ಕಡಿಮೆ ಬೆಲೆಗೆ ಭರ್ಜರಿ ಡೇಟಾ ಪ್ಲಾನ್ ಅನ್ನು ಬಿಡುಗಡೆ ಮಾಡಿದ ಜಿಯೋ ಸಂಸ್ಥೆ. ಮತ್ತೊಮ್ಮೆ ಟೆಲೆಕಾಂ ಕ್ಷೇತ್ರದಲ್ಲಿ ತಲ್ಲಣ. ಬೆಲೆ ಹಾಗೂ ಲಾಭಗಳೇನು ಗೊತ್ತೇ?
ನಮ್ಮ ದೇಶದ ಅತ್ಯುತ್ತಮ ಟೆಲಿಕಾಂ ಸಂಸ್ಥೆಗಳಲ್ಲಿ ಒಂದು ಜಿಯೋ ಸಂಸ್ಥೆ..ಗ್ರಾಹಕರಿಗೆ ಕಡಿಮೆ ದರದಲ್ಲಿ ಉತ್ತಮವಾದ ಪ್ಲಾನ್ ಗಳನ್ನು ಜಿಯೋ ಸಂಸ್ಥೆ ನೀಡುತ್ತಿದೆ. ಡೇಟಾ ಪ್ಯಾಕ್, ಅನಿಯಮಿತ ಕರೆಗಳು, ಎಸ್.ಎಂ.ಎಸ್, ಡಿಸ್ನಿ+ಹಾಟ್ ಸ್ಟಾರ್ ಸೇರಿದಂತೆ ಅನೇಕ ಸೇವೆಗಳನ್ನು ಆಕರ್ಷಕ ಪ್ಲಾನ್ ಗಳ ಮೂಲಕ ಜಿಯೋ ಸಂಸ್ಥೆ ನೀಡುತ್ತಿದೆ. ಇದೀಗ ಕೇವಲ ₹209, ₹239 ಮತ್ತು ₹119 ರೂಪಾಯಿಗಳಿಗೆ ಆಕರ್ಷಕವಾದ ಪ್ಲಾನ್ ಒಂದನ್ನು ಜಿಯೋ ಸಂಸ್ಥೆ ಹೊರತಂದಿದ್ದು, ಗ್ರಾಹಕರಿಗೆ ಇದರಿಂದ ಭಾರಿ ಉಪಯೋಗ ಆಗುವುದು ಖಂಡಿತ.
ಈಗಿರುವ ಟೆಲಿಕಾಂ ಕಂಪನಿಗಳ ಪೈಕಿ ಅತಿ ಅಗ್ಗದ ಬೆಲೆಯಲ್ಲಿ, ಹೆಚ್ಚಿನ ಉಳಿತಾಯ ಆಗುವಂತಹ ಪ್ಲಾನ್ ಗಳನ್ನು ಜಿಯೋ ಸಂಸ್ಥೆ ನೀಡುತ್ತಿದೆ. ಹೀಗೆ ಕಡಿಮೆ ಬೆಲೆಯಲ್ಲಿ ಉತ್ತಮವಾದ ಲಾಭ ನೀಡುತ್ತಿರುವ ಪ್ಲಾನ್ ಗಳಲ್ಲಿ ಒಂದು, 209 ರೂಪಾಯಿಯ ರೀಚಾರ್ಜ್ ಪ್ಲಾನ್, 239 ರೂಪಾಯಿಯ ರೀಚಾರ್ಜ್ ಪ್ಲಾನ್ ಮಯ್ತು 119 ರೂಪಾಯಿಯ ರೀಚಾರ್ಜ್ ಪ್ಲಾನ್ ಆಗಿದೆ ಆಗಿದೆ. ಈ ಪ್ಲಾನ್ ನಲ್ಲಿ, ಆಕರ್ಷಕವಾದ ಡೇಟಾ ಯೋಜನೆಯ ಜೊತೆಗೆ, ಅನಿಯಮಿತ ಕರೆಗಳು ಮತ್ತು ಫ್ರೀ ಎಸ್.ಎಂ.ಎಸ್ ಗಳು ಹಾಗೂ ಇನ್ನಿತರ ಯೋಜನೆಗಳ ಪ್ರಯೋಜನ ಸಿಗಲಿದೆ. ಜಿಯೋ ಸಂಸ್ಥೆಯು ಹೊರತಂದಿರುವ ಈ ಆಕರ್ಷಕ ಪ್ರೀಪೇಯ್ಡ್ ಯೋಜನೆಯ ಬಗ್ಗೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸುತ್ತೇವೆ ನೋಡಿ..
