ಸಾಲು ಸಾಲು ಸೋಲನ್ನು ಅನುಭವಿಸುತ್ತಿದ್ದರೂ ಕೂಡ ಐಷಾರಾಮಿ ಕಾರು ಖರೀದಿ ಮಾಡಿದ ಕಂಗನಾ, ಇದರ ಬೆಲೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??
ಬಾಲಿವುಡ್ ನಟಿ ಕಂಗನಾ ರರಣಾವತ್ ಸಿನಿಮಾಗಳ ವಿಷಯಕ್ಕೆ ಎಷ್ಟು ಸುದ್ದಿಯಾಗುತ್ತಾರೋ, ಅದಕ್ಕಿಂತ ಹೆಚ್ಚಾಗಿ ವಿವಾದಗಳಿಂದ ಸುದ್ದಿಯಾಗುತ್ತಾರೆ. ನೇರವಾದ ಹೇಳಿಕೆಗಳನ್ನು ನೀಡುವ ಮೂಲಕ ಕಂಗನಾ ಹಲವು ಬಾರಿ ಸೆಲೆಬ್ರಿಟಿಗಳ ಮತ್ತು ನೆಟ್ಟಿಗರ ಕೆಂಗಣ್ಣಿಗೆ ಗೂರಿಯಾಗಿದ್ದಾರೆ. ಇದೀಗ ಕಂಗನಾ ರಣಾವತ್ ಅಭಿನಯದ ಢಾಕಡ್ ಸಿನಿಮಾ ತೆರೆಕಾಣಲು ಇನ್ನೇನು ಕೆಲ ದಿನಗಳಿವೆ. ಸಿನಿಮಾ ಬಿಡುಗಡೆ ಆಗುವ ಮೊದಲು ಐಷಾರಾಮಿ ಕಾರ್ ಒಂದನ್ನು ಖರೀದಿ ಮಾಡಿ, ಸುದ್ದಿಯಾಗಿದ್ದಾರೆ ನಟಿ ಕಂಗನಾ. ಇವರು ಖರೀದಿ ಮಾಡಿರುವ ಈ ದುಬಾರಿ ಕಾರ್ ಪ್ರಪಂಚದ ಶ್ರೀಮಂತ ವ್ಯಕ್ತಿಗಳ ಬಳಿ ಇದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಕಂಗನಾ ಖರೀದಿ ಮಾಡಿರುವ ಆ ಕಾರ್ ಯಾವುದು ಗೊತ್ತಾ?
ನಟಿ ಕಂಗನಾ ರಣಾವತ್, ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡುವ ಮೂಲಕ ತಾವು ಹೊಸ ಕಾರ್ ಖರೀದಿ ಮಾಡಿರುವ ವಿಚಾರವನ್ನು ತಿಳಿಸಿದ್ದಾರೆ. ಕಂಗನಾ ಅವರು ನಿನ್ನೆಯಷ್ಟೇ ಕಾರ್ ನ ಡೆಲಿವರಿ ಪಡೆದಿದ್ದಾರೆ, ಇವರು ಖರೀದಿ ಮಾಡಿರುವುದು ಮರ್ಸಿಡಿಸ್ ಬೆಂಜ್ ಮೇ ಬ್ಯಾಚ್ ಎಸ್ ಕ್ಲಾಸ್ 680 ಕಾರ್ ಆಗಿದ್ದು , ಆಮದು ಮಾಡಿಕೊಳ್ಳುವ ಕಾರ್ ನ ಇದರ ಬೆಲೆ ಬರೋಬ್ಬರಿ 3.2ಕೋಟಿ ರೂಪಾಯಿ ಆಗಿದೆ. ದೇಶೀಯವಾಗಿ ಭಾರತದಲ್ಲೇ ತಯಾರಾಗುವ ಎಸ್ ಕ್ಲಾಸ್ 580 ಮಾಡೆಲ್ ನ ಬೆಲೆ 2.85ಕೋಟಿ ರೂಪಾಯಿ ಆಗಿದೆ. ಕಂಗನಾ ರಣಾವತ್ ಸಿನಿಮಾ ಸೋಲುಗಳ ನಡುವೆ ಇಷ್ಟು ದುಬಾರಿ ಬೆಲೆಯ ಕಾರ್ ಖರೀದಿ ಮಾಡಿರುವುದು ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ. ಆದರೂ ಕಂಗನಾ ಅಭಿಮಾನಿಗಳು ಮಾತ್ರ ತಮ್ಮ ಮೆಚ್ಚಿನ ನಟಿ ದುಬಾರಿ ಬೆಲೆಯ ಕಾರ್ ಖರೀದಿ ಮಾಡಿರುವುದಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ.
ಮರ್ಸಿಡಿಸ್ ಬೆಂಜ್ ಇಂಡಿಯಾ ಕಂಪನಿಯ ಎಂಡಿ ಮತ್ತು ಸಿಇಒ ಆಗಿರುವ ಮಾರ್ಟಿನ್ ಶ್ವಾಂಕ್ ಅವರು ಹೇಳಿರುವ ಪ್ರಕಾರ, ಈ ವರ್ಷ ಭಾರತದಲ್ಲಿ ಬೆಂಜ್ ಸಂಸ್ಥೆ ಹೊಸದಾದ 10 ಕಾರ್ ಗಳನ್ನು ಬಿಡುಗಡೆ ಮಾಡಲಿದೆ. ಅವುಗಳಲ್ಲಿ ಒಂದು, EXS ಎಲೆಕ್ಟ್ರಿಕ್ ಕಾರ್ ಸಹ ಆಗಿದೆ. ಇನ್ನು ಭಾರತದಲ್ಲೇ ತಯಾರಾಗುವ ಮೇ ಬ್ಯಾಚ್ ಎಸ್ ಕ್ಲಾಸ್ ಕಾರ್ ಅನ್ನು ಅಚ್ಚರಿಗೊಳಿಸುವ ವಿನ್ಯಾಸದಲ್ಲಿ ತಯಾರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಾರ್ ನ ಬಾನೆಟ್ ಮತ್ತು ಗ್ರಿಲ್ ಅನ್ನು ಮೊದಲಿಗೆ ನೋಡಬಹುದು. ಈ ಕಾರ್ ಗೆ 19 ಇಂಚ್ ನ ರೆಟ್ರೋ ಮೊನೊ ಬ್ಲಾಕ್ ವಿನ್ಯಾಸ ಇರುವ ಚಕ್ರಗಳನ್ನು ನೀಡಲಾಗಿದೆಯಂತೆ. ಎಸ್ ಕ್ಲಾಸ್ ಲಿಮೊಸಿನ್ ಕಾರ್ 5.7 ಮೀಟರ್ ಉದ್ದದ ಕಾರ್ ಆಗಿದೆ, ಇದರಲ್ಲಿ 13 ಮಿಲಿಯನ್ ಮೈಕ್ರೋ ಮಿರರ್ ಗಳ ಡಿಜಿಟಲ್ ಹೆಡ್ ಲ್ಯಾಂಪ್ ಸಹ ನೀಡಲಾಗಿದೆ.
Comments are closed.