ತನಗೆ 55 ವರ್ಷ ಆದಾಗ ಮದುವೆಯಾದ ಖ್ಯಾತ ನಟ, ಆದರೆ ಮದುವೆ ಹೆಣ್ಣಿಗೆ ಎಷ್ಟು ವಯಸ್ಸು ಗೊತ್ತೇ?? ಎಷ್ಟೊಂದು ಚಿಕ್ಕವರು ಗೊತ್ತೇ??
ಮದುವೆ ಎನ್ನುವುದು ಒಂದು ಸುಂದರವಾದ ಅನುಬಂಧ. ಈಗಿನ ದಿನಗಳಲ್ಲಿ ಮದುವೆಗೆ ಯಾವುದೇ ನಿರ್ಬಂಧ ಇಲ್ಲ. ಜಾತಿ, ಅಂತಸ್ತು, ವಯಸ್ಸು ಇದ್ಯಾವ ಭೇದವು ಇಲ್ಲದೆ ಮದುವೆಗಳು ನಡೆಯುತ್ತಿವೆ. ಸಾಮಾನ್ಯ ಜನರ ವಿಚಾರದಲ್ಲಿ ಮಾತ್ರವಲ್ಲ ಸೆಲೆಬ್ರಿಟಿಗಳು ಇದರಲ್ಲಿ ಮುಂದಿದ್ದಾರೆ. ವಯಸ್ಸನ್ನು ಲೆಕ್ಕ ಮಾಡದೆ ಮದುವೆ ಆಗಿರುವ ಅನೇಕ ಸೆಲೆಬ್ರಿಟಿಗಳನ್ನು ಈಗಾಗಲೇ ನೋಡಿದ್ದೇವೆ. ಹಲವು ಸೆಲೆಬ್ರಿಟಿಗಳು ವಯಸ್ಸನ್ನು ಹೆಚ್ಚಾಗಿ ಪರಿಗಣಿಸದೆ ಇಬ್ಬರ ನಡುವೆ ಇರುವ ಪ್ರೀತಿಯಿಂದ ಮದುವೆಯಾಗಿ, ಸುಖ ಜೀವನ ನಡೆಸುತ್ತಿದ್ದಾರೆ. ಇದೇ ರೀತಿ ಬಹಳ ಚಿಕ್ಕ ವಯಸ್ಸಿನ ಹುಡುಗಿಯನ್ನು ಮದುವೆಯಾಗಿರುವ ಬಾಲಿವುಡ್ ನಟನ ಬಗ್ಗೆ ಇಂದು ನಿಮಗೆ ತಿಳಿಸಲಿದ್ದೇವೆ..
ತಮಗಿಂತ ಬಹಳ ಕಡಿಮೆ ವಯಸ್ಸಿನ ಮದುವೆ ಆಗಿರುವ ಆ ಬಾಲಿವುಡ್ ನ ಖ್ಯಾತ ನಟ ಮಿಲಿಂದ್ ಸೋಮನ್. ಇವರು ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಬಹಳ ಫೇಮಸ್ ಆಗಿರುವ ನಟ. ವಿಭಿನ್ನವಾದ ಪಾತ್ರಗಳು ಮತ್ತು ಕಂಚಿನ ಕಂಠದ ಮೂಲಕ ಭಾರಿ ಜನಪ್ರಿಯತೆ ಮತ್ತು ಬೇಡಿಕೆ ಇವರಿಗಿದೆ. ತೆಲುಗಿನಲ್ಲಿ ಸಹ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಿಲಿಂದ್ ಅವರಿಗೆ ಈಗ 56 ವರ್ಷ ವಯಸ್ಸು, ಇವರು ಮದುವೆಯಾಗಿದ್ದು ಇತ್ತೀಚೆಗೆ ಒಂದೆರಡು ವರ್ಷಗಳ ಹಿಂದೆಯಷ್ಟೇ. 2018ರಲ್ಲಿ ಇವರು ಅಂಕಿತಾ ಕೊನ್ವಾರ್ ಅವರೊಡನೆ ಮದುವೆಯಾದರು. ಅಂಕಿತಾ ಅವರಿಗೆ ಕೇವಲ 25 ವರ್ಷ ವಯಸ್ಸಾಗಿದ್ದು, ಇವರಿಬ್ಬರ ನಡುವೆ ಇರುವ ವಯಸ್ಸಿನ ಅಂತರ ಬರೋಬ್ಬರಿ 30 ವರ್ಷಗಳು.
ಆದರೆ ವಯಸ್ಸಿನ ಸಮಸ್ಯೆ ತಮ್ಮಿಬ್ಬರ ನಡುವೆ ಬರದ ಹಾಗೆ, ಸಂತೋಷವಾದ ಜೀವನ ನಡೆಸುತ್ತಿದ್ದಾರೆ ಮಿಲಿಂದ್ ಮತ್ತು ಅಂಕಿತಾ. ಅಂಕಿತಾ ಅವರು ಮೊದಲಿಗೆ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು, ಫ್ಲೈಟ್ ನಲ್ಲೇ ಇವರಿಬ್ಬರಿಗೂ ಪರಿಚಯವಾಯಿತು, ಅವರ ಜೊತೆ ಸ್ನೇಹ ಬೆಳೆಸಿದ ಮಿಲಿಂದ್ ಪ್ರೀತಿಸಿ ಅಂಕಿತಾ ಅವರೊಡನೆ ಮದುವೆಯಾದರು. ಮಿಲಿಂದ್ ಅವರಿಗೆ ಇದು ಎರಡನೇ ಮದುವೆ. ಇವರು ಮೊದಲಿಗೆ ಹಾಲಿವುಡ್ ನಟಿ ಮೈಲಿನ್ ಜಂಪನೋಯ್ ಅವರೊಡನೆ 2006 ರಲ್ಲಿ ಮದುವೆಯಾಗಿ, 2 009ರಲ್ಲಿ ಅವರಿಗೆ ವಿಚ್ಛೇದನ ನೀಡಿದರು. ಬಳಿಕ 2018ರಲ್ಲಿ ಅಂಕಿತಾ ಅವರೊಡನೆ ಮದುವೆಯಾದರು. ಮಿಲಿಂದ್ ಅವರು ಫಿಟ್ನೆಸ್ ಫ್ರೀಕ್, ಇವರ ಕೂದಲಿಗೆ ಹೇರ್ ಡೈ ಹಚ್ಚಿದರೆ, 56 ವರ್ಷದವರ ಹಾಗೆ ಕಾಣಿಸುವುದಿಲ್ಲ.
Comments are closed.