Neer Dose Karnataka
Take a fresh look at your lifestyle.

ಮುಂದಿನ ರಾಜಸ್ಥಾನ ವಿರುದ್ಧದ ಪಂದ್ಯದ ಪಿಚ್ ರಿಪೋರ್ಟ್, ಪಂದ್ಯ ನಡೆಯುವುದು, ಯಾವಾಗ, ಎಲ್ಲಿ ಗೊತ್ತೆ??

22

ನಮಸ್ಕಾರ ಸ್ನೇಹಿತರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಲಕ್ನೋ ತಂಡದ ವಿರುದ್ಧ ಅಧಿಕಾರಯುತ ಗೆಲುವನ್ನು ಸಾಧಿಸುವ ಮೂಲಕ ಕ್ವಾಲಿಫೈಯರ್ 2 ಹಂತಕ್ಕೆ ಗ್ರಾಂಡ್ ಎಂಟ್ರಿ ನೀಡಿದೆ. ಕ್ವಾಲಿಫೈಯರ್ 2 ರಲ್ಲಿ ಬಲಿಷ್ಠ ರಾಜಸ್ಥಾನ ರಾಯಲ್ಸ್ ತಂಡವನ್ನು ಆರ್ಸಿಬಿ ತಂಡ ಎದುರಿಸಲಿದೆ. ಈ ಪಂದ್ಯದ ಕುರಿತಂತೆ ಸಂಪೂರ್ಣ ಡೀಟೇಲ್ಸ್ ಅನ್ನು ಲೇಖನಿಯಲ್ಲಿ ನಾವು ನೀಡಲಿದ್ದೇವೆ. ರಾಜಸ್ಥಾನ್ ಹಾಗೂ ಆರ್ಸಿಬಿ ನಡುವಣ ಕ್ವಾಲಿಫೈಯರ್ 2 ಪಂದ್ಯ ನಾಳೆ ಅಂದರೆ ಮೇ 27ರಂದು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದರಲ್ಲಿ ಗೆದ್ದ ತಂಡ ಫೈನಲ್ ಪಂದ್ಯವನ್ನು 29ರಂದು ಗುಜರಾತ್ ತಂಡದ ವಿರುದ್ಧ ಆಡಲಿದೆ. ಪಂದ್ಯ ಆರಂಭವಾಗುವ ಸಮಯದ ಕುರಿತಂತೆ ಮಾತನಾಡುವುದಾದರೆ ಭಾರತೀಯ ಕಾಲಮಾನದ 7 ಗಂಟೆಗೆ ಟಾಸ್ ನಡೆಯಲಿದ್ದು 7.30 ಗೆ ಇತ್ತಂಡಗಳ ನಡುವಿನ ಪಂದ್ಯಾಟ ಆರಂಭವಾಗಲಿದೆ.

ಕೊನೆಯ ವರ್ಷವಷ್ಟೇ ಲೋಕಾರ್ಪಣೆ ಗೊಂಡಿರುವ ನರೇಂದ್ರಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯಾಟ ಸಾಗಿ ಬರಲಿದೆ. ಇನ್ನು ಈ ಪಂದ್ಯದ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಮೂಡಿ ಬರಲಿದ್ದು ಡಿಜಿಟಲ್ ಪ್ಲಾಟ್ಫಾರ್ಮ್ ಆಗಿರುವ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಕೂಡ ಪ್ರಸಾರ ಮೂಡಿಬರಲಿದೆ. ಇನ್ನು ಈ ಕ್ರೀಡಾಂಗಣದ ಪಿಚ್ ರಿಪೋರ್ಟ್ ಬಗ್ಗೆ ಹೇಳುವುದಾದರೆ ಸ್ಕೋರ್ ಮಾಡಲು ಅತ್ಯಂತ ಉತ್ತಮವಾದ ಪಿಚ್ ಆಗಿದೆ. ಇಲ್ಲಿ ಔಟ್ ಫೀಲ್ಡ್ ಕೂಡ ಅತ್ಯಂತ ವೇಗವಾಗಿದೆ. ಹೀಗಾಗಿ ಬ್ಯಾಟ್ಸ್ಮನ್ ಗಳಿಗೆ ಇಲ್ಲಿ ರನ್ ಗಳಿಸಲು ಉತ್ತಮ ಅವಕಾಶ ಸಿಗಲಿದೆ ಬೌಲರ್ಗಳು ಹೊಸ ಬಾಲ್ ನೊಂದಿಗೆ ತಮ್ಮ ಕರಾಮತ್ತು ತೋರಿಸಬೇಕಾಗಿದೆ. ಇಲ್ಲಿನ ಹವಾಮಾನ ವರದಿಯನ್ನು ನೋಡುವುದಾದರೆ 40 ಡಿಗ್ರಿ ಸೆಲ್ಸಿಯಸ್ ವರೆಗೂ ಕೂಡ ಅಧಿಕ ಹವಾಮಾನ ಇಲ್ಲಿ ಕಾಣಬಹುದಾಗಿದೆ. ಹೀಗಾಗಿ ಯಾವುದೇ ಮಳೆಯ ಹಿಂಜರಿಕೆ ಇಲ್ಲ. ಇದುವರೆಗೂ ರಾಜಸ್ಥಾನ ಹಾಗೂ ಆರ್ಸಿಬಿ ತಂಡಗಳು 27 ಬಾರಿಗೆ ಪರಸ್ಪರ ಸೆಣಸಾಡಿವೆ. ಇದರಲ್ಲಿ ಆರ್ಸಿಬಿ 13 ಪಂದ್ಯವನ್ನು ಗೆದ್ದರೆ ರಾಜಸ್ಥಾನ 11 ಪಂದ್ಯವನ್ನು ಗೆದ್ದಿದೆ. ಉಳಿದ ಮೂರು ಪಂದ್ಯಗಳು ಯಾವುದೇ ಫಲಿತಾಂಶವನ್ನು ಕಂಡಿಲ್ಲ.

