Neer Dose Karnataka
Take a fresh look at your lifestyle.

ಮತ್ತಷ್ಟು ಆಫರ್ ಗಳನ್ನು ಘೋಷಣೆ ಮಾಡಿದ SBI: ಕಾರ್ ಕೊಳ್ಳಲು ಎಷ್ಟೆಲ್ಲ ಆಫರ್ ನೀಡುತ್ತಿದೆ ಗೊತ್ತೇ?? ಇಂದೇ ಕಾರು ಖರೀದಿ ಮಾಡಿದರೆ ಒಳ್ಳೆಯದೇ??

ಕಾರ್ ಖರೀದಿ ಮಾಡಬೇಕು ಎನ್ನುವುದು ಬಹುತೇಕ ಎಲ್ಲರ ಕನಸಾಗಿರುತ್ತದೆ. ಕೆಲವೊಮ್ಮೆ ಕಾರ್ ಕೊಂಡುಕೊಳ್ಳಲು ಪೂರ್ತಿ ಹಣ ಇಲ್ಲದೆ ಹೋದಾಗ ಜನರು ಬ್ಯಾಂಕ್ ಇಂದ ಕಾರ್ ಲೋನ್ ಪಡೆದು ಹೊಸ ಕಾರ್ ಕೊಂಡುಕೊಳ್ಳುತ್ತಾರೆ. ಗ್ರಾಹಕರಿಗೆ ಸರಿಹೊಂದುವ ಹಾಗೆ ಬ್ಯಾಂಕ್ ಗಳಲ್ಲಿ ಲೋನ್ ಗಳು ಸಹ ಸಿಗುತ್ತದೆ. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಕಾರ್ ಕೊಳ್ಳುವವರಿಗೆ ಅತ್ಯುತ್ತಮವಾದ ಸಾಲದ ಆಫರ್ ಒಂದನ್ನು ನೀಡಿದೆ. ಶೇ.100 ರಷ್ಟು ಹಣಕಾಸು ವಹಿವಾಟು ನೀಡಲಿದೆ ಎಸ್.ಬಿ.ಐ.

ಸಾಲ ಪಡೆದು ಕಾರ್ ಕೊಂಡುಕೊಳ್ಳಲು ಬಯಸುವ ಗ್ರಾಹಕರು ಡೌನ್ ಪೇಮೆಂಟ್ ಮಾಡಬೇಕಾಗುತ್ತದೆ. ಆ ಡೌನ್ ಪೇಮೆಂಟ್ ಹಣ ಎಷ್ಟಿರುತ್ತದೆ ಎಂದು ಬ್ಯಾಂಕ್ ಗಳು ಹಾಗೂ ಹಣಕಾಸಿನ ಕಂಪನಿಗಳು ನಿರ್ಧಾರ ಮಾಡುತ್ತದೆ. ಸಾಮಾನ್ಯವಾಗಿ ಶೇ.50, ಶೇ.70 ಹಾಗೂ ಶೇ.90ರಷ್ಟು ಹಣಕಾಸಿನ ಸೌಲಭ್ಯ. ಕೆಲವೊಮ್ಮೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಶೇ.100 ರಷ್ಟು ನೀಡುತ್ತದೆ. ಇದೀಗ ಎಸ್.ಬಿ.ಐ ಸಹ ಇಂತಹ ವಿಶೇಷವಾದ ಆಫರ್ ನೀಡುತ್ತಿದೆ. ಟಾಟಾ ಅಲ್ಟ್ರೋಸ್ ಕಡೆ ಕೊಂಡುಕೊಳ್ಳುವವರಿಗೆ ಶೇ.100 ಹಣಕಾಸು ನೀಡಲಿದೆ. ಈ ವಿಶೇಷವಾದ ಆಫರ್ ಟ್ವಿಟರ್ ಮೂಲಕ ಗ್ರಾಹಕರಿಗೆ ತಿಳಿಸಿದೆ ಎಸ್.ಬಿ.ಐ.

Tata Altroz ಕಾರ್ ಕೊಂಡುಕೊಳ್ಳುವ ಗ್ರಾಹಕರು Yono SBI App ಮೂಲಕ ಕಾರ್ ಬುಕ್ ಮಾಡಬೇಕಾಗುತ್ತದೆ. ಎಸ್.ಬಿ.ಐ ಗೈಡ್ ಲೈನ್ಸ್ ಪ್ರಕಾರ, Yono SBI App ಇಂದ ಕಾರ್ ಬುಕ್ ಮಾಡಿದರೆ, ಶೇ.100 ಹಣಕಾಸು ಸಿಗುವುದರ ಜೊತೆಗೆ ₹3000 ರೂಪಾಯಿ ಹೆಚ್ಚುವರಿ ಹಣ ಸಹ ಸಿಗುತ್ತದೆ. ಹಾಗು ಕಾರ್ ಲೋನ್ ನ ಬಡ್ಡಿ ದರ ಶೇ.7.35 ಇಂದ ಶುರುವಾಗುತ್ತದೆ. ಬಹಳ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಇಂತಹ ಆಫರ್ ಗಳನ್ನು ಬ್ಯಾಂಕ್ ಗಳ್ಚ್ ನೀಡುತ್ತವೆ. ಹಾಗಾಗಿ ಕಾರ್ ಕೊಂಡುಕೊಳ್ಳುವ ಯೋಜನೆ ಇದ್ದರೆ ತಪ್ಪದೇ ಇಜ್ದೆ ಕಾರ್ ಬುಕ್ ಮಾಡಿ.

Comments are closed.