Neer Dose Karnataka
Take a fresh look at your lifestyle.

ಸರ್ಜರಿ ಮಾಡಿಕೊಂಡು ತಮ್ಮನ್ನು ತಾವೇ ಅಪಾಯಕ್ಕೆ ಸಿಲುಕಿಸಿಕೊಂಡ ಟಾಪ್ ಸೆಲೆಬ್ರೆಟಿಗಳು ಯಾರ್ಯಾರು ಗೊತ್ತೇ??

ಸಿನಿಮಾ ಇಂಡಸ್ಟ್ರಿಗೆ ಸೇರಿದ ನಾಯಕಿಯರು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಲು ಬಯಸುವುದರ ಜೊತೆಗೆ ಸಿನಿಮಾಗಳಲ್ಲಿ ಸುಂದರವಾಗಿ ಕಾಣಿಸಿಕೊಳ್ಳುವುದು ಸಹ ಅವರ ಮೊದಲ ಆದ್ಯತೆ ಆಗಿರುತ್ತದೆ. ಬ್ಯೂಟಿ, ಸೌಂದರ್ಯದ ವಿಷಯದಲ್ಲಿ ವಿಮರ್ಶೆ ಹೆಚ್ಚಾದರೆ ಸರ್ಜರಿಗಳ ಮೂಲಕ ಆ ಸಮಸ್ಯೆಯನ್ನು ಸರಿ ಮಾಡಿಕೊಳ್ಳಲು, ಪ್ರಾಮುಖ್ಯತೆ ನೀಡಲಾಗುತ್ತದೆ. ನಮ್ಮ ಚಿತ್ರರಂಗಸಲ್ಲಿ ಈ ರೀತಿ ಸರ್ಜರಿ ಮಾಡಿಕೊಂಡಿರುವ ನಾಯಕಿಯರು ಯಾರ್ಯಾರು ಗೊತ್ತಾ? ಇಂದು ತಿಳಿಸುತ್ತೇವೆ ನೋಡಿ..

ದಕ್ಷಿಣ ಭಾರತ ಸಿನಿ ಇಂಡಸ್ಟ್ರಿಯಲ್ಲಿ ಮೊದಲು ಸರ್ಜರಿ ಮಾಡಿಸಿಕೊಂಡ ಸ್ಟಾರ್ ಹೀರೋಯಿನ್ ಎಂದರೆ ಅದು, ಕನಸಿನ ಕನ್ಯೆ ಶ್ರೀದೇವಿ ಎನ್ನುವುದು ಗಮನಾರ್ಹವಾದ ವಿಚಾರ. ನಟಿ ಶ್ರೀದೇವಿ ಅವರು ತನ್ನ ಮೂಗಿಗೆ ಸಂಬಂಧಿಸಿದಂತೆ ಸರ್ಜರಿ ಮಾಡಿಸಿಕೊಂಡರು. ಸರ್ಜರಿ ನಂತರ ಶ್ರೀದೇವಿ ಅವರು ಹೆಚ್ಚು ಸುಂದರವಾಗಿ ಕಾಣಿಸಿಕೊಂಡ ಕಾರಣ ಅವರ ಬಳಿಕ, ಕಾಸ್ಮೆಟಿಕ್ ಸರ್ಜರಿಗಳು ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಯಿತು.

ಸರ್ಜರಿ ಮಾಡಿಸಿಕೊಂಡವರು ನಟಿ ನಟಿ ಮೀನಾಕ್ಷಿ ಶೇಷಾದ್ರಿ. ಇವರು ಸಹ ಮೂಗಿಗೆ ಸರ್ಜರಿ ಮಾಡಿಸಿಕೊಂಡು, ಅದಾದ ಬಳಿಕ ಇನ್ನು ಸುಂದರವಾಗಿ ಕಾಣುವ ಮೂಲಕ ವೃತ್ತಿಜೀವನದಲ್ಲಿ ಲಾಭ ಮತ್ತು ಯಶಸ್ಸು ಎರಡನ್ನು ಸಹ ಪಡೆದುಕೊಂಡರು. ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಮತ್ತೊಬ್ಬ ಖ್ಯಾತ ನಟಿ ಹೇಮಾ ಮಾಲಿನಿ ಅವರು. ಬಾಲಿವುಡ್ ಮಾತ್ರವಲ್ಲದೆ, ಭಾರತಾದ್ಯಂತ ಫೇಮಸ್ ಆಗಿದ್ದ ಹೇಮಾ ಮಾಲಿನಿ ಅವರು, ವೃದ್ಧಾಪ್ಯದ ಛಾಯೆಗಳು ಕಾಣಿಸಿಕೊಂಡು ಬಳಿಕ ಬ್ಲೆಫರೋಪ್ಲಾಸ್ಟಿ ಮಾಡಿಸಿಕೊಂಡರು. ಈ ವಿಚಾರ ಭಾರಿ ಪ್ರಚಾರವನ್ನು ಸಹ ಪಡೆದುಕೊಂಡಿತು.

