ವಿಶ್ವದ 5 ನೇ ಅಪರೂಪದ ವಜ್ರದ ಉಂಗುರ ತೊಟ್ಟು ಕಾಣಿಸಿಕೊಂಡ ತಮನ್ನಾ. ಇದರ ಬೆಲೆ ಎಷ್ಟು ಗೊತ್ತೇ?? ಯಪ್ಪಾ ಒಂದು ಉಂಗುರಕ್ಕೆ ಇಷ್ಟೊಂದಾ??
ದಕ್ಷಿಣ ಭಾರತ ಚಿತ್ರರಂಗದ ಮಿಲ್ಕಿ ಬ್ಯೂಟಿ ಎಂದೇ ಬಹಳ ಖ್ಯಾತಿ ಪಡೆದುಕೊಂಡಿರುವವರು ನಟಿ ತಮನ್ನಾ. ಇವರು 10 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡವು ಸೇರಿ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ, ಬಾಲಿವುಡ್ ನಲ್ಲಿ ಸಹ ಸಕ್ರಿಯರಾಗಿದ್ದಾರೆ. ಹಿಂದಿಯಲ್ಲಿ ಸಹ ಸಾಕಷ್ಟು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ನಟಿ ತಮನ್ನಾ ಅವರು ಸಿನಿಮಾ ವಿಚಾರಕ್ಕೆ ಮಾತ್ರವಲ್ಲದೆ, ಐಷಾರಾಮಿ ಜೀವನಶೈಲಿ ಇಂದಲೂ ಸುದ್ದಿಯಾಗುತ್ತಾರೆ. ತಮನ್ನಾ ಅವರ ಬಳಿ ಪ್ರಪಂಚದ 5ನೇ ಅತಿ ದುಬಾರಿಯಾದ ವಜ್ರದ ಉಂಗುರ ಇದ್ದು, ಅದರ ಬೆಲೆ ಎಷ್ಟು ಗೊತ್ತಾ? ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ..
ನಟಿ ತಮನ್ನಾ ಮೂಲತಃ ಉತ್ತರ ಭಾರತದವರು, ಆದರೆ ತಮನ್ನಾ ಅವರು ಫೇಮಸ್ ಆಗಿದ್ದು ದಕ್ಷಿಣ ಭಾರತದಲ್ಲಿ. ಪ್ರಸ್ತುತ ತಮನ್ನಾ ಅವರು ದಕ್ಷಿಣ ಭಾರತದ ಸಿನಿಮಾಗಳು ಮತ್ತು ಬಾಲಿವುಡ್ ಎರಡರಲ್ಲೂ ಸಹ ಸಕ್ರಿಯವಾಗಿದ್ದಾರೆ. ತಮನ್ನಾ ಅವರ ವೈಯಕ್ತಿಕ ಜೀವನದ ವಿಚಾರಕ್ಕೆ ಬರುವುದಾದರೆ, ಮುಂಬೈ ನ ಜುಹು ವರ್ಸೊವ ನಲ್ಲಿ ಸ್ವಂತ ಐಷಾರಾಮಿ ಅಪಾರ್ಟ್ಮೆಂಟ್ ಹೊಂದಿದ್ದಾರೆ ನಟಿ ತಮನ್ನಾ. ಇವರ ಐಷಾರಾಮಿ ಅಪಾರ್ಟ್ಮೆಂಟ್ 80 ಸಾವಿರ ಚದರಗಳಿದ್ದು, ಇದರ ಬೆಲೆ ಬರೋಬ್ಬರಿ ₹16.60 ಕೋಟಿ ರೂಪಾಯಿಗಳಾಗಿವೆ. ಬಿಡುವಿನ ಸಮಯ ಸಿಕ್ಕಾಗಲೆಲ್ಲಾ ತಮನ್ನಾ ಅವರು ಇದೇ ಮನೆಯಲ್ಲಿರುತ್ತಾರೆ. ಐಷಾರಾಮಿ ಮನೆಯ ಜೊತೆಗೆ ತಮನ್ನಾ ಅವರ ಬಳಿ ಐಷಾರಾಮಿ ಕಾರ್ ಗಳು ಸಹ ಇದೆ. ಇವುಗಳಲ್ಲಿ, 43.50 ಲಕ್ಷ ರೂಪಾಯಿ ಮೌಲ್ಯದ ಬಿಎಂಡಬಲ್ಯೂ ಕಾರ್ ತಮನ್ನಾ ಅವರ ಬಳಿ ಇದೆ.
ಅಲ್ಲದೆ, 2 ಕೋಟಿ ಬೆಲೆ ಬಾಳುವ ಮರ್ಸಿಡಿಸ್ ಬೆಂಜ್ ಕಾರ್ ಸಹ ತಮನ್ನಾ ಅವರ ಬಳಿ ಇದೆ. ಇನ್ನು ತಮನ್ನಾ ಅವರಿಗೆ ಚಿತ್ರೀಕರಣ ಇಲ್ಲದೆ ಬಿಡುವು ಇದ್ದಾಗೆಲೆಲ್ಲಾ, ವಿದೇಶಕ್ಕೆ ಹೋಗಿ ಸಮಯ ಕಳೆಯುತ್ತಾರೆ. ಐಷಾರಾಮಿ ರೆಸಾರ್ಟ್ ಗಳಲ್ಲಿ ಸಮಯ ಕಳೆಯುವುದು ತಮನ್ನಾ ಅವರಿಗೆ ತುಂಬಾ ಇಷ್ಟ. ಇದಷ್ಟೇ ಅಲ್ಲದೆ, ತಮನ್ನಾ ಅವರ ಬಳಿ ಇಡೀ ಪ್ರಪಂಚದಲ್ಲಿ ಐದನೇ ಅತಿ ದುಬಾರಿ ಮತ್ತು ಅತಿ ದೊಡ್ಡದಾದ ವಜ್ರದ ಉಂಗುರ ತಮನ್ನಾ ಅವರ ಬಳಿ ಇದೆ. ಈ ಉಂಗುರದ ಬೆಲೆ ಬರೋಬ್ಬರಿ 2ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಇದೇ ಉಂಗುರವನ್ನು ತೆಲುಗು ಚಿತ್ರರಂಗದ ಖ್ಯಾತ ನಟ ರಾಮ್ ಚರಣ್ ಅವರು ತಮ್ಮ ಪತ್ನಿ ಉಪಾಸನ ಅವರಿಗೆ ಗಿಫ್ಟ್ ಕೊಟ್ಟಿದ್ದರು. ಇದೀಗ ಇದೇ ವಜ್ರದ ಉಂಗುರ ತಮನ್ನಾ ಅವರ ಬಳಿ ಇರುವುದನ್ನು ತಿಳಿದು ಅಭಿಮಾನಿಗಳು ಶಾಕ್ ಆಗಿದ್ದಾರೆ.
Comments are closed.