ಇಂದು ಐಷಾರಾಮಿ ಜೀವನ ನಡೆಸುತ್ತಿರುವ ಡಿಬಾಸ್ ದರ್ಶನ್ ಅವರು, ಅಂದು ತಂದೆ ವಿಧಿವಶರಾದಾಗ ಹಣ ಇಲ್ಲದೆ, ಮಾಡಿದ ಸಾಲ ಎಷ್ಟು? ಅಂದು ಡಿಬಾಸ್ ಗೆ ಸಹಾಯ ಮಾಡಿದ್ದು ಯಾರು ಗೊತ್ತಾ?
ಕನ್ನಡ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್, ಅಭಿಮಾನಿಗಳ ಮೆಚ್ಚಿನ ಡಿಬಾಸ್ ಎಂದು ಖ್ಯಾತಿ ಪಡೆದಿರುವವರು ನಟ ದರ್ಶನ್. ಇವರು ಕನ್ನಡ ಚಿತ್ರರಂಗದ ಖ್ಯಾತ ನಟ ಖಳನಟ ಹಾಗೂ ಪೋಷಕ ನಟನಾಗಿ ಗುರುತಿಸಿಕೊಂಡಿದ್ದ, ತೂಗುದೀಪ ಶ್ರೀನಿವಾಸ್ ಅವರ ಮಗನಾಗಿದ್ದರು ಸಹ, ದರ್ಶನ್ ಅವರಿಗೆ ಚಿತ್ರರಂಗದಲ್ಲಿ ಅಷ್ಟು ಸುಲಭವಾಗಿ ಅವಕಾಶಗಳು ಸಿಗಲಿಲ್ಲ. ಬಹಳ ಕಷ್ಟಪಟ್ಟು, ಏನು ಇಲ್ಲದ ಸ್ಥಿತಿಯಲ್ಲಿ ಬಂದು, ಇಂದು ಹೈಯೆಸ್ಟ್ ಪೇಡ್ ಕನ್ನಡ ಆಕ್ಟರ್ ಆಗಿ ಬೆಳೆದಿದ್ದಾರೆ ಡಿಬಾಸ್. ಇಂದು ಐಷಾರಾಮಿ ಜೀವನ ಹಾಗೂ ಶ್ರೀಮಂತಿಕೆ ಅನುಭವಿಸುತ್ತಿರುವ ಡಿಬಾಸ್ ಅವರು ಅಂದು ತಂದೆ ದಿಢೀರ್ ಮರಣ ಹೊಂದಿದಾಗ, ಮಾಡಿದ ಸಾಲ ಎಷ್ಟು? ಅವರಿಗೆ ಸಾಲ ನೀಡಿದ್ದು ಯಾರು ಗೊತ್ತಾ?
ತೂಗುದೀಪ ಶ್ರೀನಿವಾಸ್ ಅವರು ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ನಟಿಸಿದರು, 70 ಮತ್ತು 80 ರ ದಶಕದ ಪ್ರಮುಖ ವಿಲ್ಲನ್ ಆಗಿ ಗುರುತಿಸಿಕೊಂಡಿದ್ದರು ತೂಗುದೀಪ ಶ್ರೀನಿವಾಸ್. ನೂರಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಹಿರಿಯನಟ ಆಗಿದ್ದರೂ ಸಹ ಕೊನೆಗಾಲದಲ್ಲಿ ಹಾಲು ಕೊಂಡುಕೊಳ್ಳಲು ಸಹ ಕಷ್ಟಪಡುವಂತಹ ಪರಿಸ್ಥಿತಿ ಎದುರಾಗಿತ್ತು. ಅದೆಲ್ಲವನ್ನು ಬಹಳ ಕಷ್ಟದಿಂದ ಎದುರಿಸಿದ್ದರು, ತಂದೆ ಇನ್ನಿಲ್ಲವಾದಾಗ ದರ್ಶನ್ ಅವರು ನೀನಾಸಂ ನಲ್ಲಿ ನಟನೆ ಕಲಿಯುತ್ತಿದ್ದರು. ತಂದೆಗೆ ದರ್ಶನ್ ಅವರು ಚಿತ್ರರಂಗಕ್ಕೆ ಬರುವುದು ಇಷ್ಟವಿರಲಿಲ್ಲ. ಆದರೂ ಚಿತ್ರರಂಗದಲ್ಲೇ ಸಾಧನೆ ಮಾಡುವುದಾಗಿ ದರ್ಶನ್ ಅವರು ನೀನಾಸಂ ಗೆ ಸೇರಿಕೊಂಡಿದ್ದರು, ಅಲ್ಲಿರುವಾಗ ತಂದೆ ವಿಧಿವಶರಾದ ವಿಚಾರ ಬರಸಿಡಿಲಿನಂತೆ ಬಡಿಯಿತು.
ಅಂದು ನೀನಾಸಂ ಇಂದ ಮೈಸೂರಿಗೆ ಬರಲು ದರ್ಶನ್ ಅವರ ಬಳಿ ಬಿಡಿಗಾಸು ಸಹ ಇರಲಿಲ್ಲ. ಅಂದು ಡಿಬಾಸ್ ಅವರಿಗೆ ಸಹಾಯ ಮಾಡಿದ್ದು, ರತ್ನಮ್ಮ ಅವರು, ನೀನಾಸಂ ನಲ್ಲಿ ಮೆಸ್ ನಡೆಸುತ್ತಿದ್ದ ರತ್ನಮ್ಮ ಅವರು ದರ್ಶನ್ ಅವರಿಗೆ 500 ರೂಪಾಯಿ ಕೊಟ್ಟು ಕಳಿಸಿದ್ದರು. ಆ ಹಣದಿಂದಲೇ ದರ್ಶನ್ ಅವರು ಮೈಸೂರಿಗೆ ಬಂದು, ತಂದೆಯ ಅಂತ್ಯ ಸಂಸ್ಕಾರಗಳನ್ನು ಮುಗಿಸಿದ್ದರು. ಅಂದು ಇಲ್ಲಿ ಏನಾದರೂ ಸಾಧನೆ ಮಾಡಲೇಬೇಕು ಎಂದು ನಿರ್ಧರಿಸಿ, ಇಂದು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಹಾಗೆಯೇ, ತಾವು ಬೆಳೆಯುವುದರ ಜೊತೆಗೆ, ತಮ್ಮ ಸುತ್ತ ಇರುವವರನ್ನು ಸಹ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾ, ಅವರಿಗೂ ಸಹಾಯ ಮಾಡುತ್ತಾರೆ ಡಿಬಾಸ್. ಅಭಿಮಾನಿಗಳು ಅಂದ್ರೆ ಡಿಬಾಸ್ ಅವರಿಗೆ ಬಹಳ ಸ್ಪೆಷಲ್, ಅಭಿಮಾನಿಗಳನ್ನು ಡಿಬಾಸ್ ಸೆಲೆಬ್ರಿಟಿ ಎಂದು ಕರೆಯುತ್ತಾರೆ, ಡಿಬಾಸ್ ಅವರ ಈ ಗುಣ ಎಲ್ಲಾ ಅಭಿಮಾನಿಗಳಿಗೆ ಬಹಳ ಇಷ್ಟವಾಗುವಂಥದ್ದು.
Comments are closed.