ನನ್ನ ಸಪೋರ್ಟ್ ಆರ್ಸಿಬಿ ಗೆ ಎಂದ ಸುರೇಶ ರೈನಾ, ಆರ್ಸಿಬಿ ಈ ಬಾರಿ ಕಪ್ ಗೆಲ್ಲಲೇಬೇಕು ಯಾಕಂತೆ ಗೊತ್ತೇ?? ಕಾರಣ ಸಮೇತ ರೈನಾ ಹೇಳಿದ್ದೇನು ಗೊತ್ತೇ??
ಆರ್.ಸಿ.ಬಿ ತಂಡವು, 2022ರ ಐಪಿಎಲ್ 15ನೇ ಆವೃತ್ತಿಯಲ್ಲಿ ಪ್ಲೇಆಫ್ಸ್ ಗೆ ಕ್ವಾಲಿಫೈ ಆಗಿದೆ. ಈ ಬಾರಿ ಆರ್.ಸಿ.ಬಿ ತಂಡದ ನಾಯಕನಾಗಿ ಫಾಫ್ ಡು ಪ್ಲೆಸಿಸ್ ಅವರು ತಂಡವನ್ನು ಮುನ್ನಡೆಸುತ್ತಿದ್ದಾರೆ. ಇವರೆಗೂ ಆಡಿದ 14 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದು, 6 ಪಂದ್ಯಗಳಲ್ಲಿ ಸೋತ ಆರ್.ಸಿ.ಬಿ ತಂಡ 16 ಅಂಕಗಳ ಜೊತೆಗೆ ಇದೀಗ ಪ್ಲೇಆಫ್ಸ್ ತಲುಪಿದೆ. ಆರ್.ಸಿ.ಬಿ ತಂಡ ಈ ಬಾರಿ ಕಪ್ ಗೆಲ್ಲಬೇಕೆಂದರೆ, ಪ್ಲೇಆಫ್ಸ್ ಪಂದ್ಯಗಳನ್ನು ಸೇರಿಸಿ ಒಟ್ಟು ಮೂರು ಪಂದ್ಯಗಳನ್ನು ಗೆಲ್ಲಬೇಕಿದೆ. ಇದೀಗ ಆರ್.ಸಿ.ಬಿ ತಂಡ ಈ ಬಾರಿ ಗೆಲ್ಲಬೇಕು ಎಂದು ಸಿ.ಎಸ್.ಕೆ ತಂಡದ ಮಾಜಿ ಆಟಗಾರ ಸುರೇಶ್ ರೈನಾ, ಹೇಳಿದ್ದು, ಅದಕ್ಕೆ ಕಾರಣವನ್ನು ಸಹ ನೀಡಿದ್ದಾರೆ..
ಆರ್.ಸಿ.ಬಿ 15 ಆವೃತ್ತಿಗಳಿಂದಲೂ ಕಪ್ ಗೆಲ್ಲುವ ಪ್ರಯತ್ನ ಮಾಡುತ್ತಿದೆ, ಆದರೆ ಆರ್.ಸಿ.ಬಿ ತಂಡ ಸತತ ಪ್ರಯತ್ನದ ಬಳಿಕ ಸಹ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಈ ವರ್ಷ ಆರ್.ಸಿ.ಬಿ ತಂಡ ಪ್ಲೇಆಫ್ಸ್ ತಲುಪಿದ್ದು, ಈ ಬಾರಿ ಕಪ್ ಗೆಲ್ಲಲಿ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಟೀಮ್ ಇಂಡಿಯಾ ಮತ್ತು ಸಿ.ಎಸ್.ಕೆ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅವರು ಆರ್.ಸಿ.ಬಿ ತಂಡದ ಬಗ್ಗೆ ಮಾತನಾಡಿದ್ದಾರೆ, ಪ್ಲೇಆಫ್ಸ್ ಪಂದ್ಯಗಳಿಗಿಂತ ಮೊದಲು ಸಂದರ್ಶನ ಒಂದರಲ್ಲಿ ಮಾತನಾಡಿದ ಸುರೇಶ್ ರೈನಾ ಅವರು, “ಈ ವರ್ಷ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ) ತಂಡ ಮೊದಲ ಐಪಿಎಲ್ ಕಪ್ ಗೆಲ್ಲಬೇಕು. ಇದಕ್ಕೆ ಮುಖ್ಯ ಕಾರಣ ವಿರಾಟ್ ಕೋಹ್ಲಿ, ಅವರಿಗೋಸ್ಕರ ಆರ್.ಸಿ.ಬಿ ಕಪ್ ಗೆಲ್ಲಬೇಕು..” ಎಂದು ಹೇಳಿದ್ದಾರೆ ಸುರೇಶ್ ರೈನಾ.
ಮೇ 25ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯಕ್ಕೆ ಆರ್.ಸಿ.ಬಿ ತಂಡ ಕಸರತ್ತು ನಡೆಸುತ್ತಿದೆ. ಈಗಾಗಲೇ ಫಾಫ್ ಡು ಪ್ಲೆಸಿಸ್ ಮತ್ತು ಇಡೀ ತಂಡ ಕೋಲ್ಕತ್ತಾಗೆ ಶಿಫ್ಟ್ ಆಗಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಸ್ಟೇಡಿಯಂ ನಲ್ಲಿ ಆರ್.ಸಿ.ಬಿ ತಂಡ ಲಕ್ನೌ ಸೂಪರ್ ಜೈನ್ಟ್ಸ್ ತಂದರ ವಿರುದ್ಧ ಪಂದ್ಯವಾಡಲಿದೆ. ಇದಾದ ಬಳಿಕ, ಎರಡನೆಯ ಕ್ವಾಲಿಫೈಯರ್ ಪಂದ್ಯದಲ್ಲಿ, ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲುವ ತಂಡದ ವಿರುದ್ಧ ಆರ್.ಸಿ.ಬಿ ಸೆಣಸಾಡಲಿದೆ. ಆ ಎರಡರಲ್ಲಿ ಗೆದ್ದರೆ, ಫೈನಲ್ಸ್ ನಲ್ಲಿ ಪಾಲ್ಗೊಳ್ಳಲಿದೆ ಆರ್.ಸಿ.ಬಿ. ಗುಜರಾತ್ ಟೈಟನ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಬಲಗೈ ಬೆರಳಿಗೆ ಪೆಟ್ಟು ಮಾಡಿಕೊಂಡ ಹರ್ಷಲ್ ಪಟೇಲ್ ಅವರು ಆರ್.ಸಿ.ಬಿ ತಂಡದಿಂದ ದೂರವಾಗಿದ್ದರು, ಇದೀಗ ಹರ್ಷಲ್ ಪಟೇಲ್ ಅವರು ಸಹ ಚೇತರಿಸಿಕೊಂಡಿದ್ದು, ಮೇ 25ರ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದಿನ ಪಂದ್ಯದಲ್ಲಿ ಆರ್.ಸಿ.ಬಿ ಗೆದ್ದು, ಕಪ್ ಗೆಲ್ಲುತ್ತಾ ಎಂದು ಕಾದು ನೋಡಬೇಕಿದೆ.
Comments are closed.