ನಟಿ ಚೇತನ ರವರ ಕುರಿತು ಮಾತನಾಡಿ ಅಸಲಿ ಕಥೆ ಬಿಚ್ಚಿಟ್ಟ ಖ್ಯಾತ ನಟಿ ನೀತು, ಇದಕ್ಕೂ ಅವರಿಗೆ ಅದೇಗೆ ಸಂಬಂಧ ಗೊತ್ತೇ??
ನಿನ್ನೆಯಿಂದ ಕನ್ನಡ ಕಿರುತೆರೆಯಲ್ಲಿ ನಟಿ ಚೇತನಾ ರಾವ್ ಇನ್ನಿಲ್ಲವಾದ ವಿಚಾರ ಬಹಳ ಚರ್ಚೆಯಾಗುತ್ತಿದೆ. ದಪ್ಪಗಿದ್ದ ಕಾರಣ ಸಣ್ಣವಾಗಲು ಈ ನಟಿ ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಈಗ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ಈ ಕಾಸ್ಮೆಟಿಕ್ ಸರ್ಜರಿ ಎನ್ನುವುದು ಕಾಮನ್ ಎನ್ನುವ ಹಾಗೆ ಆಗಿಬಿಟ್ಟಿದೆ. ಆದರೆ ಇದು ಈಗಿನ ದಿನಗಳಲ್ಲಿ ಒಂದು ದಂಧೆ ರೀತಿ ಆಗಿದೆ ಎಂದರೆ ತಪ್ಪಾಗುವುದಿಲ್ಲ. ಕಾಸ್ಮೆಟಿಕ್ ಆಸ್ಪತ್ರೆಗಳು ಕಲಾವಿದರ ತಲೆ ಕೆಡಿಸುತ್ತಾರೆ. ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿರುವವರ ಉದಾಹರಣೆ ಕೊಟ್ಟು, ಅವರಿಗೂ ನಾವೇ ಸರ್ಜರಿ ಮಾಡಿದ್ದು ಎಂದೆಲ್ಲಾ ಹೇಳಿ, ಕಲಾವಿದರು ಮಾತುಗಳಿಗೆ ಮಾರು ಹೋಗುವ ಹಾಗೆ ಮಾಡುತ್ತಾರೆ.
ಚೇತನಾ ಅವರ ವಿಚಾರದಲ್ಲಿ ಹಾಗೆ ಆಯಿತು. ಸಣ್ಣ ಆಗಬೇಕು, ಬಣ್ಣದ ಪ್ರಪಂಚದಲ್ಲಿ ನಟಿಯಾಗಿ ಸಾಧನೆ ಮಾಡಬೇಕು ಎಂದು ಕನಸು ಕಟ್ಟಿಕೊಂಡು, ಸಣ್ಣ ಆಗಲು, ತಂದೆ ತಾಯಿಗೂ ಹೇಳದೆ ಫ್ಯಾಟ್ ಸರ್ಜರಿ ಮಾಡಿಸ್ಕೊಳ್ಳಲು ಹೋದ ಚೇತನಾ, ಸರ್ಜರಿಯಾದ ಬಳಿಕ ಶ್ವಾಸಕೋಶದಲ್ಲಿ ನೀರು ಸೇರಿಕೊಂಡ ಕಾರಣ, ಸರಿಯಾದ ಚಿಕಿತ್ಸೆ ಸಿಗದೆ, ವೈದ್ಯರ ನಿರ್ಲಕ್ಷ್ಯದಿಂದ ಪ್ರಾಣ ಬಿಟ್ಟರು. ಈಗ ಚೇತನಾ ತಂದೆ ತಾಯಿ ಕಣ್ಣೀರು ಹಾಕುತ್ತಾ ಕೂರುವ ಹಾಗೆ ಆಗಿದೆ. ಇದೀಗ ಚೇತನಾ ಅವರಿಗ ನಡೆದ ಈ ಘಟನೆ ಬಗ್ಗೆ ನಟಿ ನೀತು ಅವರು ಪ್ರತಿಕ್ರಿಯೆ ನೀಡಿದ್ದಾರೆ. ನೀತು ಅವರು ಕೂಡ ಈ ಹಿಂದೆ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡವರು. ಹಾಗಾಗಿ ಈ ವಿಚಾರದ ಬಗ್ಗೆ ಅವರು ಸಹ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಯುವನಟಿಯೊಬ್ಬರು ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ನಿಜಕ್ಕೂ ಬಹಳ ನೋವಿನ ವಿಚಾರ. ನಾನು ಕೂಡ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದೆ, ಆದರೆ ನನಗೆ ವರ್ಕ್ ಆಗಲಿಲ್ಲ. ಆಸ್ಪತ್ರೆಗೆ ಹೋಗಿ, ನಾವಿರುವ ಆಕಾರ ನಮಗೆ ಇಷ್ಟವಾಗದೆ, ಬೈಕೊಂಡು ಆಸ್ಪತ್ರೆಯಲ್ಲಿ ಮಲಗಿ ಆಪರೇಷನ್ ಮಾಡಿಸಿಕೊಳ್ಳುವುದು ವರ್ತ್ ಅಲ್ಲ. ವಿಜ್ಞಾನ, ವೈದ್ಯಕೀಯದ ಮೇಲೆ ನನಗೂ ನಂಬಿಕೆ ಇದೆ. ಆದರೆ ಇದು ವರ್ತ್ ಅಲ್ಲ ಎಂದು ನನಗೆ ಅನ್ನಿಸುತ್ತದೆ. ಚಿತ್ರರಂಗದಲ್ಲಿ ಹೀಗೆಯೇ ಇರಬೇಕು ಎಂದು ಹಾಕಿರುವ ಕಟ್ಟುಪಾಡಿನಿಂದ ಇಂತಹ ಘಟನೆಗಳು ನಡೆಯುತ್ತಿವೆ. ಮೊದಲಿಗೆ ನಾವು ಚೆನ್ನಾಗಿರಬೇಕು. ನಾವೇ ಚೆನ್ನಾಗಿರದಿದ್ದರೆ, ಏನು ಚೆನ್ನಾಗಿ ಇರುವುದಿಲ್ಲ. ಮಗಳನ್ನು ಕಳೆದುಕೊಂಡು ಆ ತಾಯಿ ಕಣ್ಣೀರು ಹಾಕುವ ಹಾಗೆ ಆಗಿದ್ದು, ಎಷ್ಟು ಸರಿ. ಯಾರು ಈ ರೀತಿ ಮಾಡಬಾರು.. ಎಂದು ಚೇತನಾ ಅವರಿಗೆ ನಡೆದ ಘಟನೆ ಬಗ್ಗೆ ಮಾತನಾಡಿದ್ದಾರೆ ನಟಿ ನೀತು..
Comments are closed.