ಸಿಹಿ ಸುದ್ದಿ ನೀಡಿದ ಕನ್ನಡತಿ ತಂಡ: ಗಾಸಿಪ್ ಗಳಿಗೆ ಬ್ರೇಕ್ ಹಾಕಿ ಅಭಿಮಾನಿಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದು ಹೇಗೆ ಗೊತ್ತೇ? ಏನಾಗುತ್ತದೆ ಕನ್ನಡತಿ ಕಥೆ??
ಕನ್ನಡ ಕಿರುತೆರೆಯಲ್ಲಿ ಸೆನ್ಸೇಷನ್ ಸೃಷ್ಟಿಸಿ ಎಲ್ಲರ ಮನಗೆದ್ದಿರುವ ಧಾರವಾಹಿ ಕನ್ನಡತಿ. ಧಾರಾವಾಹಿಯಲ್ಲಿ ವೀಕ್ಷಕರು ಕಾಯುತ್ತಿದ್ದ ಕ್ಷಣ ಈಗ ಬಂದಿದೆ. ಹರ್ಷ ಮತ್ತು ಭುವಿಯ ಮದುವೆಗೆ ಈಗಾಗಲೇ ದಿನಗಣನೆ ಆರಂಭವಾಗಿದ್ದು, ಮದುವೆ ವಿಚಾರದಲ್ಲೂ ಕನ್ನಡತಿ ಧಾರವಾಹಿ ಸೆನ್ಸೇಷನ್ ಸೃಷ್ಟಿಸಿದೆ. ಇದರ ನಡುವೆಯೇ ಕನ್ನಡತಿ ಧಾರವಾಹಿ ಇನ್ನೇನು ಮುಗಿದೆ ಹೋಗುತ್ತದೆ, ಹರ್ಷ ಭುವಿ ಮದುವೆ ನಂತರ ಕನ್ನಡತಿ ಧಾರವಾಹಿ ಮುಕ್ತಾಯವಾಗಲಿದೆ ಎನ್ನುವ ಗಾಸಿಪ್ ಒಂದು ನಿನ್ನೆಯಿಂದ ಹರಿದಾಡುತ್ತಿದೆ. ನಿಜವಾಗಿಯೂ ಕನ್ನಡತಿ ಧಾರವಾಹಿ ಮುಗಿದು ಹೋಗುತ್ತದೆಯೇ ಎನ್ನುವ ಗೊಂದಲ ವೀಕ್ಷಕರಲ್ಲಿ ಮೂಡಿತ್ತು. ಇದೀಗ ಅದೆಲ್ಲದಕ್ಕೂ ಉತ್ತರ ಸಿಕ್ಕಿದೆ..
ಕನ್ನಡತಿ ಧಾರವಾಹಿ ಆರಂಭವಾದಾಗಿನಿಂದಲೂ ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ. ಕಥೆ ಸಾಗುತ್ತಿರುವ ರೀತಿ, ಅಪ್ಪಟ ಕನ್ನಡ ಸಂಭಾಷಣೆಗಳು,ಹರ್ಷ ಭುವಿ ಎಲ್ಲವು ಸಹ ವೀಕ್ಷಕರಿಗೆ ಬಹಳ ಇಷ್ಟವಾಯಿತು. ಹರ್ಷ ಪ್ರೊಪೋಸ್ ಮಾಡಿದ್ದರೂ ಸಹ, ವರುಧಿನಿಯ ಕಾರಣದಿಂದ ಭುವಿ ಒಪ್ಪಿಕೊಂಡಿರಲಿಲ್ಲ, ನಂತರ ಹರ್ಷನ ಮೇಲಿನ ಪ್ರೀತಿಯಿಂದ ಭುವಿ ಹರ್ಷನ ಪ್ರೀತಿಯನ್ನು ಒಪ್ಪಿಕೊಂಡು, ಸಾಕಷ್ಟು ಅಡೆತಡೆಗಳ ನಡುವೆಯೇ ಭುವಿ ಹರ್ಷನ ನಿಶ್ಚಿತಾರ್ಥ ನಡೆಯಿತು. ಅಭಿಮಾನಿಗಳೆಲ್ಲರು ಈಗ ಹರ್ಷ ಭುವಿ ನೋಡಬೇಕು ಎಂದು ಆಸೆ ಇಟ್ಟುಕೊಂಡಿದ್ದಾರೆ.
