ಮನೆದೇವ್ರು ಧಾರಾವಾಹಿಯಲ್ಲಿ ಮಿಂಚಿ ಟಾಪ್ ನಟಿ ಎನಿಸಿಕೊಂಡಿದ್ದ ನಟಿ ಈಗ ಏನು ಮಾಡುತ್ತಿದ್ದಾರೆ ಗೊತ್ತೇ?? ಹೇಗಿದ್ದಾರೆ ಗೊತ್ತೇ?
ಕನ್ನಡ ಕಿರುತೆರೆಗೆ ಸಾಕಷ್ಟು ಕಲಾವಿದರು ಬಂದು ಹೋಗಿದ್ದಾರೆ. ಅವರಲ್ಲಿ ಕೆಲವರನ್ನು ಮಾತ್ರ ಜನರು ನೆನಪಲ್ಲಿ ಇಟ್ಟುಕೊಂಡಿರುತ್ತಾರೆ. ಅಂತಹ ಕಲಾವಿದರಲ್ಲಿ ಒಬ್ಬರು ಅರ್ಚನಾ ಲಕ್ಷ್ಮೀನಾರಾಯಣ ಸ್ವಾಮಿ. ಇವಯು ಕಳೆಯ ಕನ್ನಡ ವಾಹಿನಿಯಲ್ಲಿ ಕೆಲವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ಮನೆದೇವ್ರು ಧಾರವಾಹಿಯಲ್ಲಿ ಅಭಿನಯಿಸಿದ್ದರು. ಈ ಧಾರಾವಾಹಿಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿರ್ಮಾಣ ಮಾಡಿದ್ದರು. ಕುಟುಂಬ ಸಮೇತ ಕೂತು ನೋಡುವ ಕೌಟುಂಬಿಕ ಧಾರವಾಹಿ ಆಗಿತ್ತು ಮನೆದೇವ್ರು. ಈ ಧಾರಾವಾಹಿಯಲ್ಲಿ ಮುಗ್ಧ ಹುಡುಗಿ ಜಾನಕಿಯ ಪಾತ್ರದಲ್ಲಿ ನಟಿಸುತ್ತಿದ್ದರು ಅರ್ಚನಾ.
ಮನೆದೇವ್ರು ಧಾರಾವಾಹಿಯ ಜಾನಕಿ ಪಾತ್ರದ ಮುಗ್ಧತೆ ಮತ್ತು ನಗು ಜನರಿಗೆ ತುಂಬಾ ಇಷ್ಟವಾಗಿತ್ತು. ಇವರ ಅಭಿನಯ ಸಹ ಸುಂದರವಾಗಿತ್ತು. ಕನ್ನಡದಲ್ಲಿ ಮನೆದೇವ್ರು ಜೊತೆಗೆ ಇನ್ನು ಒಂದೆರಡು ಕನ್ನಡ ಧಾರವಾಹಿಯಲ್ಲಿ ನಟಿಸಿದ್ದರು. ಹಾಗೆಯೇ ಕನ್ನಡ ಮಾತ್ರವಲ್ಲದೆ ತಮಿಳು ಧಾರವಾಹಿಯಲ್ಲಿ ಸಹ ನಟಿಸಿ, ಅಲ್ಲಿ ಸಹ ಹೆಚ್ಚಿನ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ನಟನೆಯನ್ನು ಬಿಟ್ಟು ಹೋದರು ಅರ್ಚನಾ. ಅದಕ್ಕೆ ಕಾರಣ ಇದ್ದು, ಅರ್ಚನಾ ಅವರು ಮದುವೆಯಾದ ಕಾರಣ ನಟನೆಯಿಂದ ದೂರ ಸರಿದರು. ತಮ್ಮ ಬಹುಕಾಲದ ಗೆಳೆಯ ವಿಜ್ಞೇಶ್ ಅವರೊಡನೆ ಮದುವೆಯಾದರು ಅರ್ಚನಾ. ಮದುವೆ ಬಳಿಕ ಅಮೆರಿಕಾ ಗೆ ಹೋಗಿ ಸೆಟ್ಲ್ ಆದರು.
ಮೊದಲಿಗೆ ಅರ್ಚನಾ ಅವರು ನ್ಯೂಯಾರ್ಕ್ ನಲ್ಲಿದ್ದರು, ಪ್ರಸ್ತುತ ಗಂಡನ ಜೊತೆಗೆ ಫ್ಲೋರಿಡಾದಲ್ಲಿ ಸೆಟ್ಲ್ ಆಗಿದ್ದಾರೆ. ಇತ್ತೀಚೆಗೆ ಹೊಸದಾದ ಮರ್ಸಿಡಿಸ್ ಬೆಂಜ್ ಕಾರ್ ಖರೀದಿಸಿ, ಮನೆಗೆ ಹೊಸ ಅತಿಥಿ ಯನ್ನು ಬರಮಾಡಿಕೊಂಡಿದ್ದಾರೆ ಅರ್ಚನಾ. ಕಾರ್ ಎದುರು ಪತಿಯ ಜೊತೆ ನಿಂತಿರುವ ಫೋಟೋ ಒಂದನ್ನು ಶೇರ್ ಮಾಡಿಕೊಂಡು, ಸಂತೋಷ ವ್ಯಕ್ತಪಡಿಸಿದ್ದರು. ನಟನೆಗೆ ಬರುವ ಮೊದಲು ಅರ್ಚನಾ ಅವರು ಹೆಚ್.ಆರ್ ಆಗಿ ಕೆಲಸ ಮಾಡುತ್ತಿದ್ದರು. ವಿದೇಶಕ್ಕೆ ಹೋದಮೇಲು, ಆರು ತಿಂಗಳ ಕಾಲ ಕೆಲಸ ಹುಡುಕಿ ಕಂಪನಿಯೊಂದರಲ್ಲಿ ಹೆಚ್.ಆರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈಗಲೂ ಇವರನ್ನು ನೆನೆಪಿಟ್ಟುಕೊಂಡಿರುವ ಅಭಿಮಾನಿಗಳು ಅರ್ಚನಾ ಅವರನ್ನು ಮಿಸ್ ಮಾಡಿಕೊಳ್ಳುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಅರ್ಚನಾ ಆಗಾಗ ಗಂಡನ ಜೊತೆಗೆ ಫೋಟೋಸ್ ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.
Comments are closed.