ಜ್ಯೋತಿಷ್ಯ ಶಾಸ್ರದ ಪ್ರಕಾರ ವಿಚಿತ್ರವಾದ ಲಕ್ಷಣಗಳನ್ನು ಹೊಂದಿರುವ ನಾಲ್ಕು ರಾಶಿಯ ಜನರು ಯಾರ್ಯಾರು ಗೊತ್ತೇ?? ಹೇಗೆಲ್ಲ ಇರುತ್ತಾರೆ ಗೊತ್ತೇ??
ಪ್ರತಿಯೊಬ್ಬ ಮನುಷ್ಯನಿಗೆ ವಿಭಿನ್ನವಾದ ಗುಣ ಸ್ವಭಾವಗಳು ಇರುತ್ತವೆ. ಕೆಲವು ಮನುಷ್ಯರು ತಮ್ಮ ಉತ್ತಮವಾದ ಗುಣದಿಂದ ಮನುಷ್ಯರನ್ನು ಆಕರ್ಷಿಸಿದರೆ, ಇನ್ನು ಕೆಲವರು ಯಮ್ಮ ಸೌಂದರ್ಯದಿಂದ ಮನುಷ್ಯರನ್ನು ಆಕರ್ಷಿಸುತ್ತಾರೆ. ಮತ್ತು ಕೆಲವರು ತಾವು ಮಾತನಾಡುವ ಶೈಲಿಯಿಂದ ಜನರನ್ನು ಆಕರ್ಷಿಸುತ್ತಾರೆ. ಕೆಲವು ಜನರು ಮಾತನಾಡುವ ಶೈಲಿ ಎಷ್ಟು ಅದ್ಭುತವಾಗಿ ಇರುತ್ತದೆ ಅಂದ್ರೆ, ಮಾತಿನ ಮೂಲಕವೇ ಎಲ್ಲರನ್ನು ತಮ್ಮತ್ತ ಸೆಳೆದುಕೊಳ್ಳುವ ಅದ್ವಿತೀಯ ಗುಣ ಇವರಲ್ಲಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಗುಣ 4 ರಾಶಿಗಳಲ್ಲಿ ಇದ್ದು, ಹೀಗೆ ಮಾತಿನ ಮೂಲಕ ಜನರನ್ನು ಸೆಳೆಯುವ ಆ ನಾಲ್ಕು ರಾಶಿಗಳು ಯಾವುವು ಗೊತ್ತಾ? ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಈ ರಾಶಿಯವರು ಮಾತನಾಡುವ ಶೈಲಿ ಬಹಳ ವಿಭಿನ್ನವಾಗಿರುತ್ತದೆ. ತಾವು ಮಾತನಾಡುವ ಶೈಲಿಯಿಂದ ಯಾರನ್ನಾದರೂ ಮಂತ್ರಮುಗ್ಧವಾಗುವ ಹಾಗೆ ಮಾಡಿಬಿಡುತ್ತಾರೆ. ಇವರು ಮಾತನಾಡುವ ಶೈಲಿ ಅಷ್ಟು ಆಕರ್ಷಕವಾಗಿರುತ್ತದೆ. ಹಾಸ್ಯಪ್ರಜ್ಞೆಯಲ್ಲಿ ಸಹ ಇವರು ಎತ್ತಿದ ಕೈ. ತಾವು ಸಂತೋಷವಾಗಿದ್ದು, ತಮ್ಮ ಸುತ್ತ ಇರುವವರು ಸಹ ಸಂತೋಷವಾಗಿರಬೇಕು ಎಂದು ಇವರು ಬಯಸುತ್ತಾರೆ. ಇವರು ಮಾತನಾಡುವ ಶೈಲಿಯನ್ನು ಜನರು ತುಂಬಾ ಇಷ್ಟಪಡುತ್ತಾರೆ.
ವೃಶ್ಚಿಕ ರಾಶಿ :- ಈ ರಾಶಿಯವರು ಮಾತನಾಡುವ ರೀತಿ ಸಹ ಬಹಳ ಉತ್ತಮವಾಗಿ ಮತ್ತು ವಿಭಿನ್ನವಾಗಿರುತ್ತದೆ. ಮಾತಿನ ಮೂಲಕ ಇವರು ಬಹಳ ದೂರ ಹೋಗುತ್ತಾರೆ. ಈ ರಾಶಿಯವರ ಹಾಸ್ಯ ಪ್ರಜ್ಞೆ ಅದ್ಭುತವಾಗಿರುತ್ತದೆ ಹಾಗೆಯೇ ಯಾವುದೇ ಒಂದು ವಿಚಾರಕ್ಕೆ ಇವರ ಜೊತೆಗೆ ವಾದಕ್ಕೆ ಇಳಿದರೆ, ಇವರನ್ನು ಸೋಲಿಸಲು ಆಗುವುದಿಲ್ಲ. ಇವರ ಬುದ್ಧಿ ಬಹಳ ತೀಕ್ಷ್ಣವಾದದ್ದು. ಮತ್ತೊಬ್ಬರ ಮನಸ್ಸಿನಿಂದ ಮಾತುಗಳನ್ನು ಹೊರಹಾಕುವ ಕೆಲಸ ಇವರಿಗೆ ಚೆನ್ನಾಗಿ ಬರುತ್ತದೆ.
ಸಿಂಹ ರಾಶಿ :- ಈ ರಾಶಿಯವರು ಬುದ್ಧಿವಂತರು, ಚತುರರು ಆಗುವುದರ ಜೊತೆಗೆ ಕುತಂತ್ರಿಗಳು ಸಹ ಹೌದು. ಇವರಲ್ಲಿ ಉತ್ತಮವಾದ ಹಾಸ್ಯಪ್ರಜ್ಞೆ ಇದೆ. ಇವರು ಮಾತನಾಡುವ ವಿಚಾರಗಳು ಯಾರನ್ನೇ ಆದರೂ ತಮ್ಮ ಕಡೆಗೆ ಆಕರ್ಷಿಸುತ್ತದೆ. ಈ ಸಮಾಜದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ.
ಧನು ರಾಶಿ :- ಈ ರಾಶಿಯವರನ್ನು ಬುದ್ಧಿವಂತರು ಎನ್ನುತ್ತಾರೆ. ಇವರು ಮಾತನಾಡಿ ಸಂವಹನ ನಡೆಸುವ ರೀತಿಯಿಂದ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆಯುತ್ತಾರೆ. ಇವರ ಹಾಸ್ಯಪ್ರಜ್ಞೆ ಉತ್ತಮವಾಗಿರುತ್ತದೆ. ಒಬ್ಬ ವ್ಯಕ್ತಿ ಇವರ ಮಾತುಗಳಿಂದ ಬಹಳ ಪ್ರಭಾವಕ್ಕೆ ಒಳಗಾಗುತ್ತಾರೆ.
Comments are closed.