₹209 ರೂಪಾಯಿಯ ರೀಚಾರ್ಜ್ ಪ್ಲಾನ್ :-ಈ ಪ್ಲಾನ್ ನ ವ್ಯಾಲಿಡಿಟಿ 28 ದಿನಗಳ ವರೆಗೆ ಇರಲಿದ್ದು, ಅನಿಯಮಿತ ಕರೆಗಳು, ಪ್ರತಿದಿನ 100 ಉಚಿತ ಎಸ್.ಎಂ.ಎಸ್ ಗಳು ಹಾಗೂ ದಿನಕ್ಕೆ 1 ಜಿಬಿ ಉಚಿತ ಡೇಟಾ ಸಿಗಲಿದೆ. ವ್ಯಾಲಿಡಿಟಿ ಮುಗಿಯುವ ಸಮಯಕ್ಕೆ 28 ಜಿಬಿ ಡೇಟಾ ಸಿಗಲಿದೆ.
₹239 ರೂಪಾಯಿಯ ರೀಚಾರ್ಜ್ ಪ್ಲಾನ್ :- ಈ ಪ್ಲಾನ್ ನ ವ್ಯಾಲಿಡಿಟಿ 28 ದಿನಗಳ ವರೆಗೆ ಇರುತ್ತದೆ. ಇದರ ಪ್ರಕಾರ, ದಿನಕ್ಕೆ 1.5ಜಿಬಿ ಡೇಟಾ ಸಿಗಲಿದೆ. 28 ದಿನಗಳ ವರೆಗೂ ಒಟ್ಟಾಗಿ, 42 ಜಿಬಿ ಡೇಟಾ ಸಿಗಲಿದೆ. ಹಾಗೂ ಜಿಯೋ ಟು ಜಿಯೋ ಫ್ರೀ ಕರೆಗಳು ಹಾಗೂ ಬೇರೆ ನೆಟ್ವರ್ಕ್ ಗಳಿಗೂ ಅನಿಯಮಿತ ಉಚಿತ ಕರೆಗಳು ಸಿಗಲಿದೆ. ಹಾಗೂ ದಿನಕ್ಕೆ 100 ಎಸ್.ಎಂ.ಎಸ್ ಗಳು ಜೊತೆಗೆ ಜಿಯೋ ಆಪ್ ಗಳ ಸೌಲಭ್ಯ ಸಿಗಲಿದೆ.
₹119 ರೂಪಾಯಿಯ ರೀಚಾರ್ಜ್ ಪ್ಲಾನ್ :- ಈ ಪ್ಲಾನ್ ನ ವ್ಯಾಲಿಡಿಟಿ ಅವಧಿ 14 ದಿನಗಳು, ಈ ಪ್ಲಾನ್ ನಲ್ಲಿ ದಿನಕ್ಕೆ 1.5ಜಿಬಿ ಡೇಟಾ ಸಿಗಲಿದೆ, ಹಾಗೂ ಅವಧಿ ಮುಗಿಯುವ ಸಮಯಕ್ಕೆ ಒಟ್ಟು 21ಜಿಬಿ ಡೇಟಾ ಸಿಗಲಿದೆ. ಹಾಗೂ 300 ಎಸ್.ಎಂ.ಎಸ್ ಗಳು ಸಿಗಲಿದೆ. ಜೊತೆಗೆ ಅನಿಯಮಿತ ವಾಯ್ಸ್ ಕರೆಗಳು ಸಿಗಲಿದೆ.
Comments are closed.