ಹಲವಾರು ವರ್ಷಗಳ ಬಳಿಕ ಕಾಣಿಸಿಕೊಂಡ ಹಳೆ ಕಿಂಗ್ ಕೊಹ್ಲಿ: ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕಾರ ಮಾಡುವಾಗ ಕೊಹ್ಲಿ ಹೇಳಿದ್ದೇನು ಗೊತ್ತೇ??
ಆರ್.ಸಿ.ಬಿ ತಂಡ ನಿನ್ನೆ ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಅಮೋಘವಾದ ಗೆಲುವು ಸಾಧಿಸಿದೆ. ನಿನ್ನೆ ಆರ್.ಸಿ.ಬಿ ಪಾಲಿನ ಕೊನೆಯ ಪಂದ್ಯ ಆಗಿತ್ತು, ನಿನ್ನೆಯ ಪಂದ್ಯವನ್ನು ಗೆಲ್ಲದೆ ಹೋದರೆ, ಆರ್.ಸಿ.ಬಿ ತಂಡ ಪ್ಲಆಫ್ಸ್ ತಲುಪುವ ಕನಸು ಕನಸಾಗಿಯೇ ಉಳಿಯುತ್ತಿತ್ತು. ಮಾಡು ಇಲ್ಲವೇ ಮಡಿ ಎನ್ನುವಂತಿದ್ದ ಪಂದ್ಯದಲ್ಲಿ ನಿನ್ನೆ ಆರ್.ಸಿ.ಬಿ ತಂಡ ಬರೋಬ್ಬರಿ 8 ವಿಕೆಟ್ ಗಳ ಗೆಲುವು ಸಾಧಿಸಿತು. ಈ ಮೂಲಕ ಪ್ಲೇ ಆಫ್ಸ್ ಕನಸನ್ನು ಜೀವಂತವಾಗಿ ಇರಿಸಿಕೊಂಡಿದೆ ಆರ್.ಸಿ.ಬಿ. ಇನ್ನು ನಿನ್ನೆಯ ಪಂದ್ಯದಲ್ಲಿ ಕಿಂಗ್ ಕೋಹ್ಲಿ ಅವರ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನ ಅಭಿಮಾನಿಗಳು ದಿಲ್ ಖುಷ್ ಆಗುವ ಹಾಗೆ ಮಾಡಿತು. ನಿನ್ನೆಯ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಸಹ ಗೆದ್ದರು ಕೋಹ್ಲಿ.
ನಿನ್ನೆಯ ಪಂದ್ಯದಲ್ಲಿ 54 ಎಸೆತಗಳಲ್ಲಿ 73 ರನ್ ಗಳನ್ನು ಸಿಡಿಸಿ, ಮ್ಯಾನ್ ಆಫ್ ಡಿ ಮ್ಯಾಚ್ ಅವಾರ್ಡ್ ಪಡೆದರು. ಬರೋಬ್ಬರಿ 564 ದಿನಗಳ ಬಳಿಕ ಕೋಹ್ಲಿ ಅವರು ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಪಡೆದರು. ಕಳೆದ ಬಾರಿ, 2020 ರಲ್ಲಿ ಸಿ.ಎಸ್.