ಪ್ರೀತಿಸಿ ಮದುವೆಯಾಗಿ ಮಕ್ಕಳ ಜೊತೆ ಖುಷಿಯಾಗಿದ್ದ ಆ ಜೋಡಿಗೆ ಪೋಷಕರೇ ಏನು ಮಾಡಿದ್ದಾರೆ ಗೊತ್ತೇ? ಇವರ ಪರಿಸ್ಥಿತಿ ಏನಾಗಿದೆ ಗೊತ್ತೇ??
ಪ್ರೀತಿಸಿ ಮದುವೆಯಾಗುವ ವಿಚಾರ ಈಗ ಹೊಸದೇನು ಅಲ್ಲ. ಆಗಿನ ಕಾಲದಿಂದಲೂ ಸಾಕಷ್ಟು ಜೋಡಿಗಳು ಇಷ್ಟಪಟ್ಟು ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ ಆ ರೀತಿ ಮದುವೆಯಾದ ಎಲ್ಲರೂ ಸುಖವಾಗಿ ಸಂತೋಷವಾಗಿ ಸಂಸಾರ ಮಾಡುತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಹಲವು ಬಾರಿ ಮದುವೆಗೆ ಪೋಷಕರಿಂದ ವಿರೋಧ ವ್ಯಕ್ತವಾಗಿ, ಅದರಿಂದ ಹುಡುಗಿಯ ಪ್ರಾಣಕ್ಕೆ ಆಪತ್ತು ಬಂದಿರುವ ಘಟನೆಗಳು, ತಂದೆ ತಾಯಿಗಳು ಆ ಜೋಡಿಗಳನ್ನು ಬೇರೆ ಮಾಡಿರುವ ಸಾಕಷ್ಟು ಘಟನೆಗಳನ್ನ ನೋಡಿರುತ್ತೇವೆ. ಹಾಗೂ ಕೇಳಿರುತ್ತೇವೆ. ಇತ್ತೀಚೆಗೆ ಹೈದರಾಬಾದ್ ನಲ್ಲಿ ಸಹ ಇಂಥದ್ದೇ ಒಂದು ಘಟನೆ ನಡೆದಿದ್ದು, ಮನಕಲುಕುವ ಹಾಗಿದೆ. ಈ ಜೋಡಿಯ ಜೀವನದಲ್ಲಿ ನಡೆದಿದ್ದೇನು ಎಂದು ತಿಳಿಸುತ್ತೇವೆ ನೋಡಿ…
ಹೈದರಾಬಾದ್ ನ ಬೇಗುಂ ನಗರದಲ್ಲಿ ವಾಸವಾಗಿದ್ದ ಈ ಹುಡುಗನ ಹೆಸರು ನೀರಜ್ ಪನ್ವಾರ್. ಈ ಹುಡುಗ ಬೇಗುಂ ನಗರದ ಬಜಾರ್ ನಲ್ಲಿ, ಒಂದು ಅಂಗಡಿಯನ್ನು ಇಟ್ಟುಕೊಂಡು, ಜೀವನ ನಡೆಸುತ್ತಿದ್ದ. ಈತನ ಜೀವನ ಚೆನ್ನಾಗಿಯೇ ಸಾಗಿತ್ತಿತ್ತು, ಈ ಹುಡುಗ ಒಬ್ಬ ಹುಡುಗಿಯನ್ನು ಪ್ರೀತಿಸಿ ಆಕೆಯ ಜೊತೆಗೆ ಮದುವೆಯಾದ, ಆದರೆ ಆ ಹುಡುಗ ಬೇರೆ ಜಾತಿಯ ಹುಡುಗಿ ಆಗಿದ್ದಳು., ಆಕೆಯ ಮನೆಯವರಿಗೆ ಈ ಮದುವೆ ಇಷ್ಟವಾಗಿರಲಿಲ್ಲ. ಆದರೂ ನೀರಜ್ ಮತ್ತು ಆ ಹುಡುಗಿ ಹೆತ್ತವರ ವಿರೋಧದ ನಡುವೆಯೇ ಮದುವೆಯಾದರು. ಆರಂಭದಲ್ಲಿ ಇವರಿಬ್ಬರ ಸಂಸಾರದ ಜೀವನ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಕಳೆದ ಶುಕ್ರವಾರ ನಡೆಯಬಾರದ ಒಂದು ಘಟನೆ ನಡೆದೇ ಹೋಯಿತು.
ನೀರಜ್ ಮತ್ತು ಆತನ ಪತ್ನಿಗೆ ಒಂದು ಸುಂದರವಾದ ಮಗು ಸಹ ಹುಟ್ಟಿತು. ಇವರಿಬ್ಬರ ಮಗುವಿಗೆ ಕೇವಲ ಎರಡೂವರೆ ತಿಂಗಳಾಗಿತ್ತು. ಈ ಕುಟುಂಬ ಸಂತೋಷವಾಗಿ ಜೀವನ ಸಾಗಿಸುತ್ತಿದ್ದರು. ಆದರೆ ಕಳೆದ ಶುಕ್ರವಾರ, ಕೆಲವು ಹುಡುಗರು ನೀರಜ್ ಅಂಗಡಿಗೆ ಹೋಗಿ, ಆತನಿಗೆ ಶಸ್ತ್ರಗಳನ್ನು ಬಳಸಿ, ಇರಿದು, ಘೋರವಾಗಿ ಕೊಲೆ ಮಾಡಿದ್ದಾರೆ. ಈ ರೀತಿ ಮಾಡಿದ್ದು ಯಾರು ಎಂದು ಗೊತ್ತಾಗಿಲ್ಲ. ಆದರೆ ಹುಡುಗಿಯ ಮನೆಯವರೇ ಈ ಕೆಲಸ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ಇದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಸಲಿ ವಿಚಾರ ಏನು ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
Comments are closed.