SBI ಕಡೆ ಇಂದ ಬಂತು ಸಿಹಿ ಸುದ್ದಿ, ಕಡಿಮೆ ಬಂಡವಾಳದಿಂದ ತಿಂಗಳಿಗೆ ಬರೋಬ್ಬರಿ 60 ಸಾವಿರ ಗಳಿಸುವುದು ಹೇಗೆ ಗೊತ್ತೇ??
ಈಗಾಗಲೇ ನೀವು ಕೆಲಸ ಮಾಡುತ್ತಿದ್ದು, ಅದರ ಜೊತೆಗೆ ಹೆಚ್ಚಿನ ಶ್ರಮವಿಲ್ಲದೆ ಇನ್ನಷ್ಟು ಹಣ ಗಳಿಸುವ ಪ್ಲಾನ್ ಇದ್ದರೆ, ನಿಮಗೆ ಇಷ್ಟ ಆಗುವಂಥಹ ವಿಚಾರ ಇಲ್ಲಿದೆ. ಇದೊಂದು ಹೊಸ ಬ್ಯುಸಿನೆಸ್ ಆಗಿದ್ದು, ಇದನ್ನು ನೀವು ಟ್ರೈ ಮಾಡಬಹುದು. ಈ ಬ್ಯುಸಿನೆಸ್ ಬಹಳ ಸುರಕ್ಷಿತವಾದದ್ದು, ಯಾಕಂದ್ರೆ, ಈ ಬ್ಯುಸಿನೆಸ್ ಮಾಡಲು ಅವಕಾಶ ನೀಡುತ್ತಿರುವುದು ಭಾರತದ ಪ್ರತಿಷ್ಠಿತ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಈ ಹೊಸ ಬ್ಯುಸಿನೆಸ್ ಇಂದ ನಿಮಗೆ ಹೆಚ್ಚಿನ ಲಾಭ ಸಹ ಸಿಗಲಿದೆ. ಎಲ್ಲಾ ಬ್ಯಾಂಕ್ ಗಳಿಗೂ ಎಟಿಎಂ ಇರುತ್ತದೆ, ಆದರೆ ಎಲ್ಲಾ ಎಟಿಎಂ ಗಳನ್ನು ಬ್ಯಾಂಕ್ ಸ್ಥಾಪಿಸುವುದಿಲ್ಲ, ಬದಲಾಗಿ ಎಟಿಎಂ ಗಳು ಸ್ಥಾಪನೆ ಮಾಡುವುದು ಬೇರೆಯ ಕಂಪನಿ. ಈ ಕಂಪನಿ ಫ್ರಾಂಚೈಸಿ ನೀಡುವ ಮೂಲಕ ಎಟಿಎಂ ಸ್ಥಾಪಿಸುತ್ತಾರೆ.. ಬ್ಯಾಂಕ್ ಗಳು ಇದಕ್ಕಾಗಿ ಕಾಂಟ್ರ್ಯಾಕ್ಟ್ ನೀಡುತ್ತವೆ. ವಿವಿಧ ಜಾಗಗಳಲ್ಲಿ ಎಟಿಎಂ ಸ್ಥಾಪನೆ ಮಾಡುತ್ತದೆ. ಈ ರೀತಿ ಎಟಿಎಂ ಫ್ರಾಂಚೈಸಿ ಪಡೆಯುವ ಮೂಲಕ ನೀವು ಹೆಚ್ಚಿನ ಲಾಭ ಗಳಿಸಬಹುದು. ಈ ಎಟಿಎಂ ಫ್ರಾಂಚೈಸಿ ಹೇಗೆ ಪಡೆಯುವುದು? ಈ ಬ್ಯುಸಿನೆಸ್ ಹೇಗೆ ವರ್ಕ್ ಆಗುತ್ತದೆ ?ತಿಳಿಸುತ್ತೇವೆ ನೋಡಿ..
ಈ ಫ್ರಾಂಚೈಸಿ ಪಡೆಯಲು ನಿಮ್ಮ ಬಳಿ 50-80 ಚದರ ವಿಸ್ತೀರ್ಣ ಜಾಗ ಹೊಂದಿರಬೇಕು. ನಿಮ್ಮ ಜಾಗ ಬೇರೆ ಎಟಿಎಂ ಗಳಿಂದ ಕನಿಷ್ಠ 100ಮೀ ದೂರದಲ್ಲಿರಬೇಕು. ಎಟಿಎಂ ಇರುವ ಜಾಗ ಗ್ರೌಂಡ್ ಫ್ಲೋರ್ ನಲ್ಲಿದ್ದರೆ ಉತ್ತಮ, ಎಟಿಎಂ ಇರಬೇಕಾದ ಜಾಗದಲ್ಲಿ 24 ಗಂಟೆ ವಿದ್ಯುತ್ ಸರಬರಾಜು ಇರಬೇಕು. 1kW ವಿದ್ಯುತ್ ಸಂಪರ್ಕ ಕಡ್ಡಾಯವಾಗಿ ಇರಲೇಬೇಕು. ಒಂದು ದಿನಕ್ಕೆ 300 ವಹಿವಾಟು ಆಗುವ ಸಾಮರ್ಥ್ಯ ಹೊಂದಿರಬೇಕು. ಎಟಿಎಂ ಇರುವ ಜಾಗಕ್ಕೆ ಕಾಂಕ್ರೀಟ್ ಛಾವಣಿ ಇರಬೇಕು. ಈ V-SAT ಸ್ಥಾಪಿಸಲು ಸಮಾಜ ಅಥವಾ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಪಡೆದಿರಬೇಕು. ಇದಕ್ಕಾಗಿ, ಬೇಕಿರುವ ದಾಖಲೆಗಳು ಹೀಗಿವೆ :-
1.ID Proof :- ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟಿಂಗ್ ಐಡಿ.