ಇದೀಗ ಹರ್ಷ ಭುವಿ ಮದುವೆಗೆ ದಿನಗಣನೆ ಶುರುವಾಗಿದೆ. ಹರ್ಷ ಭುವಿ ಮದುವೆಗೆ ದಿನಾಂಕ ನಿಗದಿಯಾಗಿ, ವೆಡ್ಡಿಂಗ್ ಕಾರ್ಡ್ ಸಹ ಪ್ರಿಂಟ್ ಆಗಿದೆ. ಈ ನಡುವೆ ಹರ್ಷ ಭುವಿ ಕನ್ನಡದ ರೀತಿಯಲ್ಲಿ ಮದುವೆ ಆಗುತ್ತಾರೆ ಎನ್ನುವ ವಿಷಯ ಸಹ ತಿಳಿದುಬಂದಿದೆ. ಹರ್ಷ ಭುವಿ ಮದುವೆ ಅಪ್ಪಟ ಕನ್ನಡ ಸಂಸ್ಕೃತಿಯ ರೀತಿಯಲ್ಲಿ, ಕನ್ನಡ ಮಂತ್ರಗಳನ್ನು ಪಠಿಸುವ ಮೂಲಕ ಹರ್ಷ ಭುವಿ ಮದುವೆ ನಡೆಯಲಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಬಹಳ ಥ್ರಿಲ್ ಆಗಿದ್ದರು. ಅದಾದ ಬಳಿಕವೇ, ಮದುವೆ ಎಪಿಸೋಡ್ ನಂತರ ಕನ್ನಡತಿ ಧಾರವಾಹಿ ಮುಗಿದು ಹೋಗುತ್ತದೆ ಎನ್ನುವ ಸುದ್ದಿ ಸಹ ಕೇಳಿಬಂದಿತ್ತು. ಇದನ್ನು ಕೇಳಿ ಅಭಿಮಾನಿಗಳಿಗೆ ನಿಜಕ್ಕೂ ಘಾಸಿಯಾಗಿತ್ತು.
ಮದುವೆ ನಂತರ ಕನ್ನಡತಿ ಕಥೆಯನ್ನು ಇನ್ನು ಚೆನ್ನಾಗಿ ತೆಗೆದುಕೊಂಡು ಹೋಗಬಹುದು ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ, ನಮ್ಮ ಭಾವನೆಗಳ ಜೊತೆಗೆ ಆಟವಾಡಬೇಡಿ, ಧಾರಾವಾಹಿಯ ಜೊತೆಗೆ ನಾವು ಪ್ರಯಾಣ ಮಾಡುತ್ತಿದ್ದೇವೆ, ಇಂತಹ ಉತ್ತಮವಾದ ಘಟ್ಟದಲ್ಲಿ ಧಾರವಾಹಿ ನಿಲ್ಲಿಸಿದರೆ ನಮಗೆಲ್ಲ ತುಂಬಾ ನೋವಾಗುತ್ತದೆ. ಈಗ ಬರುತ್ತಿರುವ ಎಲ್ಲಾ ಧಾರವಾಹಿಗಳಿಗಿಂತ ಕನ್ನಡತಿ ಧಾರವಾಹಿ ಬಹಳ ವಿಭಿನ್ನವಾಗಿದೆ. ಅತ್ಯುತ್ತಮವಾಗಿ ಮೂಡಿ ಬರುತ್ತಿದೆ, ಇಂತಹ ಸಮಯದಲ್ಲಿ ಧಾರವಾಹಿ ನಿಲ್ಲಿಸಿ, ನಮಗೆಲ್ಲ ಬೇಸರ ಆಗುವ ಹಾಗೆ ಮಾಡಬೇಡಿ..
ನಮ್ಮಗಳ ಜೊತೆಗೆ ಆಟವಾಡಬೇಡಿ, ಧಾರಾವಾಹಿಯ ಜೊತೆ, ಹರ್ಷ ಭುವಿ ಜೊತೆಗೆ ನಾವು ತುಂಬಾ ಕನೆಕ್ಟ್ ಆಗಿದ್ದೇವೆ, ಧಾರವಾಹಿ ನಿಲ್ಲಿಸಬೇಡಿ ಎಂದು ಅಭಿಮಾನಿಗಳು ವಾಹಿನಿಯಲ್ಲಿ ಮನವಿ ಮಾಡಿದ್ದರು. ಇಂಥದ್ದೊಂದು ಸುದ್ದಿ, ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಇದೀಗ ಚಾನೆಲ್ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಧಾರವಾಹಿ ನಿಲ್ಲುವುದಿಲ್ಲ, ಹರ್ಷ ಭುವಿ ಮದುವೆ ನಂತರ, ಇನ್ನು ಕುತೂಹಲಕಾರಿ ಕಥೆಗಳು ನಡೆಯಲಿದೆ. ಈಗಲೇ ಧಾರವಾಹಿ ನಿಲ್ಲುವುದಿಲ್ಲ ಎಂದು ಕಲರ್ಸ್ ಕನ್ನಡ ವಾಹಿನಿ ಸ್ಪಷ್ಟನೆ ನೀಡಿದೆ.
ಇದನ್ನು ಕೇಳಿದ ಬಳಿಕ ಅಭಿಮಾನಿಗಳಿಗೆ ತುಸು ನೆಮ್ಮದಿ ಆಗಿದೆ. ಹರ್ಷ ಭುವಿ ಮದುವೆ ಯಾವ ರೀತಿ ವಿಭಿನ್ನವಾಗಿ ಇರುತ್ತದೆ ಎನ್ನುವುದನ್ನು ನೋಡಲು, ಅಭಿಮಾನಿಗಳು ಕಾಯುತ್ತಿದ್ದಾರೆ. ಮದುವೆ ಸಂಚಿಕೆಗಳು ಯಾವಾಗ ಶುರುವಾಗುತ್ತದೆ, ಹರ್ಷ ಭುವಿ ಮದುವೆ ಬಳಿಕ ಕಥೆ ಯಾವ ರೀತಿ ಸಾಗುತ್ತದೆ ಎಂದು ಕಾದು ನೋಡಬೇಕಿದೆ.
Comments are closed.