ದುಡ್ಡನ್ನು ಎಣಿಸುವಾಗ ಅಪ್ಪಿ ತಪ್ಪಿಯೂ ಕೂಡ ಈ ತಪ್ಪುಗಳನ್ನು ಮಾಡಬೇಡಿ, ದಾರಿದ್ರ್ಯ ಸುತ್ತಿಕೊಳ್ಳುತ್ತದೆ, ಹಣ ಕಳೆದುಕೊಳ್ಳುತ್ತೀರಾ. ಯಾವ್ಯಾವ ತಪ್ಪು ಗೊತ್ತೇ??
ಜೀವನದಲ್ಲಿ ಹೆಚ್ಚಿನ ಹಣ ಸಂಪಾದಿಸಬೇಕಾದರೆ, ಲಕ್ಷ್ಮೀದೇವಿಯ ಕೃಪೆ ನಮ್ಮ ಮೇಲೆ ಇರಬೇಕು. ಲಕ್ಷ್ಮೀದೇವಿಯ ಆಶೀರ್ವಾದ ನಮ್ಮ ಮೇಲಿದ್ದರೆ, ಹಣ, ಯಶಸ್ಸು, ಕೀರ್ತಿ ಎಲ್ಲವೂ ನಮ್ಮದಾಗುತ್ತದೆ. ಲಕ್ಷ್ಮೀದೇವಿಯನ್ನು ನಮ್ಮ ಬಳಿಯೇ ಉಳಿಸಿಕೊಳ್ಳಲು, ಶಾಸ್ತ್ರಗಳಲ್ಲಿ ಕೆಲವು ವಿಚಾರಗಳನ್ನು ತಿಳಿಸಲಾಗಿದೆ. ಅದೇ ರೀತಿ ಮಾಡಿದರೆ, ಲಕ್ಷ್ಮೀದೇವಿಯ ಕೃಪೆ ಕಟಾಕ್ಷ ನಮ್ಮ ಮೇಲಿರುತ್ತದೆ, ಆಗ ಯಾವುದೇ ತೊಂದರೆ ಇಲ್ಲದೆ, ಜೀವನ ನಡೆಸಬಹುದು. ಇದಿಷ್ಟೇ ಅಲ್ಲದೆ, ಲಕ್ಷ್ಮೀದೇವಿಯ ಕೋಪಕ್ಕೇನಾದರು ಒಳಗಾದರೆ, ಆ ವ್ಯಕ್ತಿ ಜೀವನದಲ್ಲಿ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಾನೆ. ದರಿದ್ರನಾಗಿ, ಬಡವನಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಲಕ್ಷ್ಮೀದೇವಿಗೆ ಕೋಪ ಬರದ ಹಾಗಿರಲು ಕೆಲವು ತಪ್ಪುಗಳನ್ನು ಮಾಡಬಾರದು. ಅದರಲ್ಲೂ ಹಣ ಎಣಿಸುವಾಗ ಮಾಡುವ ಕೆಲವು ತಪ್ಪುಗಳು ಲಕ್ಷ್ಮೀದೇವಿಯ ಕೋಪಕ್ಕೆ ಕಾರಣ ಆಗಬಹುದು, ಅಂತಹ ತಪ್ಪುಗಳು ಯಾವುದು? ಏನನ್ನು ಮಾಡಬಾರದು ಎಂದು ತಿಳಿಸುತ್ತೇವೆ ನೋಡಿ..
