ಬಿಗ್ ನ್ಯೂಸ್: ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಏರ್ಟೆಲ್, ಡೇಟಾ, ಅಮೆಜಾನ್ ಪ್ರೈಮ್ ಎಲ್ಲವೂ ಒಂದೇ ಪ್ಯಾಕ್ ನಲ್ಲಿ. ಯಾವ ಪ್ಯಾಕ್ ಗೊತ್ತೇ?
ಪ್ರಸ್ತುತ ಇರುವ ಟೆಲಿಕಾಂ ಕಂಪೆನಿಗಳಲ್ಲಿ ಜಿಯೋ ಅಗ್ರಸ್ಥಾನದಲ್ಲಿದೆ. ಗ್ರಾಹಕರಿಗೆ ಸರಿಹೊಂದುವಂತಹ ಪ್ಲಾನ್ ಗಳು ಹಾಗೂ ಹೈ ಸ್ಪೀಡ್ ಇಂಟರ್ನೆಟ್ ಕೊಡುವ ಮೂಲಕ ಜಿಯೋ ಸಂಸ್ಥೆ ಅಗ್ರಸ್ಥಾನದಲ್ಲಿದೆ. ಜಿಯೋ ಸಂಸ್ಥೆಗೆ ಒಳ್ಳೆಯ ಕಾಂಪಿಟೇಶನ್ ಕೊಡುತ್ತಿರುವುದು ಏರ್ಟೆಲ್ ಸಂಸ್ಥೆ. ಭಾರತಿ ಏರ್ಟೆಲ್ ಸಂಸ್ಥೆ ಸಹ ಒಳ್ಳೆಯ ಪ್ಲಾನ್ ಗಳನ್ನು ಗ್ರಹಕರಿಗಾಗಿ ತಂದಿದ್ದು, ಇದರಿಂದಾಗಿ ಏರ್ಟೆಲ್ ಯೂಸರ್ ಗಳಿಗೆ ಉಪಯೋಗ ಆಗುವುದು ಖಂಡಿತ. ಈ ಹೊಸ ಪ್ಲಾನ್ ಹೇಗಿದೆ? ಯಾವುದು ತಿಳಿಸುತ್ತೇವೆ ನೋಡಿ..
ಏರ್ಟೆಲ್ ತಂದಿರುವ 999 ರೂಪಾಯಿಯ ಹೊಸ ಪ್ಲಾನ್ ಇದು. ಇದರಲ್ಲಿ ಗ್ರಾಹಕರಿಗೆ ಬಂಪರ್ ಆಫರ್ ಗಳನ್ನು ತಂದಿದೆ ಏರ್ಟೆಲ್. ಪ್ರೀಪೇಯ್ಡ್ ಪ್ಲಾನ್ ನ ವ್ಯಾಲಿಡಿಟಿ 84 ದಿನಗಳು. ಇಷ್ಟು ದಿನಗಳ ಕಾಲ ಉಚಿತ ಅನಿಯಮಿತ ವಾಯ್ಸ್ ಕರೆಗಳು,ಪ್ರತಿದಿನ ಉಚಿತವಾದ 100 ಎಸ್.ಎಂ.ಎಸ್ ಗಳ ಸೌಲಬ್ಯ ಸಿಗಲಿದೆ. ಹಾಗೂ ಪ್ರತಿದಿನ 2.5ಜಿಬಿ ಫ್ರೀ ಡೇಟಾ ಸಿಗಲಿದೆ. ಇದಲ್ಲದೆ ಒಂದು ತಿಂಗಳು ಅಮೆಜಾನ್ ಪ್ರೈಮ್ ಸಬ್ಸ್ಕ್ರಿಪ್ಶನ್ ಸಹ ಸಿಗಲಿದೆ. ಜೊತೆಗೆ ಏರ್ಟೆಲ್ ವಿಂಕ್ ಮ್ಯೂಸಿಕ್, ಹಲೋ ಟ್ಯುನ್ಸ್, 100 ರೂಪಯಿಯ ಫಾಸ್ಟ್ ಟ್ಯಾಗ್ ಕ್ಯಾಶ್ ಬ್ಯಾಕ್ ಸಹ ಸಿಗಲಿದೆ.
ಇನ್ನು 699 ರೂಪಾಯಿಯ ಮತ್ತೊಂದು ಪ್ಲಾನ್ ಹೊರತಂದಿದೆ ಏರ್ಟೆಲ್. ಇದರ ವ್ಯಾಲಿಡಿಟಿ 56 ದಿನಗಳು. ಈ ಪ್ಲಾನ್ ನಲ್ಲಿ 56 ದಿನಗಳ ವರೆಗೆ ಅನಿಯಮಿತ ವಾಯ್ಸ್ ಕರೆಗಳು ಸಿಗಲಿದೆ. ಹಾಗೂ ಪ್ರತಿದಿನ 3ಜಿಬಿ ಡೇಟಾ ಸಿಗಲಿದೆ. ಪ್ರತಿದಿನ 100 ಉಚಿತ ಎಸ್.ಎಂ.ಎಸ್ ಗಳು, ಜೊತೆಗೆ ಅಮೆಜಾನ್ ಪ್ರೈಮ್ ಸದಸ್ಯತ್ವ , ಏರ್ಟೆಲ್ ಎಕ್ಸ್ಟ್ರೀಮ್ ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫ್ಯಾಟ್ಸ್ಯಾಗ್ ಕ್ಯಾಶ್ ಬ್ಯಾಕ್ ಸೇವೆಗಳು ಸಹ ಸಿಗಲಿದೆ. ಮತ್ತೊಂದು 265 ರೂಪಾಯಿಯ ಪ್ಲಾನ್ ಆಗಿದೆ, ಇದರ ವ್ಯಾಲಿಡಿಟಿ 28 ದಿನಗಳು. ಅನಿಯಮಿತ ಕರೆಗಳು, ಪ್ರತಿದಿನ 100 ಎಸ್.ಎಂ.ಎಸ್ ಗಳು ಹಾಗೂ ಪ್ರತಿದಿನ 1ಜಿಬಿ ಡೇಟಾ ಸಿಗಲಿದೆ. ಇದರಲ್ಲಿ ಸಹ ಒಂದು ತಿಂಗಳ ವರೆಗೆ ಅಮೆಜಾನ್ ಪ್ರೈಮ್ ಸೇವೆ ಸಿಗಲಿದೆ. ಏರ್ಟೆಲ್ ಹೊರತಂದಿರುವ ಮತ್ತೊಂದು ಹೊಸ ಪ್ಲಾನ್, 299 ರೂಪಾಯಿಯ ಪ್ಲಾನ್, ಇದರ ವ್ಯಾಲಿಡಿಟಿ 28 ದಿನಗಳ ಕಾಲ ಇರಲಿದ್ದು, ಪ್ರತಿದಿನ 1.5ಜಿಬಿ ಡೇಟಾ ಫ್ರೀ ಸಿಗಲಿದೆ. ಹಾಗೂ ಅನಿಯಮಿತ ವಾಯ್ಸ್ ಕರೆಗಳು, ಪ್ರತಿದಿನ 100 ಉಚಿತ ಎಸ್.ಎಂ.ಎಸ್ ಹಾಗೂ ಇದರ ಜೊತೆಗೆ ವಿಂಕ್ ಮ್ಯೂಸಿಕ್, ಹಲೋ ಟ್ಯೂನ್ ಹಾಗೂ ಫಾಸ್ಟ್ಯಾಗ್ ಕ್ಯಾಶ್ ಬ್ಯಾಕ್ ಸಿಗಲಿದೆ.
Comments are closed.