‘ಮೇಜರ್’ ಸಂದೀಪ್ ಉನ್ನಿಕೃಷ್ಣನ್‌ರವರ ಬಯೋಪಿಕ್ ಸಿನೆಮಾ ಟಿಕೆಟ್ ದರ ಕಡಿಮೆ ಮಾಡಿರುವುದು ಯಾಕೆ ಗೊತ್ತೇ?
ಇತ್ತೀಚಿನ ದಿನಗಳಲ್ಲಿ ಸಿನಿಮಾ ಟಿಕೆಟ್ ದರಗಳು ಹೆಚ್ಚಾಗಿರುವ ಕಾರಣ ಸಿನಿಪ್ರಿಯರು ಥಿಯೇಟರ್ ಗೆ ಬಂದು ಸಿನಿಮಾ ನೋಡುವುದನ್ನು ಕಡಿಮೆ ಮಾಡಿದ್ದಾರೆ. ಸಿನಿಮಾ ಟಿಕೆಟ್ ದರಗಳು ಕಡಿಮೆಯಾಗಿ, ಎಲ್ಲರಿಗೂ ಕೈಗೆಟುಕುವ ಹಾಗಿದ್ದರೆ, ಹೆಚ್ಚಿನ ಜನರು ಬಂದು ಸಿನಿಮಾ ನೋಡುತ್ತಾರೆ ಎನ್ನುವುದು ಹಲವರ ಅಭಿಪ್ರಾಯ. ಅದೇ ರೀತಿ ಕೆಲವು ಸಿನಿಮಾಗಳಿಗೆ ಟಿಕೆಟ್ ದರ ಕಡಿಮೆ ಮಾಡಿ, ಹೆಚ್ಚಿನ ಜನರು ಬಂದು ಸಿನಿಮಾ ವೀಕ್ಷಿಸಿದ್ದಾರೆ. ಉದಾಹರಣೆಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ, ಈ ಸಿನಿಮಾವನ್ನು ಇಡೀ ದೇಶದ ಜನರು ನೋಡಲೇಬೇಕು ಎಂದು, ಟಿಕೆಟ್ ದರ ಕಡಿಮೆ ಮಾಡಿ, ಜಿ.ಎಸ್.ಟಿ ಸಹ ತೆಗೆದುಹಾಕಲಾಗಿತ್ತು. ಇದೀಗ ಅದೇ ಸಾಲಿಗೆ ಮತ್ತೊಂದು ಸೇರಿದೆ, ಅದು ಮೇಜರ್ ಸಿನಿಮಾ. ಈ ಸಿನಿಮಾ ವೀರಯೋಧ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನಾಧಾರಿತ ಸಿನಿಮಾ ಆಗಿದೆ..
ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಮೇಜರ್ ಸಿನಿಮಾ ಜೂನ್ 3ರಂದು ತೆರೆಕಾಣುತ್ತಿದೆ. ಇದೊಂದು ಯೋಧನ ಕಥೆ, ಎಲ್ಲಾ ಯುವ ಪೀಳಿಗೆಯವರಿಗೆ ಸ್ಪೂರ್ತಿದಾಯಕವಾಗಿರಲಿದೆ. ಜೊತೆಗೆ ದೇಶದ ಸೈನ್ಯದ ಬಗ್ಗೆ ಗೌರವ ತರಿಸುವಂಥಹ ಸಿನಿಮಾ ಇದಾಗಿದೆ, ಹಾಗಾಗಿ ಮೇಜರ್ ಸಿನಿಮಾದ ಟಿಕೆಟ್ ದರಗಳು ಕಡಿಮೆ ಇರಲಿದ್ದು, ಎಲ್ಲರೂ ತಪ್ಪದೇ ಬಂದು ಸಿನಿಮಾ ನೋಡಬೇಕು ಎಂದು ಚಿತ್ರತಂಡ ಮನವಿ ಮಾಡಿಕೊಂಡಿದೆ. ಟಿಕೆಟ್ ದರ ಕಡಿಮೆ ಮಾಡಬೇಕು ಎನ್ನುವ ವಿಚಾರವನ್ನು ಸ್ವತಃ ಮೇಜರ್ ಸಿನಿಮಾದ ನಿರ್ಮಾಪಕರೇ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬಯೋಪಿಕ್ ಗಳು ಚಿತ್ರೀಕರಣವಾಗಿದೆ, ಈ ವೀರಯೋಧನ ಕಥೆ ಸಹ ಅದೇ ರೀತಿ ವೀಕ್ಷಕರ ಮನಮುಟ್ಟುವ ಕಥೆ ಆಗಿದೆ..
ಮೇಜರ್ ಸಿನಿಮಾದಲ್ಲಿ ನಾಯಕನಾಗಿ ಅದ್ವಿ ಶೇಶ್ ನಟಿಸಿದ್ದಾರೆ, ದಕ್ಷಿಣ ಭಾರತದ ಈ ನಟ ಮೇಜರ್ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಈಗಾಗಲೇ ಮೇಜರ್ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಜನರಿಗೆ ತುಂಬಾ ಇಷ್ಟವಾಗಿತ್ತು, ಮೇಜರ್ ಸಿನಿಮಾದ ಹಿಂದಿ ಟ್ರೈಲರ್ ಅನ್ನು ನಟ ಸಲ್ಮಾನ್ ಖಾನ್, ತೆಲುಗು ಟ್ರೈಲರ್ ಅನ್ನು ನಟ ಮಹೇಶ್ ಬಾಬು, ತಮಿಳ್ ಟ್ರೈಲರ್ ಅನ್ನು ನಟ ಧನುಷ್ ಮತ್ತು ಮಲಯಾಳಂ ಟ್ರೈಲರ್ ಅನ್ನು ನಟ ಪೃಥ್ವಿ ರಾಜ್ ಬಿಡುಗಡೆ ಮಾಡಿದ್ದರು. ಈ ಸಿನಿಮಾ ಮೂಲಕ ದೇಶದ ಎಲ್ಲಾ ಸೈನಿಕರಿಗೂ ಗೌರವ ಸಲ್ಲಿಸುವಂಥಹ ಪ್ರಯತ್ನ ಇದಾಗಿದೆ. ಹಾಗಾಗಿ ಸಿನಿಮಾವನ್ನು ಎಲ್ಲರೂ ನೋಡಬೇಕು ಎಂದು ಚಿತ್ರತಂಡ ಮನವಿ ಮಾಡಿಕೊಂಡಿದೆ.
Comments are closed.