ಸಿನಿಮಾ ಮಾಡು ಎಂದು ಅಲ್ಲೂ ಅರ್ಜುನ್ ಗೆ ತಮಿಳು ನಿರ್ದೇಶಕ ಅಟ್ಲೀ ಕೇಳಿದ ಸಂಭಾವನೆ ಕಂಡು ಶಾಕ್ ಆಗಿ ಸಿನಿಮಾ ಬೇಡ ಎಂದ ಅಲ್ಲೂ, ಎಷ್ಟು ಕೋಟಿ ಬೇಕಂತೆ ಗೊತ್ತೇ??
ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಿರ್ದೇಶಕ ಅಟ್ಲಿ ಕುಮಾರ್, ರಾಜ ರಾಣಿ ಸಿನಿಮಾ ಮೂಲಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಟ್ಲಿ, ಮೊದಲ ಸಿನಿಮಾದಲ್ಲಿ ಬಿಗ್ ಬ್ಲಾಕ್ ಬಸ್ಟರ್ ನೀಡಿ ಯಶಸ್ಸು ಪಡೆದುಕೊಂಡರು. ರಾಜ ರಾಣಿ ಸಿನಿಮಾ ಎಲ್ಲಾ ಯೂತ್ ಗಳಿಗೂ ಬಹಳ ಕನೆಕ್ಟ್ ಆಗಿತ್ತು. ಅದಾದ ಬಳಿಕ ಅಟ್ಲಿ ಅವರು ಥೆರಿ, ಮೆರ್ಸಲ್ ಮತ್ತು ಬಿಗಿಲ್ ಸಿನಿಮಾ ನಿರ್ದೇಶಿಸಿ ಯಶಸ್ಸಿನ ಪಯಣವನ್ನು ಮುಂದುವರೆಸಿದರು. ಈ ಯಶಸ್ಸುಗಳಿಂದ ಅಟ್ಲಿ ಅವರಿಗೆ ಬಿಗ್ ಆಫರ್ ಗಳು ಬರುತ್ತಿವೆ. ಅಟ್ಲಿ ಅವರು ಪ್ರಸ್ತುತ ಬಾಲಿವುಡ್ ಬಾದ್ ಶಾ ಅವರಿಗೆ ಸಿನಿಮಾ ಮಾಡುತ್ತಿದ್ದಾರೆ. ಅಟ್ಲಿ ಸಿನಿಮಾ ಯಶಸ್ಸನ್ನು ನೋಡಿ, ಶಾರುಖ್ ಖಾನ್ ಅವರೇ ಕರೆದು ತಮಗೊಂದು ಸಿನಿಮಾ ನಿರ್ದೇಶನ ಮಾಡುವ ಅವಕಾಶ ಕೊಟ್ಟರಂತೆ.
ಶಾರುಖ್ ಖಾನ್ ಅವರಿಗೆ ಅಟ್ಲಿ ನಿರ್ದೇಶನ ಮಾಡುತ್ತಿರುವ ಸಿನಿಮಾಗೆ ಪ್ರಸ್ತುತ ಲಯನ್ ಎಂದು ಹೆಸರು ಇಡಳಾಗಿದ್ದು, ಇದರಲ್ಲಿ ನಯನತಾರ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಶಾರುಖ್ ಖಾನ್ ಅವರು ದ್ವಿಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದ್ದು, ನಯನತಾರಾ ಅವರು ತನಿಖಾಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಶಾರುಖ್ ಖಾನ್ ಅವರು ಮಾತ್ರವಲ್ಲದೆ, ಟಾಲಿವುಡ್ ನ ಐಕಾಣಿಕ್ ಸ್ಟಾರ್ ಅಲ್ಲು ಅರ್ಜುನ್ ಅವರು ಸಹ ಅಟ್ಲಿ ಅವರೊಡನೆ ಒಂದು ಸಿನಿಮಾ ಮಾಡುವ ಪ್ಲಾನ್ ನಲ್ಲಿದ್ದರು. ಲೈಕಾ ಪ್ರೊಡಕ್ಷನ್ ಅಲ್ಲು ಅರ್ಜುನ್ ಅವರಿಗೆ ಸಿನಿಮಾ ಮಾಡಲು ರೆಡಿ ಇತ್ತು, ಆ ಸಿನಿಮಾವನ್ನು ಅಟ್ಲಿ ನಿರ್ದೇಶನ ಮಾಡಲಿ ಎಂದು ಪ್ಲಾನ್ ಮಾಡಿದ್ದ ಅಲ್ಲು ಅರ್ಜುನ್ ಅವರು ಅಟ್ಲಿ ಅವರ ಜೊತೆ ಒಂದು ಬಾರಿ ಮಾತುಕತೆ ನಡೆಸಿದ್ದರು ಎನ್ನಲಾಗಿದ್ದು, ಅಟ್ಲಿ ಅವರು ಡಿಮ್ಯಾಂಡ್ ಮಾಡಿದ ಸಂಭಾವನೆಯ ಮೊತ್ತ ನೋಡಿ, ಅಲ್ಲು ಅರ್ಜುನ್ ಅವರಿಗೆ ಶಾಕ್ ಆಯಿತಂತೆ.
ಅಲ್ಲು ಅರ್ಜುನ್ ಅವರಿಗೆ ಸಿನಿಮಾ ಮಾಡಲು ಬರೋಬ್ಬರಿ 35ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ರಂತೆ ಅಟ್ಲಿ, ಇಷ್ಟು ದುಬಾರಿ ಸಂಭಾವನೆ ಬೇಡಿಕೆ ಇಟ್ಟಿದ್ದಕ್ಕೆ ಶಾಕ್ ಆದ ಅಲ್ಲು ಅರ್ಜುನ್ ಅವರು, ಆ ಸಿನಿಮಾವನ್ನು ರದ್ದು ಮಾಡಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಕೇಳಿ ಬರುತ್ತಿದೆ. ಪುಷ್ಪ ಸಿನಿಮಾ ಸಕ್ಸಸ್ ಬಳಿಕ ಅಲ್ಲು ಅರ್ಜುನ್ ಅವರ ಸಂಭಾವನೆ ಸಹ ದುಬಾರಿಯಾಗಿದೆ. ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡಲಿರುವ ಸಿನಿಮಾಗೆ ಅಲ್ಲು ಅರ್ಜುನ್ ಅವರಿಗೆ 100 ಕೋಟಿ ಸಂಭಾವನೆ ನೀಡಲು ರೆಡಿ ಇದೆಯಂತೆ. ಆದರೆ ಸಧ್ಯಕ್ಕೆ ಆಗಿರುವ ಬದಲಾವಣೆ ನೋಡಿದರೆ, ಈ ಸಿನಿಮಾ ಶುರುವಾಗುತ್ತೋ ಇಲ್ಲವೋ ಎಂದು ಡೌಟ್ ಇದ್ದು, ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.
Comments are closed.