ಕೆ ತಂಡದ ವಿರುದ್ಧದ ಪಂದ್ಯದಲ್ಲಿ 90 ರನ್ ಗಳಿಸಿದ್ದಾಗ ವಿರಾಟ್ ಕೋಹ್ಲಿ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಸಿಕ್ಕಿತ್ತು. ಅದಾದ ಬಳಿಕೆ ನಿನ್ನೆ ಬ್ಯಾಕ್ ಟು ಫಾರ್ಮ್ ಪ್ರದರ್ಶನ ನೀಡಿದರು ಕೋಹ್ಲಿ, ಮ್ಯಾನ್ ಆಫ್ ದಿ ಮ್ಯಾಚ್ ಪಡೆದ ಬಳಿಕ, ಕೋಹ್ಲಿ ಅವರು ಮಾಧ್ಯಮದ ಎದುರು ಹೇಳಿದ್ದು ಹೀಗೆ.. “ನನ್ನ ತಂಡಕ್ಕೆ ನಾನು ಏನನ್ನು ಸರಿಯಾಗಿ ನೀಡಲು ಸಾಧ್ಯವಾಗುತ್ತಿರಲಿಲ್ಲ ಎನ್ನುವ ಕೊರಗು ನನ್ನನ್ನು ಕಾಡುತ್ತಿತ್ತು. ಇದರಿಂದ ತುಂಬಾ ದುಃಖವಾಗಿತ್ತು. ಇಂದಿನ ಪಂದ್ಯ ನಮ್ಮ ತಂಡಕ್ಕೆ ಬಹಳ ಮುಖ್ಯವಾದ ಪಂದ್ಯ ಆಗಿತ್ತು. ಇಂದಿನ ಪಂದ್ಯದಲ್ಲಿ ನಾನು ಆಡಲೇಬೇಕಿತ್ತು. ನನ್ನ ತಂಡಕ್ಕೆ ನಾನು ಕೊಡುಗೆ ನೀಡುವುದಾದರೆ ಅದು ಇಂದಿನ ಪಂದ್ಯದಲ್ಲಿಯೇ ಎಂದು ನಾನು ನಿರ್ಧರಿಸಿದ್ದೆ.
ನಿಮ್ಮ ದೃಷ್ಟಿಕೋನ ಸರಿಯಾಗಿರಬೇಕು. ಕಾರ್ಯಪ್ರಕ್ರಿಯೆಗಳನ್ನು ಮರೆತು, ನಿರೀಕ್ಷೆಗಳ ಮೇಲೆ ನೀವು ಉಳಿಯಬಹುದು. ಬಹಳ ಪರಿಶ್ರಮ ಪಟ್ಟಿದ್ದೇನೆ, ಜಿಟಿ ತಂಡದ ವಿರುದ್ಧದ ಪಂದ್ಯಕ್ಕಿಂತ ಮೊದಲು ಬುಧವಾರ 9 ಗಂಟೆಗಳ ಕಾಲ ನೆಟ್ಸ್ ನಲ್ಲಿ ಬ್ಯಾಟ್ ಮಾಡಿದ್ದೇ. ನನ್ನ ಮೇಲೆ ನಾನು ಅನುಮಾನ ಪಡದೆ, ನನ್ನನ್ನು ನಾನು ಬೆಂಬಲಿಸಿದೆ. ಪ್ರತಿ ಎಸೆತದಲ್ಲೂ ಸ್ಪಷ್ಟತೆಯಿಂದ ಆಡಬೇಕು ಎಂದುಕೊಂಡೆ. ಅದೇ ರೀತಿ ಆಡಿದೆ, ಇದಕ್ಕಾಗಿ ಕಠಿಣ ಪರಿಶ್ರಮ ಪಟ್ಟಿದ್ದೇನೆ. ಈ ಪಂದ್ಯದಲ್ಲಿ ನಾನು ಚೆನ್ನಾಗಿ ಆಡುತ್ತೇನೆ ಎಂದುಕೊಂಡಿದ್ದೇ. ಈ ಆವೃತ್ತಿಯಲ್ಲಿ ಅತ್ಯುತ್ತಮವಾದ ಬೆಂಬಲ ನನಗೆ ಸಿಕ್ಕಿದ್ದು ಅದ್ಭುತವಾಗಿದೆ. ಹಿಂದೆಂದೂ ನೋಡಿರದಷ್ಟು ಪ್ರೀತಿ ನೋಡಿದೆ, ಆ ಪ್ರೀತಿಗೆ ಸದಾ ಕೃತಜ್ಞನಾಗಿರುತ್ತೇನೆ..” ಎಂದಿದ್ದಾರೆ ಕಿಂಗ್ ಕೋಹ್ಲಿ.
Comments are closed.