ಮತ್ತೊಮ್ಮೆ ಬೆಲೆ ಏರಿಕೆ ಕಂಡ ರಾವಣನ ಲಂಕಾ. ಇದೀಗ ಒಂದು ಲೀಟರ್ ಪೆಟ್ರೋಲ್ ಗೆ ಎಷ್ಟು ದುಡ್ಡು ಕೊಡಬೇಕು ಗೊತ್ತೇ??
ಕರೊನಾ ಶುರುವಾದಗಿನಿಂದ ಹಲವು ದೇಶಗಳ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟಿಗೆ ಸಿಲುಕಿದೆ. ಅದರಲ್ಲೂ ಶ್ರೀಲಂಕಾ ದೇಶದಲ್ಲಿ ಈಗಿರುವ ಆರ್ಥಿಕ ಸ್ಥಿತಿ ಬಹಳ ಮೊಸವಾಗಿದೆ. ಅಲ್ಲಿನ ಜನರಿಗೆ ಜೀವನ ನಡೆಸುವುದೇ ಕಷ್ಟವಾಗಿದ್ದು, ಒಂದು ದಿನದ ಊಟವನ್ನು ಮಾಡಲಾಗದ ಮಟ್ಟಿಗೆ ಬೆಲೆ ಏರಿಕೆ ಕಂಡುಬಂದಿದೆ. ಆಹಾರ ಪದಾರ್ಥ, ಹೋಟೆಲ್ ಗಳಲ್ಲಿ ಊಟ, ಇಂಧನದ ಬೆಲೆ, ಎಲ್ಲದರಲ್ಲೂ ಏರಿಕೆಯಾಗಿ, ಅಲ್ಲಿನ ಪ್ರಜೆಗಳು ಶ್ರೀಲಂಕಾದಲ್ಲಿರುವುದೇ ಕಷ್ಟ ಎನ್ನುವ ಸ್ಥಿತಿಗೆ ತಲುಪಿದ್ದಾರೆ. ನಿನ್ನೇ ಒಂದೇ ದಿನಕ್ಕೆ ಮೂರು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸಿ, ದೇಶದ ಜನರಿಗೆ ಶಾಕ್ ನೀಡಿದೆ ಶ್ರೀಲಂಕಾ. ಇದೀಗ ಅಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೇಳಿ, ಜನರು ಬೆಚ್ಚಿಬಿದ್ದಿದ್ದಾರೆ..
ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಲೇ ಇದೆಯೇ ಹೊರತು, ಅಲ್ಲಿನ ಸ್ಥಿತಿ ಸಹಜ ಸ್ಥಿತಿಗೆ ಬರಲು ಕೆಲವು ಬಹಳ ಸಮಯ ಬೇಕಾಗುತ್ತದೆ. ಇದೀಗ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು, ಶ್ರೀಲಂಕಾ ಸರ್ಕಾರ ಮತ್ತೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ, ನಿನ್ನೆ ಒಂದು ಲೀಟರ್ ಪೆಟ್ರೋಲ್ ಬೆಲೆಯಲ್ಲಿ 24.3 ರೂಪಾಯಿ ಹೆಚ್ಚಳವಾಗಿದ್ದು, ಡೀಸೆಲ್ ಬೆಲೆಯಲ್ಲಿ 38.4 ರೂಪಾಯಿ ಬೆಲೆಯನ್ನು ಏರಿಕೆ ಮಾಡಲಾಗಿದೆ, ಈಗ ಒಂದು ಲೀಟರ್ ಪೆಟ್ರೋಲ್ ಬೆಲೆ 400 ರೂಪಾಯಿ ಆಗಿದ್ದು, ಒಂದು ಲೀಟರ್ ಪೆಟ್ರೋಲ್ ಬೆಲೆ 420 ರೂಪಾಯಿ ಆಗಿದೆ. ಒಂದೇ ದಿನದಲ್ಲಿ 3 ಬಾರಿ ಪೆಟ್ರೋಲ್ ಬೆಲೆ ಏರಿಸಲಾಗಿದೆ. ಇಂಧನ ಸಚಿವರಾದ ಕಂಚಾನ ವಿಜಿಶೇಖರ್ ಅವರು ಈ ವಿಚಾರ ತಿಳಿಸಿದ್ದಾರೆ.
ದೇಶದಲ್ಲಿ ಆರ್ಥಿಕ ಸ್ಥಿತಿ ಕುಸಿದಿರುವುದು ಹಾಗೂ ತೈಲ ಪೂರೈಕೆ ಇಲ್ಲದಿರುವುದರಿಂದ ಬೆಲೆ ಏರಿಕೆ ಮಾಡಲೇಬೇಕಾಗಿದೆ ಎಂದು ತಿಳಿಸಿದ್ದಾರೆ. ಶ್ರೀಲಂಕಾದಲ್ಲಿ ಈ ಬಿಕ್ಕಟ್ಟು ಶುರುವಾಗಿ ಬಹಳ ತಿಂಗಳುಗಳು ಕಳೆದಿದೆ, ಆದರೆ ಇನ್ನೂ ಅಲ್ಲಿನ ಸ್ಥಿತಿ ಸುಧಾರಿಸಿಲ್ಲ. ಶ್ರೀಲಂಕಾದ ಈ ಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದೆ, ಅಲ್ಲಿನ ಪ್ರಧಾನಿ ಮಹಿಂದ್ರ ರಾಜಪಕ್ಸೆ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಪ್ರತಿದಿನ ಜನರು ಹೋರಾಟ ನಡೆಸಿ ಜೀವನ ಸಾಗಿಸುವಂತಹ ಸ್ಥಿತಿ ಬಂದಿದೆ. ತರಕಾರಿ, ದಿನಸಿ, ಗ್ಯಾಸ್ ಬೆಲೆ ಎಲ್ಲವೂ ಏರಿಕೆಯಾಗಿ, ಜೀವನವೇ ಕಷ್ಟವಾಗಿ ಹೋಗಿದೆ.
Comments are closed.