*ನೋಟುಗಳನ್ನು ಎಣಿಸುವಾಗ ಕೆಲವು ಜನರು ಉಗುಳು ಬಳಸುತ್ತಾರೆ. ಆ ರೀತಿ ಮಾಡಬೇಡಿ. ಉಗುಳನ್ನು ಬಳಸುವುದು ಲಕ್ಷ್ಮೀದೇವಿಗೆ ಅವಮಾನ ಮಾಡಿದ ಹಾಗೆ ಆಗುತ್ತದೆ. ಇದರಿಂದ ನೀವು ಜೀವನ ಪೂರ್ತಿ ಬಡವರಾಗುವ ಹಾಗೆ ಆಗಬಹುದು. ಜೊತೆಗೆ ನೋಟ್ ಗಳ ಮೇಲಿರುವ ಸೂಕ್ಷ್ಮಜೀವಿಗಳು ನಿಮ್ಮ ಆರೋಗ್ಯಕ್ಕೆ ಆಪತ್ತು ತರಬಹುದು. ಹಾಗಾಗಿ ಈ ರೀತಿ ಮಾಡಬೇಡಿ, ಬದಲಾಗಿ ನೋಟುಗಳು ಅಂಟಿಕೊಂಡಿದ್ದರೆ, ಒಂದು ಬಟ್ಟಲಿನಲ್ಲಿ ನೀರು ಇಟ್ಟುಕೊಂಡು ಅದನ್ನು ಬಳಸಿ ನೋಟ್ ಗಳನ್ನು ಬಿಡಿಸಿ.
*ನೋಟುಗಳ ಮೇಲೆ ಏನನ್ನು ಬರೆಯಬಾರದು, ಹಾಗೂ ನೋಟುಗಳಿಗೆ ಹಾನಿ ಉಂಟು ಮಾಡಬಾರದು, ಈ ರೀತಿ ಮಾಡುವುದು ಲಕ್ಷ್ಮೀದೇವಿಗೆ ಮಾಡುವ ಅಪಮಾನ ಹಾಗೂ ಭಾರತ ಸರ್ಕಾರದ ನಿಯಮಗಳ ವಿರುದ್ಧ ಹೋದ ಹಾಗೆ ಆಗುತ್ತದೆ, ಹಾಗಾಗಿ ನೋಟುಗಳ ಮೇಲೆ ಬರೆಯಬೇಡಿ.
*ನೋಟುಗಳ ಮೇಲೆ ತಿನ್ನುವ ಪದಾರ್ಥ ಬೀಳದೆ ಇರುವ ಹಾಗೆ ನೋಡಿಕೊಳ್ಳಿ, ಹಾಗೂ ನೋಟುಗಳ ಮೇಲೆ ತಿನ್ನುವ ಪದಾರ್ಥಗಳನ್ನು ಇಡಬೇಡಿ. ದುಡ್ಡನ್ನು ಗೌರವದಿಂದ ನೋಡಿಕೊಳ್ಳಿ.
*ನಿಮ್ಮ ವ್ಯಾಲೆಟ್ ನಲ್ಲಿರುವ ಹಣದ ಜೊತೆಗೆ ಬಿಲ್ ಗಳು, ಹಳೆಯ ಪೇಪರ್ ಗಳನ್ನು ಇಟ್ಟುಕೊಳ್ಳಬೇಡಿ, ಇದರಿಂದಾಗಿ ನಿಮ್ಮ ಆದಾಯ ನಿಂತು ಹೋಗುವ ಹಾಗೆ ಆಗುತ್ತದೆ.
*ರಾತ್ರಿ ಮಲಾಗುವುದಕ್ಕಿಂತ ಮೊದಲು ನಿಮ್ಮ ವ್ಯಾಲೆಟ್ ಅಥವಾ ಪರ್ಸ್ ಅನ್ನು ದಿಂಬಿನ ಕೆಳಗೆ ಇಟ್ಟು ಮಲಗಬೇಡಿ, ಕಬೋರ್ಡ್ ನಲ್ಲಿ ಅಥವಾ ಬೇರೆ ಸುರಕ್ಷಿತ ಸ್ಥಳದಲ್ಲಿ ಅವುಗಳನ್ನು ಇಡೀ. ಜೊತೆಗೆ ನೋಟ್ ಗಳನ್ನು ತಿರುಚಿ ಇಡಬೇಡಿ.
Comments are closed.