ಇನ್ನು ಎರಡು ತಂಡಗಳ ಪ್ರಮುಖ ಆಟಗಾರರನ್ನು ಗುರುತಿಸುವುದಾದರೆ ಆರ್ಸಿಬಿ ತಂಡದಿಂದ ಡುಪ್ಲೆಸಿಸ್ ಗ್ಲೆನ್ ಮ್ಯಾಕ್ಸ್ವೆಲ್ ರಜತ್ ಪಾಟಿದಾರ್ ದಿನೇಶ್ ಕಾರ್ತಿಕ್ ಹಾಗೂ ವನಿಂದು ಹಸರಂಗ. ರಾಜಸ್ಥಾನ ತಂಡದ ಪ್ರಮುಖ ಆಟಗಾರರನ್ನು ಗುರುತಿಸುವುದಾದರೆ ಸಂಜು ಸಮ್ಸನ್ ವಾಸ್ ಬಟ್ಲರ್ ರವಿಚಂದ್ರನ್ ಅಶ್ವಿನ್ ಯಜುವೇಂದ್ರ ಚಹಾಲ್ ಹಾಗೂ ಶಿಮ್ರೋನ್ ಹೆಟ್ಮೈಯರ್. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ರಾಜಸ್ಥಾನ ರಾಯಲ್ಸ್ ತಂಡ ಎದುರಾದಾಗ ಎರಡು ತಂಡಗಳ ಅತ್ಯಂತ ಹೆಚ್ಚು ಹಾಗೂ ಕಡಿಮೆ ಸ್ಕೋರ್ ಗಳ ಬಗ್ಗೆ ಕೂಡ ನೋಡೋಣ ಬನ್ನಿ. ಎರಡು ತಂಡಗಳ ನಡುವಿನ ಪಂದ್ಯಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯಧಿಕ 200 ರನ್ನುಗಳನ್ನು ಗಳಿಸಿದೆ ಹಾಗೂ ಅತ್ಯಂತ ಕಡಿಮೆ ಸ್ಕೋರ್ 70 ರನ್ನುಗಳಾಗಿವೆ. ಇನ್ನು ರಾಜಸ್ತಾನ ರಾಯಲ್ಸ್ ತಂಡದ ಅತ್ಯಧಿಕ ಸ್ಕೋರ್ 217 ಆಗಿದ್ದು ಅತ್ಯಂತ ಕಡಿಮೆ 58 ರನ್ನುಗಳಾಗಿವೆ. ಒಟ್ಟಾರೆಯಾಗಿ ಎರಡು ತಂಡಗಳು ಕೂಡ ನೆಕ್ ಟು ನೆಕ್ ಕಾಂಪಿಟೇಶನ್ ನೀಡುತ್ತಿವೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇವೆರಡು ತಂಡಗಳ ನಡುವಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ಗೆಸ್ ಮಾಡುವುದನ್ನು ಮರೆಯಬೇಡಿ.

Leave A Reply

Your email address will not be published.