ಪೋಷಕ ಪಾತ್ರಗಳ ಮೂಲಕ ಎಲ್ಲರ ಮನೆಸೆಯುತ್ತಿರುವ ಕಿರುತೆರೆ ನಟಿ ಸ್ವಪ್ನ ರವರ ಸಂಪೂರ್ಣ ಹಿನ್ನೆಲೆ ಏನು ಗೊತ್ತೇ?? ಅವರ ಬಗ್ಗೆ ಕಂಪ್ಲೀಟ್ ಮಾಹಿತಿ ನಿಮಗೆ ಗೊತ್ತೇ?
ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ವರ್ಷಗಳಿಂದ ಸಕ್ರಿಯರಾಗಿರುವವರು ನಟಿ ಸಪ್ನಾ ದೀಕ್ಷಿತ್. ಕಿರುತೆರೆ ವೀಕ್ಷಕರಿಗೆ ಇವರು ಚಿರಪರಿಚಿತರಾಗಿರುತ್ತಾರೆ. ಯಾಕಂದ್ರೆ ಈಗಲೂ ಸಹ ಸಾಕಷ್ಟು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಇವರು ಒಂದೇ ಸಮಯದಲ್ಲಿ ಮೂರು ಧಾರವಾಹಿಗಳಲ್ಲಿ ನಟಿಸುತ್ತಿದ್ದಾರೆ. ಜೀಕನ್ನಡ ವಾಹಿನಿಯ ಕಮಲಿ ಧಾರಾವಾಹಿಯಲ್ಲಿ ರಿಷಿ ತಾಯಿ ತಾರಾ ಪಾತ್ರ. ಹಾಗೂ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರಗುತ್ತಿದ್ದ ಇಂತಿ ನಿಮ್ಮ ಆಶಾ ಧಾರವಾಹಿಯಲ್ಲಿ ಮೋನಿಕಾ ಎನ್ನುವ ವಿಲ್ಲನ್ ಪಾತ್ರ, ಹಾಗೂ ಉದಯ ಟಿವಿಯ ಸೇವಂತಿ ಧಾರಾವಾಹಿಯಲ್ಲಿ ಇನ್ಸ್ಪೆಕ್ಟರ್ ಪಾತ್ರ, ಹೀಗೆ ವಿಭಿನ್ನವಾದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಸಪ್ನಾ ದೀಕ್ಷಿತ್.
ಇವರ ನಿಜವಾದ ಹೆಸರು ನಳಿನಿ, ಈ ಹೆಸರು ಸಪ್ನಾ ಆಗಿದ್ದಕ್ಕೆ ಒಂದು ಕಥೆಯೇ ಇದೆ. ನಳಿನಿ ಅವರ ತಾಯಿ ಏಕ್ ದು ಜೆ ಕೆ ಲಿಯೇ ಸಿನಿಮಾ ನೋಡಿ, ತಮ್ಮ ಮಗಳಿಗೂ ಸಪ್ನಾ ಎಂದು ಹೆಸರಿಟ್ಟರು. ಹೀಗೆ ಸಪ್ನಾ ಅವರಿಗೆ ಸಿನಿಮಾ ನಂಟು ಶುರುವಾಯಿತು. ಶಾಲಾ ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು ಹರಿಣಿ. ಕಾಲೇಜಿನಲ್ಲಿ ಇವರು ಒಂದು ಅಂತ್ಯಾಕ್ಷರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅದನ್ನು ಒಬ್ಬ ಕ್ಯಾಮೆರಾ ಮ್ಯಾನ್ ನೋಡಿ, ಕಾರ್ಯಕ್ರಮ ನಡೆಸಿಕೊಡಲು ಇಂಟರೆಸ್ಟ್ ಇದೆಯೇ ಎಂದು ಕೇಳಿದರು, ಅಲ್ಲಿಂದ ಸಪ್ನಾ ಅವರ ಬಣ್ಣದ ಬದುಕು ಶುರುವಾಯಿತು. ನಿರೂಪಕಿಯಾಗಿ ಕೆಲಸ ಮಾಡುವಾಲು ಬಣ್ಣದ ಬದುಕಿನಲ್ಲಿ ಮುಂದಿನ ಜೀವನ ಸಾಗುತ್ತದೆ ಎಂದು ಅವರು ಅಂದುಕೊಂಡಿರಲಿಲ್ಲವಂತೆ.ಅಲ್ಲಿಂದ ಶುರುವಾದ ಸಪ್ನಾ ಅವರ ಜರ್ನಿ, ನಂತರದ ದಿನಗಳಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರು.
ಪ್ರಾಯಶ್ಚಿತ್ತ ಹೆಸರಿನ ಧಾರವಾಹಿ ಮೂಲಕ ನಟನೆ ಶುರು ಮಾಡಿದ ಸಪ್ನಾ ಅವರು, ನಂತರ ಹಿಂದಿರುಗಿ ನೋಡಿದ್ದೇ ಇಲ್ಲ, ಸಿಲ್ಲಿ ಲಲ್ಲಿ, ಪಾಪಾ ಪಾಂಡು, ದಂಡಪಿಂಡಗಳು, ದರಿದ್ರ ಲಕ್ಷ್ಮಿಯರು, ಜನನಿ, ಪಾಂಡುರಂಗ ವಿಠಲ, ಮಾಂಗಲ್ಯ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದರು. ಕಿರುತೆರೆ ಮಾತ್ರವಲ್ಲದೆ, ಸಿನಿಮಾಗಳಲ್ಲೂ ನಟಿಸಿದ್ದಾರೆ ಸಪ್ನಾ, ರಂಗಿತರಂಗ, ಭರ್ಜರಿ, ರನ್ನ, ಕೃಷ್ಣರುಕ್ಕು, ನಿಜ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದು ಮಾತ್ರವಲ್ಲದೆ, ಕೆಲವು ಕುಕ್ಕರಿ ಶೋಗಳನ್ನು ಸಹ ನಿರೂಪಣೆ ಮಾಡಿದ್ದಾರೆ. ಕೇಬಲ್ ಟಿವಿಯವರು ನಡೆಸಿದ ಪ್ರಶಸ್ತಿ ಕಾರ್ಯಕ್ರಮದಲ್ಲಿ ಸಪ್ನಾ ಅವರಿಗೂ ವರ್ಸಟೈಲ್ ಅವಾರ್ಡ್ ಸಿಕ್ಕಿತು, ,”ಮಾಡು ಆ ಕೆಲಸದಲ್ಲಿ ಶ್ರದ್ಧೆ ಇಟ್ಟು ಪ್ರಯತ್ನ ಪಟ್ಟರೆ, ಅದಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಅದರಲ್ಲಿ ಎರಡು ಮಾತಿಲ್ಲ, ನಾನು ಕೂಡ ಅಷ್ಟೇ, ಯಾವುದೇ ಪಾತ್ರ ಸಿಕ್ಕರು, ನನ್ನಿಂದ ಆದಷ್ಟು ಅದಕ್ಕೆ ಜೀವ ತುಂಬುತ್ತೇನೆ..” ಎನ್ನುತ್ತಾರೆ ಸಪ್ನಾ. ಮುಂದಿನ ದಿನಗಳಲ್ಲಿ ಇವರು ಇನ್ನು ಹೆಚ್ಚಿನ ಧಾರವಾಹಿಗಳಲ್ಲಿ ನಟಿಸಲಿ ಎನ್ನುವುದು ಇವರ ಅಭಿಮಾನಿಗಳ ಆಸೆ.
Comments are closed.