ಅಭಿಮಾನಿಗಳ ಜೊತೆ ಮಾತನಾಡಲು ಪ್ರಯತ್ನ ಪಟ್ಟ ನಟಿಗೆ ಮುಜುಗರ ಆಗುವಂತಹ ಪ್ರಶ್ನೆ ಕೇಳಿದವನಿಗೆ ಮಾಳವಿಕಾ ಕೊಟ್ಟ ಉತ್ತರವೇನು ಗೊತ್ತೇ??
ಚಿತ್ರರಂಗದಲ್ಲಿ ಇರುವವರಿಗೆ, ಬಣ್ಣದ ಲೋಕ ಗ್ಲಾಮರ್ ಪ್ರಪಂಚದಲ್ಲಿ ಇರುವವರು ಯಾವಾಗಲೂ ಲೈಮ್ ಲೈಟ್ ನಲ್ಲಿರುತ್ತಾರೆ. ಜನರು, ಹಾಗು ನೆಟ್ಟಿಗರು ಚಿತ್ರರಂಗದವರು ಮಾಡುವ ಒಂದೊಂದು ಕೆಲಸವನ್ನು ಸಹ ಗಮನಿಸುತ್ತಾ ಇರುತ್ತಾರೆ. ಈಗ ಇಂಟರ್ನೆಟ್ ಎಲ್ಲರಿಗೂ ಸುಲಭವಾಗಿ ಲಭ್ಯವಿರುವ ಕಾರಣ, ಎಲ್ಲರೂ ಸೋಷಿಯಲ್ ಮೀಡಿಯಾ ಮೂಲಕ ಕಮೆಂಟ್ಸ್ ಮಾಡುವುದು, ಅದರಲ್ಲು ನಟಿಯರ ವಿಚಾರದಲ್ಲಿ ಅಸಭ್ಯವಾಗಿ ವರ್ತಿಸುವುದು ಮಾಡುತ್ತಾರೆ. ಈಗ ಇಂಟರ್ನೆಟ್ ಇರುವುದರಿಂದ ಬಾಯಿಗೆ ಬಂದಂತಹ, ಮುಜುಗರ ಆಗುವಂತಹ ಪ್ರಶ್ನೆಗಳನ್ನು ನಾಯಕಿಯರಿಗೆ ಕೇಳುವುದು ಸಾಮಾನ್ಯ ಎನ್ನುವ ಹಾಗೆ ಆಗಿದೆ..
ಅದರಲ್ಲೂ ನಾಯಕಿಯರ ವಿಚಾರದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ನಾಯಕಿಯರಿಗೆ ಬೇಸರ ಆಗುವಂತಹ ಪ್ರಶ್ನೆಗಳನ್ನು ಕೇಳಿರುವ ಅನೇಕ ಉದಾಹರಣೆಗಳನ್ನು ಕೇಳಿರುತ್ತೇವೆ. ಇದೀಗ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಮಾಳವಿಕಾ ಮೋಹನನ್ ಅವರಿಗೆ ಇಂತಹ ಘಟನೆ ನಡೆದಿದೆ. ಟ್ವಿಟರ್ ನಲ್ಲಿ ಮಾಳವಿಕಾ ಮೋಹನನ್ ಅವರು ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದ್ದರು, ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು. ಅನೇಕರು ಮಾಳವಿಕಾ ಮೋಹನನ್ ಅವರ ಪರ್ಸನಲ್ ಲೈಫ್ ಬಗ್ಗೆ, ಕುಟುಂಬದ ಬಗ್ಗೆ, ಸಿನಿಮಾಗಳ ಬಗ್ಗೆ ಅನೇಕ ವಿಚಾರಗಳನ್ನು ಪ್ರಶ್ನೆ ಕೇಳಿದ್ದು, ಅದಕ್ಕೆಲ್ಲಾ ಮಾಳವಿಕಾ ಅವರು ಉತ್ತರ ನೀಡಿದರು.
ಅದೇ ಸಮಯದಲ್ಲಿ ಒಬ್ಬ ವ್ಯಕ್ತಿ, ಅಸಭ್ಯವಾದ ಪ್ರಶ್ನೆ ಕೇಳಿದ್ದಾನೆ. ಮಾಳವಿಕಾ ಮೋಹನನ್ ಅವರು ಇತ್ತೀಚೆಗೆ ನಟ ಧನುಷ್ ಅವರೊಡನೆ ಮಾರನ್ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದ ಇಂಟಿಮೇಟ್ ದೃಶ್ಯವನ್ನು ಎಷ್ಟು ಸಾರಿ ಚಿತ್ರೆಕರಣ ಮಾಡಲಾಯಿತು ಎಂದು ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ಮಾಳವಿಕಾ ಮೋಹನನ್ ಅವರು ಉತ್ತರ ಕೊಟ್ಟಿದ್ದು, “ನಿಮ್ಮ ತಲೆಯ ಒಳಗೆ ಇರುವ ವಿಚಾರಗಳು ದುಃಖದಿಂದ ಕೂಡಿದೆ..” ಎಂದು ಉತ್ತರ ನೀಡಿದ್ದಾರೆ. ಹಲವು ನಟಿಯರು ಈ ರೀತಿಯ ಪ್ರಶ್ನೆಗಳನ್ನು ಕೇಳಿದಾಗ ಉತ್ತರ್ಸ್ ಕೊಡುವುದಿಲ್ಲ, ಆದರೆ ಮಾಳವಿಕಾ ಅವರು ಬೋಲ್ಡ್ ಆಗಿ ಉತ್ತರ ಕೊಟ್ಟಿದ್ದಾರೆ. ದಳಪತಿ ವಿಜಯ್ ಅವರ ಮಾಸ್ಟರ್ ಸಿನಿಮಾ ಮೂಲಕ ಮಾಳವಿಕಾ ಮೋಹನನ್ ಅವರು ಖ್ಯಾತಿ ಪಡೆದುಕೊಂಡರು. ದಕ್ಷಿಣ ಭಾರತ ಚಿತ್ರರಂಗದಲ್ಲಿ ಈಗ ಮಾಳವಿಕಾ ಮೋಹನನ್ ಅವರಿಗೆ ಬೇಡಿಕೆ ಹೆಚ್ಚಾಗುತ್ತಿದೆ.
Comments are closed.