ಬಾಲಿವುಡ್ ನ ಬಿಗ್ ಬಿ ಪ್ರಖ್ಯಾತ ನಟ ಅಮಿತಾಭ್ ಬಚ್ಚನ್ ಅವರು ಕೌನ್ ಬನೆಗಾ ಕರೊಡ್ ಪತಿ ಕಾರ್ಯಕ್ರಮ ಶುರುವಾಗುವ ಮೊದಲು, ತಲೆಯ ಕೂದಲುಗಳು ಹಾಗೂ ದವಡೆಗಳು ಸರಿ ಆಗುವ ರೀತಿಯಲ್ಲಿ ಚಿಕಿತ್ಸೆ ಪಡೆದುಕೊಂಡರು. ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ತುಟಿಗಳ ಮೇಲೆ ಇರುವ ಕಲೆಗಳನ್ನು ಕಾಸ್ಮೆಟಿಕ್ ಸರ್ಜರಿ ಮೂಲಕ ತೆಗೆದುಹಾಕಿದರು.

ಸರ್ಜರಿ ಇಂದ ಲಾಭ ಇದ್ದರೂ ಸಹ, ಈ ಸರ್ಜರಿಗಳಿಂದ ಮೈಕೆಲ್ ಜಾಕ್ಸನ್, ಶ್ರೀದೇವಿ, ರಾಖೀ ಸಾವಂತ್, ಜುಹೀ ಚಾವ್ಲಾ ಕತ್ರಿನಾ ಕೈಫ್, ವಾಣಿ ಕಪೂರ್ ನಷ್ಟ ಅನುಭವಿಸಿದ್ದಾರೆ.. ಇವರಲ್ಲಿ ಕೆಲವರು ಸರ್ಜರಿ ಇಂದಾಗಿ ಪ್ರಾಣವನ್ನೇ ಕಳೆದುಕೊಂಡರು. ಪಂಜಾಬಿ ನಟ ವಿವೇಕ್ ಶೌಕ್ ಅವರು ಲೈಪೋಸಕ್ಷನ್ ಮಾಡಿಸಿಕೊಂಡ ನಂತರ ಪ್ರಾಣ ಕಳೆದುಕೊಂಡರು. ಇಂತಹ ಸರ್ಜರಿಯಿಂದ ಖ್ಯಾತ ನಟಿ ಆರತಿ ಅಗರ್ವಾಲ್ ಪ್ರಾಣ ಕಳೆದುಕೊಂಡರು. ಕನ್ನಡ ನಟಿ ಚೇತನಾ ರಾಜ್ ಸಹ ಪ್ರಾಣ ಕಳೆದುಕೊಳ್ಳಲು ಈ ಸರ್ಜರಿ ಕಾರಣವಾಗಿದೆ.

ಸರ್ಜರಿ ಮಾಡಿಕೊಂಡು ತಮ್ಮನ್ನು ತಾವೇ ಅಪಾಯಕ್ಕೆ ಸಿಲುಕಿಸಿಕೊಂಡ ಟಾಪ್ ಸೆಲೆಬ್ರೆಟಿಗಳು ಯಾರ್ಯಾರು ಗೊತ್ತೇ??

ಹಾಗಾಗಿ ಸರ್ಜರಿಗಳನ್ನು ಮಾಡಿಕೊಳ್ಳುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ತಜ್ಞರು ಹೇಳುತ್ತಾರೆ. ಕೃತಕವಾಗಿ ಬರುವ ಅಂದದಿಂದ ತಾತ್ಕಾಲಿಕವಾಗಿ ಲಾಭವನ್ನು ಹೊಂದುತ್ತೇವೆ ಆದರೆ ಅವುಗಳಿಂದ ದೀರ್ಘಾವಧಿಯಲ್ಲಿ ನಷ್ಟಗಳು ಉಂಟಾಗುವ ಸಾಧ್ಯತೆಗಳೇ ಹೆಚ್ಚು.

Comments are closed.