ಇಷ್ಟು ದಿನ ಜಂಟಿಯಾಗಿ ಕಾಣಿಸಿಕೊಳ್ಳುತ್ತಿದ್ದ ವಿಜಯ್ ಹಾಗೂ ರಶ್ಮಿಕಾ ಈಗ ಒಂಟೊಂಟಿ. ನಿಜ ಎನ್ನುವಂತೆ ಮತ್ತೊಮ್ಮೆ ನಡೆದುಕೊಂಡ ರಶ್ಮಿಕಾ ಮಾಡಿದ್ದೇನು ಗೊತ್ತೇ?
ತೆಲುಗು ಚಿತ್ರರಂಗದ ಲವ್ ಬರ್ಡ್ಸ್ ಎಂದು ಹೆಸರು ಪಡೆದುಕೊಂಡಿದ್ದವರು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಜೋಡಿ. ಗೀತಾ ಗೋವಿಂದಮ್ ಸಿನಿಮಾದಿಂದ ಶುರುವಾದ ಇವರಿಬ್ಬರ ಸ್ನೇಹ ಆತ್ಮೀಯತೆ ದಿನಗಳು ಕಳೆದಂತೆ ಹೆಚ್ಚಾಯಿತು ಹಲವು ಕಡೆಗಳಲ್ಲಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳಲು ಶುರು ಮಾಡಿದ್ದರು. ಸಾಕಷ್ಟು ಕಾರ್ಯಕ್ರಮಗಳಿಗೆ ಜೊತೆಯಾಗಿ ಹೋಗುತ್ತಿದ್ದರು, ಮುಂಬೈ ನಲ್ಲಿ ಹೋಟೆಲ್ ಗಳಿಗೆ ಊಟಕ್ಕೆ ಜೊತೆಯಾಗಿ ಹೋಗುತ್ತಿದ್ದರು. ಇವರಿಬ್ಬರು ಇಷ್ಟು ಆತ್ಮೀಯವಾಗಿರುವುದನುಮನ್ನು ನೋಡಿ, ಈ ಜೋಡಿ ಡೇಟಿಂಗ್ ಮಾಡುತ್ತಿದ್ದಾರೆ, ಮದುವೆ ಆಗುತ್ತಾರೆ ಎನ್ನುವ ಮಾತುಗಳು ಸಹ ಕೇಳಿ ಬಂದಿದ್ದವು. ಆದರೆ ಈಗ ಇವರಿಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವ ಹಾಗೆ ಕಾಣುತ್ತಿದೆ..
ರಶ್ಮಿಕಾ ವಿಜಯ್ 2022ರ ಹೊಸ ವರ್ಷದ ಆಚರಣೆಯನ್ನು ಜೊತೆಯಾಗಿ ಗೋವಾದಲ್ಲಿ ಆಚರಿಸಿದ್ದರು. ವಿಜಯ್ ಗಾಗಿ ಒಂದು ಸಾರಿ ಅಮೆರಿಕಾ ಗೆ ಹೋಗಿದ್ದರು. ವಿಜಯ್ ದೇವರಕೊಂಡ ಅವರ ಹುಟ್ಟುಹಬ್ಬದ ಸಮಯದಲ್ಲಿ ಪ್ರತಿವರ್ಷ ಸಂತೋಷದಿಂದ ವಿಶ್ ಮಾಡುತ್ತಿದ್ದರು ರಶ್ಮಿಕಾ. ಎರಡು ಮೂರು ಸಿನಿಮಾಗಳಲ್ಲಿ ಸಹ ಇವರಿಬ್ಬರು ಜೊತೆಯಾಗಿ ನಟಿಸಿದ್ದಾರೆ. ವಿಜಯ್ ರಶ್ಮಿಕಾ ಬಗ್ಗೆ ಸಾಕಷ್ಟು ಗುಸು ಗುಸು ಕೇಳಿಬರುತ್ತಿತ್ತು. ಇಬ್ಬರು ಪಾರ್ಟಿಗಳಲ್ಲಿ ಜೊತಯಾಗಿ ಕಾಣಿಸಿಕೊಳ್ಳುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿಲ್ಲ. ಇಬ್ಬರು ಬೇರೆ ಬೇರೆಯಾಗಿ ಕಾಣಿಸಿಕೊಳ್ಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.
ಈ ವರ್ಷ ವಿಜಯ್ ದೇವರಕೊಂಡ ಅವರ ಹುಟ್ಟುಹಬ್ಬದಂದು ರಶ್ಮಿಕಾ ಅವರು ವಿಜಯ್ ದೇವರಕೊಂಡ ಅವರ ಹುಟ್ಟುಹಬ್ಬದಂದು ಒಂದು ವಿಶ್ ಸಹ ಮಾಡಲಿಲ್ಲ. ಅಲ್ಲದೆ, ಮೊನ್ನೆಯಷ್ಟೇ ನಡೆದ ಬಾಲಿವುಡ್ ನ ಖ್ಯಾತ ನಿರ್ದೇಶಕರಾದ ಕರಣ್ ಜೋಹರ್ ಅವರ 50ನೇ ವರ್ಷದ ಬರ್ತ್ ಡೇ ಪಾರ್ಟಿಯಲ್ಲಿ ಬಾಲಿವುಡ್ ನ ಹೃತಿಕ್ ರೋಷನ್, ಗೌರಿ ಖಾನ್, ಆಮೀರ್ ಖಾನ್ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಹಾಜರಿದ್ದರು. ದಕ್ಷಿಣ ಭಾರತದ ನಿರ್ದೇಶಕ ಪೂರಿ ಜಗನ್ನಾಧ್, ನಟಿ ತಮನ್ನಾ, ಚಾರ್ಮಿ ಕೌರ್, ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಅವರಿಗೂ ಆಮಂತ್ರಣ ನೀಡಲಾಗಿತ್ತು. ಆದರೆ ಇವರಿಬ್ಬರು ಪಾರ್ಟಿಗೆ ಬೇರೆ ಬೇರೆಯಾಗಿ ಬಂದಿದ್ದು, ಒಬ್ಬರ ಜೊತೆಗೆ ಮತ್ತೊಬ್ಬರು ಒಂದು ಮಾತು ಸಹ ಆಡಿಲ್ಲ, ಹಾಗಾಗಿ ರಶ್ಮಿಕಾ ವಿಜಯ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಗಾಸಿಪ್ ಜೋರಾಗಿಯೇ ಕೇಳಿ ಬರುತ್ತಿದೆ.
Comments are closed.