Neer Dose Karnataka
Take a fresh look at your lifestyle.

ಬಿಡುಗಡೆಯಾದ ಬಹು ನಿರೀಕ್ಷಿತ ಟಿಆರ್ಪಿ ಲಿಸ್ಟ್, ಈ ವಾರ ಪ್ರೇಕ್ಷಕರಿಗೆ ಇಷ್ಟವಾದ ಧಾರವಾಹಿ ಯಾವುದು ಗೊತ್ತೇ?? ಮೊದಲ ಸ್ಥಾನ ಯಾವ ಧಾರವಾಹಿ ಗೊತ್ತೇ?

ಮನೆಯಲ್ಲಿರುವ ವೀಕ್ಷಕರಿಗೆ ಮನರಂಜನೆ ಕೊಡಲು ಇರುವುದು ಧಾರಾವಾಹಿಗಳು. ಮೊದಲೆಲ್ಲಾ ಧಾರಾವಾಹಿಗಳು ಅಂದ್ರೆ ಮನೆಯಲ್ಲಿರುವ ಮಹಿಳೆಯರು ಮಾತ್ರ ನೋಡುತ್ತಿದ್ದರು. ಆದರೆ ಈಗ ಧಾರಾವಾಹಿಗಳು ಎಷ್ಟರ ಮಟ್ಟಿಗೆ ಇದೆ ಅಂದ್ರೆ, ಮನೆ ಮಂದಿ ಎಲ್ಲರೂ ಜೊತೆಯಾಗಿ ಕುಳಿತು ಧಾರವಾಹಿ ನೋಡುತ್ತಾರೆ. ಒಂದಕ್ಕಿಂತ ಒಂದು ಎಲ್ಲಾ ಧಾರಾವಾಹಿಗಳು ವಿಭಿನ್ನವಾಗಿದ್ದು, ಜನರಿಗೆ ಮನರಂಜನೆ ನೀಡುತ್ತಿವೆ. ಯಾವ ಧಾರವಾಹಿಯನ್ನು ಜನರು ಹೆಚ್ಚಾಗಿ ಇಷ್ಟಪಡುತ್ತಾರೆ ಎನ್ನುವುದು ಗೊತ್ತಾಗುವುದು ಟಿ.ಆರ್.ಪಿ ರೇಟಿಂಗ್ ಮೂಲಕ. ಪ್ರತಿವಾರ ಈ ಟಿ.ಆರ್.ಪಿ ರೇಟಿಂಗ್ ಬದಲಾಗುತ್ತಾ ಇರುತ್ತದೆ. ಈ ವಾರ ಸಹ ಟಿ.ಆರ್.ಪಿ ರೇಟಿಂಗ್ ಬದಲಾಗಿದ್ದು ವೀಕ್ಷಕರಿಗೆ ಶಾಕ್ ನೀಡಿದೆ, ಹಾಗಿದ್ದಲ್ಲಿ ಈ ವಾರದ ಟಾಪ್ 11 ಧಾರಾವಾಹಿಗಳು ಯಾವುವು ಎಂದು ನೋಡೋಣ ಬನ್ನಿ..

ಈ ವಾರ ಟಿ.ಆರ್.ಪಿ ರೇಟಿಂಗ್ ಕೆಲವು ಬದಲಾವಣೆ ಕಂಡುಬಂದಿದೆ. ಪುಟ್ಟಕ್ಕನ ಮಕ್ಕಳು ಧಾರವಾಹಿ ಮತ್ತೊಮ್ಮೆ ಮೊದಲ ಸ್ಥಾನಕ್ಕೆ ಏರಿದೆ. 0.1% ಇಂದ ಗಟ್ಟಿಮೇಳ ಧಾರವಾಹಿಯನ್ನು ಹಿಂದಿಕ್ಕಿದೆ ಪುಟ್ಟಕ್ಕನ ಮಕ್ಕಳು ಧಾರವಾಹಿ. ಗಟ್ಟಿಮೇಳ ಧಾರಾವಾಹಿಯ ಟಿವಿಆರ್ 10, ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಟಿವಿಆರ್ 10.1. ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಬಂಗಾರಮ್ಮ ಮತ್ತು ಸ್ನೇಹ ಇಬ್ಬರ ದೃಶ್ಯಗಳು ಜನರಲ್ಲಿ ಕುತೂಹಲ ಹೆಚ್ಚಿಸುತ್ತಿವೆ. ಗಟ್ಟಿಮೇಳ ಧಾರವಾಹಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇನ್ನು ಗಟ್ಟಿಮೇಳ ಧಾರಾವಾಹಿಯಲ್ಲಿ ಸುಹಾಸಿನಿಯ ಪಿತೂರಿ, ಹೆಚ್ಚಾಗಿದೆ. ಪ್ರೈಮ್ ಟೈಮ್ ನಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರವಾಹಿ,7 ಟಿವಿಆರ್ ಪಡೆದು, ಜೊತೆ ಜೊತೆಯಲಿ ಧಾರಾವಾಹಿಯನ್ನು ಹಿಂದಕ್ಕೆ ಕಳಿಸಿ 4ನೇ ಸ್ಥಾನ ಪಡೆದುಕೊಂಡಿದೆ. ಕಾರ್ತಿಕ್ ಸತ್ಯ ಮದುವೆ ದೃಶ್ಯಗಳು ಜನರನ್ನು ರಂಜಿಸುತ್ತಿವೆ.

ಹಿಟ್ಲರ್ ಕಲ್ಯಾಣ ಧಾರವಾಹಿ 8.5 ಟಿವಿಆರ್ ಪಡೆದು, ಮೂರನೇ ಸ್ಥಾನದಲ್ಲಿದೆ. ಧಾರಾವಾಹಿಯಲ್ಲಿನ ಹೊಸ ತಿರುವುಗಳು ಜನರಿಗೆ ಇಷ್ಟವಾಗುತ್ತಿದೆ. ಇನ್ನು ರಿಯಾಲಿಟಿ ಶೋಗಳ ವಿಚಾರಕ್ಕೆ ಬರುವುದಾದರೆ, ಶಿವಣ್ಣ ಇರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ, 6.4 ಟಿವಿಆರ್ ಪಡೆದು ಮೊದಲ ಸ್ಥಾನ ಅಲಂಕರಿಸಿದೆ. 6.3 ಟಿವಿಆರ್ ಪಡೆದಿರುವ ಮಕ್ಕಳ ಕಾರ್ಯಕ್ರಮ ಡ್ರಾಮಾ ಜ್ಯೂನಿಯರ್ಸ್ ಎರಡನೇ ಸ್ಥಾನ ಪಡೆದುಕೊಂಡಿದೆ. 4.3 ಟಿವಿಆರ್ ಪಡೆದಿರುವ ಗಿಚ್ಚಿ ಗಿಲಿ ಗಿಲಿ ಮತ್ತು ಡ್ಯಾನ್ಸಿಂಗ್ ಚಾಂಪಿಯನ್ ಮಹಾಮಿಲನ ಕಾರ್ಯಕ್ರಮ ಮೂರನೇ ಸ್ಥಾನದಲ್ಲಿದೆ. ನಿಮ್ಮ ಮೆಚ್ಚಿನ ಧಾರವಾಹಿ ಈ ಲಿಸ್ಟ್ ನಲ್ಲಿದೆಯೇ ಎಂದು ಕಮೆಂಟ್ಸ್ ಮೂಲಕ ತಿಳಿಸಿ..

Comments are closed.