ದರ್ಶನ್ ರವರನ್ನು ಪದೇ ಪದೇ ಭೇಟಿ ಮಾಡುತ್ತಿರುವ ಮೇಘ ಶೆಟ್ಟಿ, ಈಗ ಮತ್ತೊಮ್ಮೆ ಫೋಟೋ ಶೇರ್, 22 ಸಂಖ್ಯೆಯ ರಹಸ್ಯವೇನು ಗೊತ್ತೇ??
ಜೊತೆ ಜೊತೆಯಲಿ ಧಾರವಾಹಿ ಮೂಲಕ ಕನ್ನಡ ಕಿರುತೆರೆಯ ಸ್ಟಾರ್ ಆಗಿ ಹೆಸರು ಪಡೆದುಕೊಂಡಿರುವವರು ಮೇಘಾ ಶೆಟ್ಟಿ. ಇವರು ಅನು ಸಿರಿಮನೆ ಪಾತ್ರದಿಂದ ಕರ್ನಾಟಕ ಜನತೆಯ ಮನೆಮಗಳಾಗಿ ಹೋಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ, ಯಾಕಂದ್ರೆ ಅನು ಸಿರಿಮನೆ ಪಾತ್ರ ಜನರಿಗೆ ಅಷ್ಟರ ಮಟ್ಟಿಗೆ ಇಷ್ಟವಾಗಿ ಹೋಗಿದೆ. ಮೊದಲ ಧಾರವಾಹಿಯಲ್ಲೇ ಜನರಿಗೆ ಬಹಳ ಹತ್ತಿರ ಆಗಿರುವ ಮೇಘಾ ಶೆಟ್ಟಿ ಅವರು ಜೊತೆ ಜೊತೆಯಲಿ ಧಾರವಾಹಿ ಮಾಡುವಾಗಲೇ ಸಿನಿಮಾಗಳಲ್ಲಿ ನಟಿಸುವುದನ್ನು ಸಹ ಶುರು ಮಾಡಿದರು. ಕಿರುತೆರೆಯ ಯಶಸ್ಸು ಮೇಘಾ ಅವರನ್ನು ಬೆಳ್ಳಿ ಪರದೆಗೆ ಕರೆದೊಯ್ಯಿತು. ಈಗಾಗಲೇ ಮೇಘಾ ಶೆಟ್ಟಿ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರೊಡನೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಟಿಸಿದ್ದಾರೆ.
ಇದಲ್ಲದೆ, ಡಾರ್ಲಿಂಗ್ ಕೃಷ್ಣ ಅವರೊಡನೆ ದಿಲ್ ಪಸಂದ್ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಅಷ್ಟೇ ಅಲ್ಲದೆ, ಪ್ಯಾನ್ ಇಂಡಿಯಾ ಸಿನಿಮಾ ಒಂದನ್ನು ಸಹ ಮೇಘಾ ಶೆಟ್ಟಿ ಒಪ್ಪಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಸಿನಿಮಾಗಳ ವಿಚಾರಕ್ಕೂ ಆಗಾಗ ಸುದ್ದಿಯಾಗುವ ಮೇಘಾ ಶೆಟ್ಟಿ ಅವರು ಇದೀಗ ದರ್ಶನ್ ಅವರೊಡನೆ ಫೋಟೋ ಶೇರ್ ಮಾಡುವ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ದರ್ಶನ್ ಅವರೊಡನೆ ಫೋಟೋ ಒಂದನ್ನು ಶೇರ್ ಮಾಡಿದ್ದರು ಮೇಘಾ, ಆ ಫೋಟೋಗೆ ಯಾವುದೇ ಕ್ಯಾಪ್ಶನ್ ನೀಡಿರಲಿಲ್ಲ, ಆಗಲೇ ಅಭಿಮಾನಿಗಳೆಲ್ಲರೂ, ದರ್ಶನ್ ಅವರೊಡನೆ ಸಿನಿಮಾ ಮಾಡುತ್ತಿದ್ದಾರಾ ಅಥವಾ ಇದು ಅಭಿಮಾನಿಯಾಗಿ ದರ್ಶನ್ ಅವರನ್ನು ಭೇಟಿ ಮಾಡಿ ತೆಗೆಸಿಕೊಂಡಿರುವ ಫೋಟೋನ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು.
ಆಗ ಮೇಘಾ ಅವರು ಯಾವುದೇ ಉತ್ತರ ನೀಡಿರಲಿಲ್ಲ. ಇದೀಗ ಎರಡನೇ ಬಾರಿ ಫೋಟೋ ಶೇರ್ ಮಾಡಿದ್ದಾರೆ ಮೇಘಾ. ಈ ಮೊದಲು ಎರಡು ತಿಂಗಳ ಹಿಂದೆ, ಮಾರ್ಚ್ 23 ರಂದು ಫೋಟೋ ಶೇರ್ ಮಾಡಿದ್ದರು, ಈಗ ಮತ್ತೊಮ್ಮೆ ಮೇ 23ರಂದು ಮತ್ತೊಂದು ಫೋಟೋ ಶೇರ್ ಮಾಡಿದ್ದು, ಈ ಎರಡು ಬೇರೆ ಬೇರೆ ಫೋಟೋಗಳಾಗಿವೆ. ಪ್ರಸ್ತುತ ದರ್ಶನ್ ಅವರ ಕ್ರಾಂತಿ ಸಿನಿಮಾ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ, ಇದೀಗ ಮೇಘಾ ಶೆಟ್ಟಿ ಅವರು ಸಹ ಮೈಸೂರಿನ ಎಲ್ಲಾ ಜಾಗಗಳಲ್ಲಿ ಓಡಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಹಾಗಾಗಿ ದರ್ಶನ್ ಅವರೊಡನೆ ಮೇಘಾ ಶೆಟ್ಟಿ ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದ್ದು, ಇದಕ್ಕೆ ಮೇಘಾ ಅವರೇ ಉತ್ತರ ಕೊಡಬೇಕಿದೆ.
Comments are closed.