Neer Dose Karnataka
Take a fresh look at your lifestyle.

ಬಟ್ಟೆ ಹಾಗೂ ಎಲ್ಲಾ ಮೇಕ್ಅಪ್ ಸಾಮಗ್ರಿಗಳನ್ನು ಕಳೆದುಕೊಂಡ ಪೂಜಾ, ಕಾನ್ ಫಿಲ್ಮ್ ಫೆಸ್ಟಿವಲ್‌ ನಡೆದದ್ದು ಏನು ಗೊತ್ತೇ??

14

Get real time updates directly on you device, subscribe now.

ಪ್ರತಿ ಬಾರಿ ಕಾನ್ ಉತ್ಸವ ನಡೆಯುವಾಗ, ಸಾಕಷ್ಟು ವಿಚಾರಗಳು ಸಿನಿಪ್ರಿಯರ ಗಮನ ಸೆಳೆಯುತ್ತದೆ. ವಿಶ್ವವೇ ತಿರುಗಿ ನೋಡುವ ಈ ಕಾನ್ ಫೆಸ್ಟಿವಲ್ ನಲ್ಲಿ ಎಲ್ಲಾ ದೇಶಗಳ ಫೇಮಸ್ ತಾರೆಯರು ಭಾಗಿಯಾಗುತ್ತಾರೆ. ಪ್ರತಿ ಸಲದ ಹಾಗೆ ಈ ಬಾರಿ ಸಹ ಭಾರತದ ಸಾಕಷ್ಟು ಸ್ಟಾರ್ ಕಲಾವಿದೆಯರು ಕಾನ್ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದಾರೆ. ಭಾರತದ ಕಲಾವಿದೆಯರ ವೇಷ ಭೂಷಣ, ಅವರು ಧರಿಸಿರುವ ಉಡುಪುಗಳು ಜನರ ಗಮನ ಸೆಳೆಯುತ್ತಿವೆ. ನಾವೆಲ್ಲರೂ ನೋಡಿರುವ ಊಟಜ್ ನಟಿ ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಊರ್ವಶಿ ರೌಟೇಲ, ಪೂಜಾ ಹೆಗ್ಡೆ ಸೇರಿದಂತೆ ಸಾಕಷ್ಟು ಕಲಾವಿದೆಯ ಕಾನ್ ಫೆಸ್ಟಿವಲ್ ನಲ್ಲಿ ಪಾಲ್ಗೊಂಡಿದ್ದಾರೆ..

ಪ್ರತಿದಿನ ಇವರು ಧರಿಸುತ್ತಿರುವ ವಿಧವಿಧವಾದ ಡಿಸೈನರ್ ಬಟ್ಟೆಗಳನ್ನು ಧರಿಸಿ, ಮಿಂಚುತ್ತಿದ್ದಾರೆ. ಖ್ಯಾತ ನಟಿ ಪೂಜಾ ಹೆಗ್ಡೆ ಅವರು ಸಹ ಕಾನ್ ಫೆಸ್ಟಿವಲ್ ನಲ್ಲಿ ಭಾಗವಹಿಸುತ್ತಿದ್ದಾರೆ. ಎಲ್ಲಾ ಕಲಾವಿದೆಯರು ಅದ್ಧೂರಿಯಾಗಿ ಕಾಣಿಸಿದರೆ, ಪೂಜಾ ಹೆಗ್ಡೆ ಅವರು ಸಿಂಪಲ್ ಲುಕ್ ನಲ್ಲಿ ಮಿಂಚಿದರು. ಪೂಜಾ ಯಾಕೆ ಇಷ್ಟು ಸಿಂಪಲ್ ಆಗಿ ಕಾಣಿಸುತ್ತಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಅದಕ್ಕೆ ಒಂದು ಮುಖ್ಯವಾದ ಕಾರಣ ಇದೆ, ಕಾನ್ ಫೆಸ್ಟಿವಲ್ ಗೆ ಹೋದಾಗ, ನಟಿ ಪೂಜಾ ಹೆಗ್ಡೆ ಕೊನೆಯ ಕ್ಷಣದಲ್ಲಿ ತಮ್ಮ ಮೇಕಪ್, ಕಾಸ್ಟ್ಯೂಮ್ ಎಲ್ಲವನ್ನು ಕಳೆದುಕೊಂಡರಂತೆ. ಹೊರಡುವ ಅವಸರದಲ್ಲಿ ಕಳೆದುಕೊಂಡ ಪೂಜಾ, ಕೊನೆಯ ಕ್ಷಣದಲ್ಲಿ ಹೊಸದಾಗಿ ಎಲ್ಲವನ್ನು ಖರೀದಿ ಮಾಡಿದ್ದಾರೆ.

ಮೊದಲ ದಿನ ಎಲ್ಲಾ ಹೊಸ ಕಾಸ್ಟ್ಯೂಮ್ ಮತ್ತು ಮೇಕಪ್ ಎಲ್ಲವನ್ನು ಖರೀದಿಸುವ ವರೆಗೂ, ಪೂಜಾ ಹೆಗ್ಡೆ ಅವರು ಇಡೀ ದಿನ ಏನನ್ನು ತಿಂದಿರಲಿಲ್ಲವಂತೆ. ಪೂಜಾ ಅವರ ತಂಡ ಸಹ ಏನು ತಿನ್ನದೆ ಹಾಗೆ ಇದ್ದರಂತೆ. ರೆಡ್ ಕಾರ್ಪೆಟ್ ಗೆ ಹೋಗಲೇಬೇಕಿದ್ದ ಕಾರಣ ಎಲ್ಲವನ್ನು ಕೊನೆಯ ಕ್ಷಣದಲ್ಲಿ ಹೊಂದಿಸಿಕೊಂಡು ರೆಡ್ ಕಾರ್ಪೆಟ್ ನಲ್ಲಿ ಸಿಂಪಲ್ ಲುಕ್ ನಲ್ಲಿ ಎಲ್ಲರ ಗಮನೆ ಸೆಳೆದರು ಪೂಜಾ. ಇನ್ಸ್ಟಾಗ್ರಾಮ್ ನಲ್ಲಿ ಕಾನ್ ಫೆಸ್ಟಿವಲ್ ಲುಕ್ ನ ಫೋಟೋಗಳನ್ನು ಪೂಜಾ ಹೆಗ್ಡೆ ಶೇರ್ ಮಾಡಿಕೊಂಡಿದ್ದು, ಬಹಳ ಸುಂದರವಾಗಿ ಕಾಣುತ್ತಿದ್ದಾರೆ. ಆದರೆ ಅಷ್ಟು ದೊಡ್ಡ ಉತ್ಸವಕ್ಕೆ ಹೋದಾಗ, ಪೂಜಾ ಅವರು ಎಲ್ಲವನ್ನು ಕಳೆದುಕೊಂಡಿದ್ದು ಮಾತ್ರ, ಬೇಸರದ ವಿಚಾರ.

Get real time updates directly on you device, subscribe now.

Leave A Reply

Your email address will not be published.