ತನ್ನ ಕ್ರಿಕೆಟ್ ಜೀವನದಲ್ಲಿ ಅತಿ ದೊಡ್ಡ ಪಾತ್ರವಹಿಸಿದ ಆಟಗಾರನ ಕುರಿತು ಮಾತನಾಡಿ ಪಾಂಡ್ಯ ಹೇಳಿದ್ದೇನು ಗೊತ್ತೇ?? ಆ ದಿಗ್ಗಜ ನಾಯಕನ್ಯಾರು ಗೊತ್ತೇ??
ಹಾರ್ದಿಕ್ ಪಾಂಡ್ಯ ಈ ಬಾರಿ ಐಪಿಎಲ್ ನಲ್ಲಿ ನಾಯಕನಾಗಿ ಮಾತ್ರವಲ್ಲದೆ, ಆಟಗಾರನಾಗಿ ಸಹ ಅದ್ಭುತ ಯಶಸ್ಸು ಪಡೆಯುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು ಅತ್ಯುತ್ತಮವಾದ ಆಲ್ ರೌಂಡರ್ ಎನ್ನುವ ವಿಚಾರ ನಮಗೆಲ್ಲಾ ಗೊತ್ತಿದೆ. ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾಗಿದ್ದ ಪಾಂಡ್ಯ ಇಂಜೂರಿ ಇಂದಾಗಿ ಟೀಮ್ ಇಂಡಿಯಾ ಇಂದ ಹೊರಗುಳಿದಿದ್ದರು. ಈ ವರ್ಷ ಐಪಿಎಲ್ 15ನೇ ಆವೃತ್ತಿಯ ಮೂಲಕ ಕ್ರಿಕೆಟ್ ಗೆ ಕಂಬ್ಯಾಕ್ ಮಾಡಿದ ಪಾಂಡ್ಯ, ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ. ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ ಮೊನ್ನೆಯ ಕ್ವಾಲೀಫೈಯರ್ ಪಂದ್ಯದಲ್ಲಿ ಗೆದ್ದು, ಫೈನಲ್ಸ್ ತಲುಪಿರುವ ಮೊದಲ ತಂಡ ಆಗಿದೆ. ಪಂದ್ಯದ ಗೆಲುವಿನ ಬಳಿಕ, ವರ್ಚುವಲ್ ಸಂದರ್ಶನದಲ್ಲಿ ಮಾತನಾಡಿದ ಹಾರ್ದಿಕ್ ಪಾಂಡ್ಯ, ತಮ್ಮ ಬೆಳವಣಿಗೆಗೆ ಕಾರಣವಾದ ಆ ಒಬ್ಬ ಆಟಗಾರನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ..
ಹಾರ್ದಿಕ್ ಪಾಂಡ್ಯ ಅವರಿಗೆ ಈ ಮೊದಲು ಒಂದು ತಂಡವನ್ನು ಮುನ್ನಡೆಸಿ ಯಾವುದೇ ಅನುಭವ ಇರಲಿಲ್ಲ. ಗುಜರಾತ್ ಟೈಟನ್ಸ್ ತಂಡ ಇದೇ ಮೊದಲ ಬಾರಿ ಐಪಿಎಲ್ ಗೆ ಸೇರ್ಪಡೆಯಾಗಿದೆ, ಹಾರ್ದಿಕ್ ಪಾಂಡ್ಯ ಈ ತಂಡಕ್ಕೆ ಡ್ರಾಫ್ಟ್ ಆಟಗಾರನಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಖರೀದಿ ಮಾಡಲಾಯಿತು. ನಂತರ ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ಕ್ಯಾಪ್ಟನ್ ಆಗಿ ಮಾಡಬೇಕೆಂದು ಮ್ಯಾನೇಜ್ಮೆಂಟ್ ನಿರ್ಧಾರ ಮಾಡಿ, ಪಾಂಡ್ಯ ಅವರ ಕೈಗೆ ಕ್ಯಾಪ್ಟನ್ಸಿ ಕೊಟ್ಟಾಗ, ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕನಾಗಿ ಅನುಭವ ಇಲ್ಲ, ಅವರಿಗೆ ನಾಯಕತ್ವ ಕೊಟ್ಟಿದ್ದು ಒಳ್ಳೆಯದಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಆ ಟೀಕೆಗಳು, ಮಾತುಗಳು ಎಲ್ಲವನ್ನು ಮೀರಿ ಇಂದು ಹಾರ್ದಿಕ್ ಪಾಂಡ್ಯ ತಮ್ಮನ್ನು ತಾವು ಪ್ರೂವ್ ಮಾಡಿಕೊಂಡಿದ್ದಾರೆ. ನಾಯಕನಾಗಿ ತಮ್ಮ ತಂಡವನ್ನು ಅದ್ಭುತವಾಗಿ ಮುನ್ನಡೆಸಿ, ಬಹುತೇಕ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದಾರೆ.
ಐಪಿಎಲ್ 15ನೇ ಆವೃತ್ತಿಯಲ್ಲಿ ಫೈನಲ್ಸ್ ಪ್ರವೇಶಿಸಿದ ಮೊದಲ ತಂಡವಾಗಿದೆ ಗುಜರಾತ್ ಟೈಟನ್ಸ್. ಈ ವಿಕ್ಟರಿ ಸಂತೋಷದಲ್ಲಿ ಹಾರ್ದಿಕ್ ಪಾಂಡ್ಯ ಅವರು ಮಾತನಾಡಿದ್ದು, ತಮ್ಮ ಈ ಬೆಳೆವಣಿಗೆಗೆ ಪ್ರಮುಖ ಕಾರಣ ಎಂ.ಎಸ್.ಧೋನಿ ಅವರು ಎಂದಿದ್ದಾರೆ. ಧೋನಿ ಅವರು ತಮ್ಮ ವೃತ್ತಿ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರಿದ್ದಾರೆ ಎನ್ನುವುದನ್ನು ತಿಳಿಸಿದ್ದಾರೆ. “ಮಾಹಿ ಭಾಯ್ ನನ್ನ ವೃತ್ತಿಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ನನಗೆ ಸಹೋದರ, ಸ್ನೇಹಿತ ಮತ್ತು ಕುಟುಂಬದಲ್ಲಿ ಒಬ್ಬರಿದ್ದಹಾಗೆ. ಧೋನಿ ಅವರಿಂದ ನಾನು ಸಾಕಷ್ಟು ವಿಚಾರಗಳನ್ನು ಕಲಿತುಕೊಂಡಿದ್ದೇನೆ. ವೈಯಕ್ತಿಕವಾಗಿ ಇನ್ನಷ್ಟು ಬಲಿಷ್ಟವಾಗಲು ನಾನು ಇಷ್ಟಪಡುತ್ತೇನೆ. ನನ್ನ ಬಗ್ಗೆ ಹೆಮ್ಮೆ ಇದ್ದು, ಎಲ್ಲಾ ವಿಭಾಗಗಳನ್ನು ನಿರ್ವಹಿಸಲು ನನ್ನಿಂದ ಸಾಧ್ಯವಾಗುತ್ತಿದೆ. ” ಎಂದಿದ್ದಾರೆ ಹಾರ್ದಿಕ್ ಪಾಂಡ್ಯ.
Comments are closed.