ದಿಡೀರ್ ಎಂದು ಭಾರತ ತಂಡದ ಮ್ಯಾನೇಜ್ಮೆಂಟ್ ವಿರುದ್ಧ ಅಸಮಾಧಾನ ಹೊರ ಹಾಕಿದ ಸೆಹ್ವಾಗ್, ಅಂದು ಇವರನ್ನು ಹೇಗೆ ನಡೆಸಿಕೊಂಡಿದ್ದರಂತೆ ಗೊತ್ತೇ??
ವೀರೇಂದ್ರ ಸೆಹ್ವಾಗ್ ಅವರು ಭಾರತ ಕ್ರಿಕೆಟ್ ತಂಡ ಕಂಡಂತಹ ಅದ್ಭುತವಾದ ಆಟಗಾರರಲ್ಲಿ ಒಬ್ಬರು. ಇಂದು ಇವರನ್ನು ಕ್ರಿಕೆಟ್ ಲೆಜೆಂಡ್ ಎಂದೇ ಕರೆಯುತ್ತಾರೆ. ಇಂದಿನ ಎಲ್ಲಾ ಯುವ ಆಟಗಾರರಿಗೂ ಸೆಹ್ವಾಗ್ ಅವರು ಸ್ಪೂರ್ತಿಯ ಚಿಲುಮೆಯಾಗಿ ನಿಂತಿದ್ದಾರೆ. ಸೆಹ್ವಾಗ್ ಅವರು ಇಂದು ನಿವೃತ್ತಿ ಹೊಂದಿದ್ದಾರೆ. ಐಪಿಎಲ್ ಜೊತೆ ಸಹ ಬಾಂಧವ್ಯ ಹೊಂದಿದವರು ಸೆಹ್ವಾಗ್. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆಡುತ್ತಿದ್ದರು. ಪ್ರಸ್ತುತ ಸೆಹ್ವಾಗ್ ಅವರು ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯಗಳಿಂದ ದೂರ ಉಳಿದಿದ್ದಾರೆ.
ಆದರೆ ಸೆಹ್ವಾಗ್ ಅವರು ನೀಡುವ ಹೇಳಿಕೆಯ ಮೂಲಕ ಆಗಾಗ ಸುದ್ದಿಯಾಗುತ್ತಾರೆ. ಮೇ 29ರಂದು ಐಪಿಎಲ್ ಪಂದ್ಯಗಳು ಮುಗಿದ ಬಳಿಕ, ಸೌತ್ ಆಫ್ರಿಕಾ ವಿರುದ್ಧ ಟಿ20 ವಿಶ್ವಕಪ್ ಪಂದ್ಯಗಳು ಆರಂಭವಾಗಲಿದೆ, ಆ ಪಂದ್ಯಗಳಿಗೆ ಟೀಮ್ ಇಂಡಿಯಾ ಆಟಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ, ಕೆಲವು ಆಟಗಾರರನನ್ನು ಕೈಬಿಟ್ಟಿದ್ದಕ್ಕೆ, ಸೆಹ್ವಾಗ್ ಅವರು ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೆ, ಆಟಗಾರರ ಆಯ್ಕೆಯ ಮೊದಲು ಯಾವ ಆಟಗಾರ ಟೀಮ್ ನಲ್ಲಿದ್ದರೆ ಒಳ್ಳೆಯದು ಎಂದು ಸಹ ಸಲಹೆ ನೀಡಿದ್ದರು ಸೆಹ್ವಾಗ್. ಇದೀಗ ಸೆಹ್ವಾಗ್ ಅವರು ಟೀಮ್ ಇಂಡಿಯಾ ಮೇಲೆ ಕೋಪಗೊಂಡಿದ್ದು, ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ..
ಟೀಮ್ ಇಂಡಿಯಾ ಬಗ್ಗೆ ಕೆಂಡಕಾರಿರುವ ಸೆಹ್ವಾಗ್ ಅವರು, ಟೀಮ್ ಇಂಡಿಯಾ ನನ್ನ ಕನಸನ್ನು ನುಚ್ಚು ನೂರು ಮಾಡಿತು ಎಂದಿದ್ದಾರೆ. “ಟೆಸ್ಟ್ ಕ್ರಿಕೆಟ್ ನಲ್ಲಿ 10,000 ಸಾವಿರ ರನ್ ಗಳಿಸಿ ನಿವೃತ್ತಿ ಪಡೆಯಬೇಕು ಎಂದುಕೊಂಡಿದ್ದ. ಆದರೆ ಇಂಡಿಯನ್ ಕ್ರಿಕೆಟ್ ತಂಡ ನನ್ನ ಕನಸು ನನಸಾಗಲು ಬಿಡಲಿಲ್ಲ. 2013ರಲ್ಲಿ ಫಾರ್ಮ್ ಕಳೆದುಕೊಂಡೇ, ಅದಾದ ಬಳಿಕ ನನ್ನನ್ನು ಟೆಸ್ಟ್ ಕ್ರಿಕೆಟ್ ತಂಡದಿಂದ ತೆಗೆದುಹಾಕಲಾಗಿತ್ತು. ಈ ಘಟನೆ ನನಗೆ ತುಂಬಾ ನೋವು ನೀಡಿತ್ತು. 10,000 ರನ್ ಗಳಿಸಬೇಕು ಎನ್ನುವ ನನ್ನ ಆಸೆ ನೆರವೇರಲು ಟೀಮ್ ಇಂಡಿಯಾ ಬಿಡಲಿಲ್ಲ..” ಎಂದು ಹೇಳಿಕೆ ನೀಡಿದ್ದಾರೆ ಸೆಹ್ವಾಗ್.
Comments are closed.