ಡ್ಯಾನ್ಸಿಂಗ್ ಚಾಂಪಿಯನ್ ವಿನ್ನರ್ ಗೆ ವಿಶೇಷ ಟ್ರೋಫಿ. ಚಿಕ್ಕ ಟ್ರೋಪಿಯಲ್ಲಿರುವ ವಿಶೇಷತೆ ಏನು ಗೊತ್ತೇ??
ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾದ ಆಸಕ್ತಿಕರ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸಿಂಗ್ ಚಾಂಪಿಯನ್ಸ್. ಈ ಶೋ ಬಹಳಷ್ಟು ವಿಶೇಷತೆಯಿಂದ ಕೂಡಿದೆ. ಮೊದಲ ಬಾರಿಗೆ ಮೇಘನಾ ರಾಜ್ ಅವರನ್ನು ಮೊದಲ ಬಾರಿಗೆ ರಿಯಾಲಿಟಿ ಶೋ ಜಡ್ಜ್ ಆಗಿ ಕರೆತರಲಾಯಿತು, ಹಾಗೂ ಡ್ಯಾನ್ಸರ್ ಮಯೂರಿ ಮತ್ತು ವಿಜಯ್ ರಾಘವೇಂದ್ರ ಅವರು ಜಡ್ಜ್ ಆಗಿ ಬಂದರು, ಹಾಗೂ ಅಕುಲ್ ಬಾಲಾಜಿ ಅವರು ಬಹಳ ದಿನಗಳ ನಂತರ ನಿರೂಪಕನಾಗಿ ಮತ್ತೆ ಬಂದರು. ಇದೀಗ ಈ ಶೋ ಫಿನಾಲೆಗೆ ಬಂದಿದೆ. ಈ ಬಾರಿ ಟ್ರೋಫಿ ಎಷ್ಟು ಸ್ಪೆಶಲ್ ಆಗಿರಲಿದೆ ಗೊತ್ತಾ?
ಡ್ಯಾನ್ಸಿಂಗ್ ಚಾಂಪಿಯನ್ಸ್ ಫಿನಾಲೆಯಲ್ಲಿ ಐದು ಸ್ಪರ್ಧಿಗಳು ಸೆಲೆಕ್ಟ್ ಆಗಿದ್ದಾರೆ. ಆ ಜೋಡಿಗಳು, ಚಂದನಾ ಅಕ್ಷತಾ, ಅರ್ಜುನ್ ಯೋಗಿ ರಾಣಿ, ಆರತಿ ಮತ್ತು ಸಾಗರ್, ಆರಾಧ್ಯ ಮತ್ತು ನಿವೇದಿತಾ, ಅನ್ಮೋಲ್ ಮತ್ತು ಆದಿತ್ಯ ಫೈನಲಿಸ್ಟ್ ಗಳಾಗಿದ್ದು, ಡ್ಯಾನ್ಸಿಂಗ್ ಚಾಂಪಿಯನ್ಸ್ ಫಿನಾಲೆ ಕಾರ್ಯಕ್ರಮ ಚಿತ್ರೀಕರಣವಾಗಿ, ಪ್ರಸಾರವಾಗಲು ಸಜ್ಜಾಗಿದೆ, ಇದೇ ಮೇ 29ರಂದು ಡ್ಯಾನ್ಸಿಂಗ್ ಚಾಂಪಿಯನ್ಸ್ ಫಿನಾಲೆ ಸಂಚಿಕೆ ಪ್ರಸಾರವಾಗಲಿದೆ. ಈ ಬಾರಿ ಫಿನಾಲೆಗೆ ಸ್ಪೆಷಲ್ ಆದ ಟ್ರೋಫಿ ಮಾಡಲಾಗಿದೆ, ಆ ಟ್ರೋಫಿ ಅಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜ್ ಕುಮಾರ್ ಅವರಿರುವ ಟ್ರೋಫಿ ತಯಾರಿಸಲಾಗಿದ್ದು, ಇಡೀ ಕಾರ್ಯಕ್ರಮವನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಡೆಡಿಕೇಟ್ ಮಾಡಲಾಗಿದೆ.
ಫಿನಾಲೆ ವೇದಿಕೆಗೆ ವಿಶೇಷ ಅತಿಥಿಯಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಆಗಮಿಸಿದ್ದಾರೆ, ವೇದಿಕೆ ಮೇಲೆ ಬಂದ ಅಶ್ವಿನಿ ಅವರು ಮಾತನಾಡಿ, ಎಲ್ಲಾ ಫೈನಲಿಸ್ಟ್ ಗಳಿಗೂ ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ. ಅಲ್ಲದೇ ಡ್ಯಾನ್ಸಿಂಗ್ ಚಾಂಪಿಯನ್ಸ್ ಶೋ ವಿನ್ನರ್ ಗೆ ಅಶ್ವಿನಿ ಅವರೇ ಟ್ರೋಫಿ ನೀಡಲಿದ್ದಾರೆ. ಅಪ್ಪು ಅವರ ಮೇಲಿನ ಗೌರವವನ್ನು ಈ ಮೂಲಕ ಸೂಚಿಸಿದೆ. ಡ್ಯಾನ್ಸಿಂಗ್ ಚಾಂಪಿಯನ್ಸ್ ಫಿನಾಲೆ ವೇದಿಕೆಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಸಹ ಗೆಸ್ಟ್ ಆಗಿ ಬಂದಿದ್ದು, ಪೊಗರು ಸಿನಿಮಾ ಹಾಡಿಗೆ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ. ಡ್ಯಾನ್ಸಿಂಗ್ ಚಾಂಪಿಯನ್ಸ್ ಟ್ರೋಫಿಯನ್ನು ಯಾವ ಜೋಡಿ ಮುಡಿಗೇರಿಸಿಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
Comments are closed.