ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುವ ಕಾವ್ಯ ರವರು ಒಮ್ಮೆಲೇ ಮಸ್ತ್ ಫೋಟೋಶೂಟ್ ಮೂಲಕ ಅಭಿಮಾನಿಗಳ ಮನಗೆದ್ದದು ಹೇಗೆ ಗೊತ್ತೇ?? ಹೇಗಿವೆ ಗೊತ್ತೇ ಫೋಟೋಗಳು??
ಕನ್ನಡ ಕಿರುತೆರೆಯಲ್ಲಿ ಬಹಳ ಖ್ಯಾತಿ ಪಡೆದಿರುವ ಖ್ಯಾತ ನಟಿಯರಲ್ಲಿ ಒಬ್ಬರು ಕಾವ್ಯ ಮಹಾದೇವ್. ನಮ್ಮನೆ ಯುವರಾಣಿ ಧಾರಾವಾಹಿಯ ಅಹಲ್ಯಾ ಪಾತ್ರದಿಂದ ಜನರಿಗೆ ಬಹಳ ಇಷ್ಟ ಆಗಿರುವ ಕಾವ್ಯ ಮಹಾದೇವ್ ಅವರು ಕೆಲವು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಕೆಲವು ಧಾರವಾಹಿಗಳಲ್ಲಿ ನಟಿಸಿ, ಮನೆಮಾತಾಗಿದ್ದಾರೆ. ಇವರು ನಟಿಸಿದ ಮೊದಲ ಧಾರವಾಹಿ ಚರಣದಾಸಿ, ಅದು ಸಹ ಕಲರ್ಸ್ ಕನ್ನಡ ವಾಹಿನಿಯಲ್ಲೇ ಪ್ರಸಾರವಾಗಿತ್ತು. ಅದಾದ ಬಳಿಕ ನಾ ನಿನ್ನ ಬಿಡಲಾರೆ ಧಾರವಾಹಿಯಲ್ಲಿ ನಟಿಸಿದ್ದರು. ಪ್ರಸ್ತುತ ನಮ್ಮನೆ ಯುವರಾಣಿ ಧಾರಾವಾಹಿಯ ವಿಭಿನ್ನವಾದ ಪಾತ್ರದ ಮೂಲಕ ಜನಮನ್ನಣೆ ಪಡೆದುಕೊಂಡಿದ್ದಾರೆ..
ಕಾವ್ಯ ಮಹಾದೇವ್ ಅವರು ಸಾಮಾನ್ಯವಾಗಿ ಸಾಂಸ್ಕೃತಿಕ ಉಡುಗೆಗಳಲ್ಲಿ ಅಪ್ಪಟ ಸೊಸೆಯ ಕಾಸ್ಟ್ಯೂಮ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಗ್ಲಾಮರಸ್ ಲುಕ್ ನಲ್ಲಿ ಹೊಸ ಫೋಟೋಶೂಟ್ ಮಾಡಿಸಿ, ಅವುಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕಾವ್ಯ ಮಹಾದೇವ್ ಅವರ ಈ ಹೊಸ ಅವತಾರ ನೋಡಿ ಅಭಿಮಾನಿಗಳು ಬಹಳ ಆಶ್ಚರ್ಯ ಪಟ್ಟಿದ್ದಾರೆ. ಲೆಹೆಂಗಾ ಹಾಗೂ ಕ್ರಾಪ್ ಟಾಪ್ ಧರಿಸಿ ಮಿಂಚಿದ್ದಾರೆ ಕಾವ್ಯ, ಲೆಹೆಂಗಾ ಗೆ ಮಾಡಿರುವ ಡಿಸೈನರ್ ವರ್ಕ್ ಗಳು ಜನರ ಗಮನ ಸೆಳೆದಿದೆ. ಈ ಕಾಸ್ಟ್ಯೂಮ್ ಗೆ ಸಿಂಪಲ್ ಆದ ಮೇಕಪ್ ಧರಿಸಿ, ಬೋಲ್ಡ್ ಆದ ಐ ಲೈನರ್ಸ್, ಐ ಶ್ಯಾಡೋ ಅಪ್ಲೈ ಮಾಡಿದ್ದು, ಸುಂದರವಾಗಿ ಕಾಣಿಸುತ್ತಿದ್ದಾರೆ ಕಾವ್ಯ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಕಮೆಂಟ್ಸ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಈ ಹಿಂದೆ ಕೆಲವು ಧಾರಾವಾಹಿಗಳಲ್ಲಿ ಕಾವ್ಯ ಮಹಾದೇವ್ ಅವರು ನಟಿಸಿದ್ದರೂ ಸಹ, ನಮ್ಮನೆ ಯುವರಾಣಿ ಧಾರಾವಾಹಿಯ ಅಹಲ್ಯಾ ಪಾತ್ರ ಇವರಿಗೆ ಇನ್ನು ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದೆ. ಮೊದಲ ಬಾರಿಗೆ ನೆಗಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸಿ, ಯಾವ ಪಾತ್ರವನ್ನಾದರೂ ಅಚ್ಚುಕಟ್ಟಾಗಿ ಮಾಡುವ ಭರವಸೆ ಮೂಡಿಸಿದರು ಕಾವ್ಯ. ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ, ತನ್ನ ತಂದೆಯ ಸಾವಿಗೆ ರಾಜ್ ಗುರು ಕುಟುಂಬವೇ ಕಾರಣ ಎಂದು ಭಾವಿಸಿ, ಆ ಮನೆತನವನ್ನು ನಾಶ ಮಾಡಲು, ಎಲ್ಲರನ್ನು ಮಂಕು ಮಾಡಿ ಸಾಕೇತ್ ರಾಜ್ ಗುರು ಜೊತೆಗೆ ಮದುವೆಯಾಗುವ ಅಹಲ್ಯಾ ಪಾತ್ರದಲ್ಲಿ ನಟಿಸುತ್ತಿದ್ದಾರೆ ಕಾವ್ಯ ಮಹಾದೇವ್.
Comments are closed.