ವಾರಣಾಸಿ ಜ್ಞಾನವಾಪಿ ಮಸೀದಿ ಸರ್ವೇ ನಂತರ ಇದೀಗ ಮಥುರಾ ಸರದಿ, ಕೃಷ್ಣನ ದೇಗುಲಕ್ಕಾಗಿ ಮಾಡಲು ಹೊರಟಿರುವುದಾದರೂ ಏನು ಗೊತ್ತೇ??
ವಾರಣಾಸಿಯ ಕಾಶಿ ವಿಶ್ವನಾಥ ದೇಗುಲ ಜ್ಞಾನವ್ಯಾಪಿ ಮಸೀದಿ ಸಂಕೀರ್ಣ ವಿವಾದ ಇನ್ನು ಮುಗಿದಿಲ್ಲ, ಅದಾಗಲೇ ಈಗ ಮಥುರಾದಲ್ಲಿ ಹೊಸದೊಂದು ವಿಚಾರ ಶುರುವಾಗಿದೆ. ಶ್ರೀಕೃಷ್ಣ ಜನ್ಮಭೂಮಿಯ ಪಕ್ಕ ಇರುವ ಈದ್ಗಾ ಮಸೀದಿಯ ವಿಡಿಯೋಗ್ರಾಫಿ ಮಾಡಬೇಕು ಎಂದು ಕೋರ್ಟಿ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಮಸೀದಿ. ಇರುವ ಸ್ಥಳದ ಆವರಣದಲ್ಲಿ, ಹಿಂದೂ ಧರ್ಮಕ್ಕೆ ಸೇರಿದ ಶಾಸನಗಳು ಪುರಾತನ ಧಾರ್ಮಿಕ ಕಲಾಕೃತಿಗಳು ಸಹ ಸಿಕ್ಕಿದ್ದು, ಇದರಿಂದಾಗಿ ಅಲ್ಲಿನ ಅಸ್ತಿತ್ವವನ್ನು ಪರಿಶೀಲನೆ ಮಾಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮಸೀದಿ ಇರುವ ಜಮೀನಿನ ಮೌಲ್ಯಮಾಪನವಾಗಲು ವಕೀಲರನ್ನು ನೇಮಿಸಿ ಎಂದು ಕೋರ್ಟ್ ಮೊರೆ ಹೋಗಿದ್ದಾರೆ.
ಕಾಶಿ ದೇವಸ್ಥಾನ ಮತ್ತು ಮಸೀದಿಯ ವಿವಾದದ ಎಲ್ಲಾ ಪ್ರಕರಣಗಳನ್ನು ನಾಲ್ಕು ತಿಂಗಳ ಒಳಗೆ ಎಲ್ಲಾ ರಿಪೋರ್ಟ್ ನೀಡಬೇಕು ಎಂದು ಕೋರ್ಟ್ ತೀರ್ಪು ನೀಡಿದ ಮರುದಿನವೇ, ಮಥುರಾ ಮತ್ತು ಈದ್ಗಾ ಮಸೀದಿಯ ವಿಚಾರವಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಮೇ 12ರಂದು, ಭಗವಾನ್ ಶ್ರೀ ಕೃಷ್ಣ ವಿರಾಜಮಾನ್ ಎನ್ನುವವರು ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ನಾಲ್ಕು ತಿಂಗಳ ಒಳಗೆ ತೀರ್ಮಾನಿಸುವುದಾಗಿ ಮಥುರಾ ಕೋರ್ಟ್ ಸೂಚನೆ ನೀಡಿದೆ. “ಪ್ರಕರಣದ ನಿರ್ವಹಣೆ ಹಾಗೂ ಅರ್ಜಿದಾರರು ಪ್ರತಿಪಾದಿಸಿರುವ ಹಕ್ಕುಗಳ ಅರ್ಹತೆ ಬಗ್ಗೆ ನ್ಯಾಯಾಲಯ ಅಭಿಪ್ರಯವನ್ನು ವ್ಯಕ್ತಪಡಿಸಿಲ್ಲ..” ಎಂದು ಕೋರ್ಟ್ ತಿಳಿಸಿದೆ.
ಇದೇ ವಿಚಾರವಾಗಿ ಈ ಹಿಂದೆ ಮನೀಶ್ ಯಾದವ್ ಎನ್ನುವವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು, ಮನೀಶ್ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ, “ಶಾಹಿ ಈದ್ಗಾ ಮಸೀದಿಯಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಅವಶೇಷಗಳು ಕಾಣಸಿಕ್ಕಿರುವ ಕಾರಣ, ಈಗಲೇ ವಿಡಿಯೋ ಸರ್ವೇ ಮಾಡಬೇಕು. ಹಾಗಾಗಿ ಈ ವಿಚಾರವಾಗಿ ಹಿರಿಯ ವಕೀಲರನ್ನು ನೇಮಕ ಮಾಡುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೇವೆ. ವಿರೋಧಿಗಳು ಸಾಕ್ಷಿ ನಾಶ ಪಡಿಸುವ ಪ್ರಯತ್ನ ಮಾಡಬಹುದು. ಹಾಗಾಗಿ ನ್ಯಾಯಾಲಯವು ಜುಲೈ 1ರಂದು ನನ್ನ ಅರ್ಜಿಯ ಬಗ್ಗೆ ಪ್ರಸ್ತಾಪ ಮಾಡಬಹುದು. ಭಾರತೀಯ ಪುರಾತತ್ವ ಇಲಾಖೆಯಿಂದ, ಆ ಸ್ಥಳದ ಸರ್ವೇ ಮಾಡುವಂತೆ ಹಾಗೂ ವಿವಾದವಾಗಿರುವ ಆ ಸ್ಥಳದಲ್ಲಿ ಯಾವುದೇ ಕಾಮಗಾರಿ ಕೆಲಸ ನಡೆಯದಂತೆ, ಕೋರಿ ಹೈಕೋರ್ಟ್ ಮೆಟ್ಟಿಲು ಹತ್ತಿದ್ದೇವೆ..” ಎಂದು ತಿಳಿಸಿದ್ದಾರೆ..
Comments are closed.