ದಾಸ ಪುರಂದರ ಧಾರಾವಾಹಿಗೆ ಬಂಡವಾಳ ಹಾಕಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯ ನಟಿ ಯಾರು ಗೊತ್ತೇ??
ಕಿರುತೆರೆಯಲ್ಲಿ ಒಂದೇ ರೀತಿಯ ಪ್ರಮಕತೆ, ಅತ್ತೆ ಸೊಸೆ ಜಗಳ, ಕದನ, ಹೀರೋ ವಿಲ್ಲನ್ ಇಂತಹ ಕಥೆಗಳಿರುವ ಧಾರವಾಹಿಗಳನ್ನು ನೋಡಿ ಬೇಸತ್ತಿರುವ ವೀಕ್ಷಕರಿಗೆ ಕಲರ್ಸ್ ಕನ್ನಡ ವಾಹಿನಿಯ ದಾಸ ಪುರಂಧರ ಧಾರವಾಹಿ ಒಂದು ರೀತಿ ಬೇರೆಯ ಲೋಕಕ್ಕೇ ಕರೆದುಕೊಂಡು ಹೋಗುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಪುರಂಧದ ದಾಸರ ಜೀವನ ಚರಿತ್ರೆ ಆಗಿರುವ ಈ ಧಾರಾವಾಹಿ, ಅದ್ಭುತವಾಗಿ ಮೂಡಿ ಬರುತ್ತಿದೆ. ನೂರಾರು ವರ್ಷಗಳ ಹಿಂದಕ್ಕೆ ವೀಕ್ಷಕರನ್ನು ಕರೆದುಕೊಂಡು ಹೋಗಿ, ಅಂದಿನ ದಿನಗಳು ಹೇಗಿರಬಹುದು ಎಂದು ತೋರಿಸಿಕೊಡುತ್ತಿದೆ. ಜನರ ಮನ ಗೆದ್ದಿರುವ ದಾಸ ಪುರಂಧರ ಧಾರವಾಹಿ ಹಾಗೂ ಜೀಕನ್ನಡ ವಾಹಿನಿಯ ಹಿಟ್ಲರ್ ಕಲ್ಯಾಣ ಧಾರಾವಾಹಿಗೆ ಒಂದು ಲಿಂಕ್ ಇದೆ. ಅದೇನು ಗೊತ್ತಾ? ತಿಳಿಸುತ್ತೇವೆ ನೋಡಿ..
ದಾಸ ಪುರಂಧರ ಧಾರವಾಹಿ ಶುರುವಾಗಿದ್ದು ಇತ್ತೀಚೆಗೆ, ಶುರುವಾದ ಕೆಲವೇ ದಿನಗಳಲ್ಲಿ ಈ ಧಾರಾವಾಹಿ ಜನರ ಮನಸ್ಸನ್ನು ಗೆದ್ದಿದೆ, ಒಂದೊಂದು ಪಾತ್ರವೂ ಸಹ ಉತ್ತಮವಾದ ಅಭಿನಯ ನೀಡುತ್ತಿವೆ. ಅದರಲ್ಲು ನಾಯಕರು ಹಾಗೂ ಪುಟ್ಟ ಶ್ರೀನಿಯ ಅಭಿನಯದ ಬಗ್ಗೆ ಎರಡನೇ ಮಾತೇ ಇಲ್ಲ. ಅಷ್ಟು ಅಚ್ಚುಕಟ್ಟಾಗಿದೆ ಶ್ರೀನಿ ಅಭಿನಯ. ಕಲರ್ಸ್ ಕನ್ನಡ ವಾಹಿನಿ ಯಾವಾಗಲೂ ಜನರಿಗೆ ಸದಭಿರುಚಿ ಕಾರ್ಯಕ್ರಮಗಳನ್ನು ನೀಡುತ್ತದೆ. ಇದೀಗ ಮತ್ತೊಮ್ಮೆ ಅತ್ಯುತ್ತಮವಾದ ಧಾರವಾಹಿಯನ್ನು ಜನರಿಗೆ ನೀಡುತ್ತಿದೆ. ಇನ್ನು ಕಲರ್ಸ್ ಕನ್ನಡ ವಾಹಿನಿಯ ದಾಸ ಪುರಂಧರ ಧಾರವಾಹಿಗೂ ಜೀಕನ್ನಡ ವಾಹಿನಿಯ ಹಿಟ್ಲರ್ ಕಲ್ಯಾಣ ಧಾರಾವಾಹಿಯ ದುರ್ಗಾ ಪಾತ್ರ ನಿರ್ವಹಿಸುತ್ತಿರುವ ನಂದಿನಿ ಮೂರ್ತಿ ಅವರಿಗೆ ಒಂದು ಸಂಬಂಧ ಇದೆ.
ದಾಸ ಪುರಂಧರ ಧಾರಾವಾಹಿಗೆ ಬಂಡವಾಳ ಹಾಕಿ, ನಿರ್ಮಾಣ ಮಾಡುತ್ತಿರುವುದು ಹಿಟ್ಲರ್ ಕಲ್ಯಾಣ ಧಾರಾವಾಹಿಯ ನಂದಿನಿ ಅವರು. ನಂದಿನಿ ಮತ್ತು ಅವರ ಪತಿ ಕಾರ್ತಿಕ್ ಪರ್ಡಿಕರ್ ಅವರಿಬ್ಬರ ನಿರ್ಮಾಣ ಸಂಸ್ಥೆಯೇ ಜಯದುರ್ಗ ಕ್ರಿಯೇಶನ್ಸ್. ಈ ಸಂಸ್ಥೆಯ ಮೂಲಕ ಈಗಾಗಲೇ ಸೀತಾವಲ್ಲಭ, ಯುಗಳಗೀತೆ ಸೇರಿದಂತೆ ಕೆಲವು ಧಾರವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ದಾಸ ಪುರಂಧರ ಧಾರವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಾರ್ತಿಕ್ ಅವರು ಸ್ಟಾರ್ ಸುವರ್ಣ ವಾಹಿನಿಯ ಕ್ರಿಯೇಟಿವ್ ಹೆಡ್ ಆಗಿದ್ದರು, ಬಳಿಕ ನಿರ್ದೇಶಕರಾದರು. ದಾಸ ಪುರಂಧರ ಧಾರವಾಹಿಯನ್ನು ಕಾರ್ತಿಕ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.
Comments are closed.