ ತಂಡ ಖರ್ಚು ಮಾಡಿದ್ದು ಎಷ್ಟು ಕೋಟಿ ಗೊತ್ತೇ?? ಯಪ್ಪಾ ಇಷ್ಟೊಂದಾ??
ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು ಧ್ರುವ ಸರ್ಜಾ. ಕಳೆದ ವರ್ಷ ಪೊಗರು ಸಿನಿಮಾ ಮೂಲಕ ವೀಕ್ಷಕರನ್ನು ಮೋಡಿ ಮಾಡಿದ ಧ್ರುವ ಸರ್ಜಾ ಅವರು ಈ ವರ್ಷ ಮಾರ್ಟಿನ್ ಸಿನಿಮಾ ಮೂಲಕ ಅಭಿಮಾನಿಗಳಿಗೆ ದೊಡ್ಡ ಟ್ರೀಟ್ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಾರ್ಟಿನ್ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು ಈ ವರ್ಷ ದಸರಾ ಹಬ್ಬದ ವಿಶೇಷವಾಗಿ ಸೆಪ್ಟೆಂಬರ್ 230ರಂದು ಮಾರ್ಟಿನ್ ಸಿನಿಮಾ ತೆರೆಕಾಣುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದೀಗ ಮಾರ್ಟಿನ್ ಸಿನಿಮಾ ಒಂದು ವಿಶೇಷತೆಯಿಂದ ಭಾರಿ ಸುದ್ದಿಯಾಗಿದೆ.. ಧ್ರುವ ಸರ್ಜಾ ಅವರ ಇಂಟ್ರೊಡಕ್ಷನ್ ದೃಶ್ಯಕ್ಕೆ ಖರ್ಚಾಗಿರುವ ಹಣ ಎಷ್ಟು ಗೊತ್ತಾ?
ಮಾರ್ಟಿನ್ ಸಿನಿಮಾ ಚಿತ್ರೀಕರಣ ಬಹಳ ವೇಗವಾಗಿ ಸಾಗಿತು. ಎಪಿ ಅರ್ಜುನ್ ನಿರ್ದೇಶನದಲ್ಲಿ ಹಾಗೂ ಉದಯ್ ಮೆಹ್ತಾ ಅವರು ನಿರ್ಮಾಣ ಮಾಡುತ್ತಿರುವ ಈ ಸಿನಿಮಾ, ಪಕ್ಕಾ ಆಕ್ಷನ್ ಎಂಟರ್ಟೈನರ್ ಆಗಿರಲಿದೆ. ಜೊತೆಗೆ ಸಿನಿಮಾದಲ್ಲಿ ದೇಶಭಕ್ತಿಯ ಅಂಶ ಸಹ ಇದೆ ಎನ್ನಲಾಗಿದೆ. ಮಾರ್ಟಿನ್ ಸಿನಿಮಾಗಾಗಿ ಅದ್ಭುತವಾಗಿ ಬಾಡಿ ಬಿಲ್ಡ್ ಮಾಡಿದ್ದಾರೆ ಧ್ರುವ.ಇನ್ನು ಮಾರ್ಟಿನ್ ಸಿನಿಮಾ ತಂಡ ಕಾಶ್ಮೀರದಲ್ಲಿ ಸಹ ಚಿತ್ರೀಕರಣ ಮಾಡಿ ಬಂದಿದೆ. 70% ಚಿತ್ರೀಕರಣ ಮುಗಿದಿದ್ದು, ಇನ್ನು ಕೆಲವು ಟಾಕಿ ಚಿತ್ರೀಕರಣವನ್ನು ಜೂನ್ ತಿಂಗಳ ಒಳಗೆ ಮುಗಿಸುವ ಪ್ಲಾನ್ ಮಾಡಿದೆ ಚಿತ್ರತಂಡ. ಧ್ರುವ ಸರ್ಜಾ ಅವರ ಅಭಿಮಾನಿಗಳಿಗೆ ಮಾರ್ಟಿನ್ ಸಿನಿಮಾ ದೊಡ್ಡ ಟ್ರೀಟ್ ಆಗಿರಲಿದೆಯಂತೆ.
ಅದ್ಧೂರಿಯಾಗಿ ಸಾಗುತ್ತಿದೆ ಮಾರ್ಟಿನ್ ಸಿನಿಮಾ ಚಿತ್ರೀಕರಣ. ಇದೀಗ ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಇಂಟ್ರೊಡಕ್ಷನ್ ದೃಶ್ಯಕ್ಕೆ ಬರೋಬ್ಬರಿ ಐದೂವರೆ ಕೋಟಿ ರೂಪಾಯಿ ಹಣ ಖರ್ಚು ಮಾಡಲಾಗಿದೆ. ಇದು ಅಭಿಮಾನಿಗಳ ಹುಬ್ಬೇರುವಂತೆ ಮಾಡಿದೆ. ಈ ಹಿಂದೆ ಸಹ ಮಾರ್ಟಿನ್ ಸಿನಿಮಾದ ಚೇಸಿಂಗ್ ದೃಶ್ಯಕ್ಕೆ ಮೂರೂವರೆ ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಇದೀಗ ಇಂಟ್ರೊಡಕ್ಷನ್ ದೃಶ್ಯಕ್ಕೆ ಖರ್ಚು ಮಾಡಿರುವ ಮೊತ್ತದ ವಿಚಾರ ಭಾರಿ ಸದ್ದು ಮಾಡುತ್ತಿದೆ. ಮಾರ್ಟಿನ್ ಸಿನಿಮಾ ಬಹಳ ರಿಚ್ ಆಗಿ ಮೂಡಿಬರಲಿದ್ದು, ಅಭಿಮಾನಿಗಳಿಗೆ ವಿಷುವಲ್ ಟ್ರೀಟ್ ಆಗಿರಲಿದೆಯಂತೆ. ಧ್ರುವ ಸರ್ಜಾ ಅವರನ್ನು ಮಾರ್ಟಿನ್ ಅವತಾರದಲ್ಲಿ ನೋಡಲು ಅವರ ವಿಐಪಿಗಳು ಕಾತುರರಾಗಿ ಕಾಯುತ್ತಿದ್ದಾರೆ. ಮಾರ್ಟಿನ್ ಸಿನಿಮಾ ಈ ವರ್ಷಾಂತ್ಯಕ್ಕೆ ಅಥವಾ ಸೆಪ್ಟೆಂಬರ್ 30ರಂದು ಬಿಡುಗಡೆ ಆಗುವುದು ಪಕ್ಕಾ ಎನ್ನಲಾಗುತ್ತಿದೆ.
Comments are closed.