ರಾಜನಂದಿನಿ ಪಾತ್ರ ಮರೆಯಾದ ಮೇಲೆ ಮತ್ತೊಮ್ಮೆ ಸಂಭಾವನೆ ಏರಿಸಿಕೊಂಡ ಮೇಘಾ ಶೆಟ್ಟಿ. ಒಂದು ಎಪಿಸೋಡಿಗೆ ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ??
ಕಿರುತೆರೆಯ ಸೆನ್ಸೇಷನ್ ಆಗಿದ್ದ ಮೇಘಾ ಶೆಟ್ಟಿ ಇಂದು ಸಿನಿಮಾಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ಸಹ ಬ್ಯುಸಿ ಆಗಿದ್ದಾರೆ. 2019ರಲ್ಲಿ ಜೀಕನ್ನಡ ವಾಹಿನಿಯಲ್ಲಿ ಶುರುವಾದ ಜೊತೆ ಜೊತೆಯಲಿ ಧಾರವಾಹಿ ಮೂಲಕ ನಟನೆಯ ಪ್ರಪಂಚಕ್ಕೆ ಎಂಟ್ರಿ ಕೊಟ್ಟ ಮೇಘಾ ಶೆಟ್ಟಿ ಅವರು ಅನು ಸಿರಿಮನೆ ಪಾತ್ರದ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾದರು. ಜೊತೆ ಜೊತೆಯಲಿ ಧಾರವಾಹಿ ಎಷ್ಟರ ಮಟ್ಟಿಗೆ ಜನಪ್ರಿಯತೆ ತಂದುಕೊಟ್ಟಿದೆ ಅಂದ್ರೆ, ಸಾಕಷ್ಟು ಜನ ಇವರನ್ನು ಅನು ಎಂದೇ ಗುರುತಿಸುತ್ತಾರೆ. ಜೊತೆ ಜೊತೆಯಲಿ ಇಂದ ಜನರ ಪ್ರೀತಿ, ದೊಡ್ಡ ಅಭಿಮಾನಿ ಬಳಗ ಎಲ್ಲವನ್ನು ಪಡೆದುಕೊಂಡಿದ್ದಾರೆ ಮೇಘಾ. ಇದೀಗ ಮೇಘಾ ಶೆಟ್ಟಿ ಅವರು ಸಂಭಾವನೆ ಹೆಚ್ಚಿಸಿಕೊಂಡಿದ್ದು, ಒಂದು ಎಪಿಸೋಡ್ ಗೆ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಗೊತ್ತಾ?
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಹಿರಿಯ ಕಲಾವಿದರಾದ ವಿಜಯಲಕ್ಷ್ಮಿ ಸಿಂಗ್ ಹಾಗೂ ಇನ್ನಿತರ ಕಲಾವಿದರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಈಗ ಜೊತೆ ಜೊತೆಯಲಿ ಧಾರವಾಹಿ ರೋಚಕವಾದ ಹಂತಕ್ಕೆ ಬಂದಿದೆ, ರಾಜನಂದಿನಿ ಫ್ಲ್ಯಾಶ್ ಬ್ಯಾಕ್ ಮುಗಿದು, ಆರ್ಯವರ್ಧನ್ ನಿಜರೂಪ ಏನು ಎನ್ನುವುದು ಅನುವಿಗೆ ಗೊತ್ತಾಗಿದೆ. ರಾಜನಂದಿನಿಯ ಪುನರ್ಜನ್ಮ ಅನು ಆಗಿದ್ದು, ಆರ್ಯನ ದಾರಿಯಲ್ಲೇ ಹೋಗಿ, ಬುದ್ಧಿ ಕಲಿಸುವ ಪ್ಲಾನ್ ಮಾಡುತ್ತಿದ್ದಾಳೆ ಅನು. ಈಗ ಅನು ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿ, ಅನು ಮಾತನಾಡುವ ಶೈಲಿ ಹಾಗೂ ಎಲ್ಲವೂ ಬದಲಾಗಿದೆ. ಅನು ಸ್ಟ್ರಾಂಗ್ ಮತ್ತು confident ಆಗಿದ್ದಾಳೆ. ಜೊತೆ ಜೊತೆಯಲಿ ಧಾರವಾಹಿ ಯಶಸ್ಸಿನ ಜೊತೆಗೆ, ಮೇಘಾ ಅಭಿನಯದ ಸಿನಿಮಾಗಳು ಬಿಡುಗಡೆಯಾಗಲು ತಯಾರಿವೆ.
ಗೋಲ್ಡನ್ ಸ್ಟಾರ್ ಗಣೇಶ್ ಅವರೊಡನೆ ಅಭಿನಯಿಸಿರುವ ತ್ರಿಬಲ್ ರೈಡಿಂಗ್ ಸಿನಿಮಾ ಬಿಡುಗಡೆಗೆ ರೆಡಿಯಿದೆ. ಡಾರ್ಲಿಂಗ್ ಕೃಷ್ಣ ಅವರೊಡನೆ ದಿಲ್ ಪಸಂದ್ ಸಿನಿಮಾದಲ್ಲಿ ನಾಯಿಸುತ್ತಿದ್ದಾರೆ ಮೇಘಾ ಶೆಟ್ಟಿ. ಜೊತೆಗೆ ಒಂದು ಪ್ಯಾನ್ ಇಂಡಿಯಾ ಸಿನಿಮಾವನ್ನು ಸಹ ಮೇಘಾ ಶೆಟ್ಟಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಮತ ಮಹೇಶ್ ಬಾಬು ಅವರೊಡನೆ ಒಂದು ಜಾಹೀರಾತಿನಲ್ಲಿ ಸಹ ಕಾಣಿಸಿಕೊಂಡರು ಮೇಘಾ. ಡಿಬಾಸ್ ದರ್ಶನ್ ಅವರೊಡನೆ ಸಹ ಫೋಟೋ ಶೇರ್ ಮಾಡಿ, ದರ್ಶನ್ ಅವರ ಅಭಿಮಾನಿಗಳಿಗೆ ಹತ್ತಿರವಾಗಿದ್ದರು. ಬೇರೆ ಕೆಲಸಗಳಲ್ಲಿ ಬ್ಯುಸಿ ಇದ್ದರೂ ಸಹ, ಮೇಘಾ ಶೆಟ್ಟಿ ಅವರು ಧಾರವಾಹಿಯಿಂದ ಹೊರಬಂದಿಲ್ಲ, ಜೊತೆ ಜೊತೆಯಲಿ ಮುಗಿಯುವವರೆಗೂ ಅನು ಸಿರಿಮನೆ ಪಾತ್ರದಲ್ಲಿ ಮುಂದುವರೆಯುವುದಾಗಿ ಹೇಳಿದ್ದರು ಮೇಘಾ. ಇದೀಗ ರಾಜನಂದಿನಿ ಪಾತ್ರ ಕೊನೆಯಾಗಿ ಮತ್ತೆ ಅನು ಸಿರಿಮನೆ ಬಂದಿದ್ದು, ಮತ್ತೊಮ್ಮೆ ಸಂಭಾವನೆ ಏರಿಸಿಕೊಂಡಿದ್ದಾರೆ ಮೇಘಾ. ಪ್ರಸ್ತುತ ಮೇಘಾ ಅವರು ಒಂದು ಎಪಿಸೋಡ್ ಗೆ 45 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.
Comments are closed.