- ಅಡ್ರೆಸ್ ಪ್ರೂಫ್ :- ವಿದ್ಯುತ್ ಬಿಲ್, ರೇಷನ್ ಕಾರ್ಡ್
- ಬ್ಯಾಂಕ್ ಖಾತೆಯ ಪಾಸ್ ಬುಕ್
- ಫೋಟೋ, ಇಮೇಲ್ ಐಡಿ, ಫೋನ್ ಸಂಖ್ಯೆ
- ಬೇರೆ ದಾಖಲೆಗಳು :- GST ನಂಬರ್, ಮತ್ತು ಹಣಕಾಸಿನ ದಾಖಲೆಗಳು.
ಎಸ್.ಬಿ.ಐ ಎಟಿಎಂ ಫ್ರಾಂಚೈಸಿ ಪಡೆಯುವ ಪ್ಲಾನ್ ನಿಮಗೂ ಇದ್ದರೆ, ಫ್ರಾಂಚೈಸಿ ನೀಡುವ ಕಂಪನಿಯ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಟಾಟಾ ಇಂಡಿಕ್ಯಾಶ್, ಮುತೂಟ್ ಎಟಿಎಂ ಮತ್ತು ಇಂಡಿಯಾ ಒನ್ ಎಟಿಎಂ ಇವುಗಳು ಭಾರತದಲ್ಲಿ ಎಟಿಎಂ ಸ್ಥಾಪಿಸುವ ಕಾಂಟ್ರ್ಯಾಕ್ಟ್ ಗಳನ್ನು ಹೊಂದಿದೆ. ಇವುಗಳ ವೆಬ್ ಸೈಟ್ ಅಡ್ರೆಸ್ ಗಳು ಹೀಗಿವೆ..
ಟಾಟಾ ಇಂಡಿಕ್ಯಾಶ್ :- www.indicash.co.in
ಮುತೂಟ್ ಎಟಿಎಂ :- www.muthootatm.com/suggest-atm.html
ಇಂಡಿಯ ಒನ್ ಎಟಿಎಂ :- india1atm.in/rent-your-space
ಎಟಿಎಂ ಫ್ರಾಂಚೈಸಿ ಪಡೆಯುವುದರಿಂದ ನೀವು ಪ್ರತಿ ನಗದು ವಹಿವಾಟಿಗೆ ₹8 ರೂಪಾಯಿ ಪಡೆಯುತ್ತೀರಿ, ಹಾಗೂ ಪ್ರತಿ ನಗದು ರಹಿತ ವಹಿವಾಟಿಗೆ ₹2 ರೂಪಾಯಿ ಪಡೆಯುತ್ತೀರಿ. ಈ ಬ್ಯುಸಿನೆಸ್ ನಲ್ಲಿ ಹೂಡಿಕೆಯ ಲಾಭ ಪ್ರತಿ ವರ್ಷಕ್ಕೆ ಶೇ.35-50 ರಷ್ಟು ಇರುತ್ತದೆ. ಉದಾಹರಣೆಗೆ, ನೀವು ಸ್ಥಾಪಿಸುವ ಎಟಿಎಂ ಇಂದ ಒಂದು ದಿನಕ್ಕೆ 250 ವಹಿವಾಟು ನಡೆದರೆ, ಅದರಲ್ಲಿ ಶೇ.65ರಷ್ಟು ನಗದು ವಹಿವಾಟು, ಶೇ.35ರಷ್ಟು ನಗದು ರಹಿತ ವಹಿವಾಟು ನಡೆದರೆ, ನಿಮ್ಮ ತಿಂಗಳ ಆದಾಯ ಸುಮಾರು ₹45 ಸಾವಿರ ತಲುಪಲಿದೆ. ಸುಮಾರು 500 ರಷ್ಟು ವಹಿವಾಟುಗಳು ನಡೆದರೆ, 88 ರಿಂದ 90 ಸಾವಿರ ಕಮಿಷನ್ ಸಿಗುತ್ತದೆ.
Comments are closed.