ಕಾಲಲ್ಲಿ ಕೀರ್ತಿ ಸುರೇಶ ರವರನ್ನು ಮುಟ್ಟಿದ ಮಹೇಶ್ ಬಾಬು, ಒಂದು ನೆಟ್ಟಿಗರು ಗರಂ ಆದರೆ, ಸಿನಿ ಪ್ರಿಯರು ಹೇಳಿದ್ದೇನು ಗೊತ್ತೇ??
ಟಾಲಿವುಡ್ ಪ್ರಿನ್ಸ್ ನಟ ಮಹೇಶ್ ಬಾಬು ಅವರು ಈಗ ಸರ್ಕಾರು ವಾರಿ ಪಾಟ ಸಿನಿಮಾ ಗೆದ್ದಿರುವ ಸಕ್ಸಸ್ ಸಂತೋಷದಲ್ಲಿದ್ದಾರೆ. ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರು ಸಹ, ಅದು ಸಿನಿಮಾ ಕಲೆಕ್ಷನ್ ಕಡಿಮೆ ಮಾಡಿಲ್ಲ. ಬಿಡುಗಡೆಯಾದ ಒಂದು ವಾರದಲ್ಲಿ 200 ಕೋಟಿಗಿಂತ ಅಧಿಕ ಗಳಿಕೆ ಮೂಡಿದೆ ಸರ್ಕಾರು ವಾರಿ ಪಾಟ. ಈ ಸಿನಿಮಾ ಬ್ಯಾಂಕ್ ಇಂದ ಆಗುವ ಸಮಸ್ಯೆಗಳ ಬಗ್ಗೆ ಅವೆರ್ನೆಸ್ ನೀಡುವಂಥ ಕಥೆಯನ್ನು ಹೊಂದಿದೆ. ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಮಹೇಶ್ ಬಾಬು ಅವರಿಗೆ ರಾಷ್ಟ್ರಪ್ರಶಸ್ತಿ ವಿಜೇತೆ ಆಗಿರುವ ಖ್ಯಾತ ನಟಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದಾರೆ. ಇದೀಗ ಈ ಸಿನಿಮಾ ಬಗ್ಗೆ ನೆಗಟಿವ್ ವಿಚಾರ ಒಂದು ಸುದ್ದಿಯಾಗುತ್ತಿದೆ.
ಸರ್ಕಾರು ವಾರಿ ಪಾಟ ಸಿನಿಮಾದ ಒಂದು ದೃಶ್ಯದಲ್ಲಿ ಮಹೇಶ್ ಬಾಬು ಅವರು ಕೀರ್ತಿ ಸುರೇಶ್ ಅವರನ್ನು ಮುಟ್ಟಿರುವ ರೀತಿ ಸರಿ ಇಲ್ಲ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ, ಕೀರ್ತಿ ಸುರೇಶ್ ಅವರ ಪಕ್ಕ ಮಹೇಶ್ ಬಾಬು ಅವರು ಮಲಗಿರುತ್ತಾರೆ ಆಗ ಕೀರ್ತಿ ಸುರೇಶ್ ಅವರ ಮೇಲೆ ಕಾಲು ಹಾಕಿರುತ್ತಾರೆ. ಈ ದೃಶ್ಯ ಅಸಭ್ಯವಾಗಿದೆ, ಕೆಟ್ಟದಾಗಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೀರ್ತಿ ಸುರೇಶ್ ಅವರ ಅಭಿಮಾನಿಗಳಿಗೆ ಈ ದೃಶ್ಯ ಇಷ್ಟವಾಗಿಲ್ಲ ಎನ್ನಲಾಗುತ್ತಿದೆ. ಇನ್ನು ಈ ದೃಶ್ಯದ ಬಗ್ಗೆ ಸಿನಿಮಾ ನಿರ್ದೇಶಕ ಪರಶುರಾಮ್ ಅವರು ಪ್ರತಿಕ್ರಿಯೆ ನೀಡಿದ್ದು, “ಆ ದೃಶ್ಯದಲ್ಲಿ ಏನು ತಪ್ಪಿಲ್ಲ.. ಒಂದು ಮಗು ತಾಯಿ ಪಕ್ಕ ಮಲಗಲು ಬಯಸುವ ಹಾಗೆ ನಾಯಕ ನಾಯಕಿಯ ಪಕ್ಕ ಮಲಗಲು ಬಯಸುತ್ತಾನೆ ಅಷ್ಟೇ..” ಎಂದಿದ್ದಾರೆ ನಿರ್ದೇಶಕ ಪರಶುರಾಮ್.
ಜೊತೆಗೆ, “ಆ ದೃಶ್ಯ ಚೆನ್ನಾಗಿಲ್ಲ ಅಥವಾ ಅಸಭ್ಯ ಎಂದು ಅನ್ನಿಸಿದ್ದರೆ, ಮಹೇಶ್ ಬಾಬು ಅವರು ಆ ದೃಶ್ಯದಲ್ಲಿ ನಟಿಸುತ್ತಿರಲಿಲ್ಲ. ಅವರೇ ಬೇಡ ಎನ್ನುತ್ತಿದ್ದರು ಅಥವಾ ತೆಗೆದು ಹಾಕಲು ಹೇಳುತ್ತಿದ್ದರು. ಅವರಿಬ್ಬರು ತೊಂದರೆ ಇಲ್ಲದೆ ನಟಿಸಿದ್ದಾರೆ..” ಎಂದು ಹೇಳಿಕೆ ನೀಡಿದ್ದಾರೆ ನಿರ್ದೇಶಕ ಪರಶುರಾಮ್. ನಿರ್ದೇಶಕರು ನೀಡಿರುವ ಈ ಹೇಳಿಕೆ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, ಈ ರೀತಿಯ ಮಾತುಗಳನ್ನು ಆಡಲು ಹೇಗೆ ಸಾಧ್ಯ. ಲವ್ವರ್ ಅನ್ನು ತಾಯಿಗೆ ಹೇಗೆ ಹೋಲಿಸುತ್ತೀರಿ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು, ನಾಯಕಿಯರನ್ನು ಕೇವಲ ಭೋಗದ ವಸ್ತುವಾಗಿ ತೋರಿಸುತ್ತಾರೆ, ಕೆಲವು ನಾಯಕರು ನಾಯಕಿಯರ ಜೊತೆಗೆ ವಿಲ್ಲನ್ ಗಿಂತ ಕೆಟ್ಟದಾಗಿ ವರ್ತಿಸುತ್ತಾರೆ.. ಎಂದು ನೆಟ್ಟಿಗರು ಗರಂ ಆಗಿದ್ದಾರೆ.
Comments are closed.