ದುಡ್ಡಿದ್ರೆ ಏನ್ ಬೇಕಾದರೂ ಮಾಡಬಹುದು, ಶಾರುಖ್ ರವರ ಅದೊಂದು ಚಿಕ್ಕ ಅಭ್ಯಾಸಕ್ಕಾಗಿ ಅದೆಷ್ಟು ಲಕ್ಷ ಖರ್ಚು ಮಾಡಿದ್ದಾರೆ ಗೊತ್ತೇ??
ಬಾಲಿವುಡ್ ಬಾದ್ ಶಾ ಎಂದೇ ಖ್ಯಾತಿ ಪಡೆದಿರುವವರು ನಟ ಶಾರುಖ್ ಖಾನ್. ಇವರು 80ರ ದಶಕ ಮುಗಿಯುವ ಸಮಯದಲ್ಲಿ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಯಾವುದೇ ಗಾಡ್ ಫಾದರ್ ಇಲ್ಲದೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶಾರುಖ್ ಖಾನ್ ಅವರು ಸಾಕಷ್ಟು ಕಷ್ಟಪಟ್ಟು ಇಂದು ವಿಶ್ವಶ್ರೇಷ್ಠ ನಟರಾಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಶಾರುಖ್ ಖಾನ್ ಅವರು ಪ್ರಪಂಚದ ಅತ್ಯಂತ ಶ್ರೀಮಂತ ನಟರಲ್ಲಿ ಅಗ್ರಸ್ಥಾನದಲ್ಲಿರುವವರು. ಈ ನಟ ಇತ್ತೀಚೆಗೆ ಒಂದು ವಿಚಾರ ತಿಳಿಸಿದ್ದು, ತಮ್ಮದೊಂದು ಹವ್ಯಾಸ, ಮತ್ತು ಅದಕ್ಕಾಗಿ ತಾವು ಖರ್ಚು ಮಾಡಿರುವ ಹಣ ಎಷ್ಟು ಎನ್ನುವುದನ್ನು ಶಾರುಖ್ ಖಾನ್ ಅವರು ರಿವೀಲ್ ಮಾಡಿದ್ದು, ಅದನ್ನು ತಿಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.. ಅಷ್ಟಕ್ಕೂ ಆ ಹವ್ಯಾಸ ಏನು? ದುಬಾರಿ ಹಣ ಖರ್ಚಾಗಿದ್ದು ಯಾಕೆ? ತಿಳಿಸುತ್ತೇವೆ ನೋಡಿ..
ಸಾಮಾನ್ಯವಾಗಿ ಎಲ್ಲಾ ಅಭಿಮಾನಿಗಳಿಗೂ ತಮ್ಮ ಮೆಚ್ಚಿನ ಸೆಲೆಬ್ರಿಟಿ ಮೇಲೆ ಬಹಳ ಗೌರವ ಮತ್ತು ಅಭಿಮಾನ ಇರುತ್ತದೆ. ಅದೇ ರೀತಿ ಶಾರುಖ್ ಖಾನ್ ಅವರಿಗೂ ವಿಶ್ವದಲ್ಲೇ ಬಹುದೊಡ್ಡ ಅಭಿಮಾನಿ ಬಳಗ ಇದೆ ಎಂದರೆ ತಪ್ಪಾಗುವುದಿಲ್ಲ. ಶಾರುಖ್ ಖಾನ್ ಅವರು ನೆಲೆಸಿರುವುದು ಮುಂಬೈನಲ್ಲಿ, ಇವರ ಐಷಾರಾಮಿ ಮನೆಗೆ ಮನ್ನತ್ ಎಂದು ಹೆಸರಿಟ್ಟಿದ್ದಾರೆ, ಸೆಲೆಬ್ರಿಟಿಗಳ ಮನೆ ಹೇಗಿರುತ್ತದೆ, ಅವರ ಮನೆಯಲ್ಲಿ ಏನೆಲ್ಲಾ ಇರುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಇತ್ತೀಚೆಗೆ ಶಾರುಖ್ ಖಾನ್ ಅವರು ಎಲ್ಲರ ಕುತೂಹಲ ಹೆಚ್ಚಾಗುವ ವಿಚಾರ ಒಂದನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ, ಶಾರುಖ್ ಖಾನ್ ಅವರಿಗೆ ಬಿಡುವಿನ ಸಮಯ ಸಿಕ್ಕಾಗೆಲ್ಲಾ ಟಿವಿ ನೋಡುವ ಹವ್ಯಾಸ, ಹಾಗಾಗಿ ಅವರ ಮನೆಯ ಪ್ರತಿ ಕೋಣೆಯಲ್ಲೂ ಟಿವಿ ಇಟ್ಟಿದ್ದಾರಂತೆ. ಟಿವಿ ಬಗ್ಗೆ ಮಾತನಾಡಿರುವ ಶಾರುಖ್ ಅವರು ಆಸಕ್ತಿಕರ ವಿಚಾರ ತಿಳಿಸಿದ್ದಾರೆ…
“ನನ್ನ ಲಿವಿಂಗ್ ರೂಮ್ ನಲ್ಲಿ ಟಿವಿ ಇದೆ, ನನ್ನ ಬೆಡ್ ರೂಮ್ ನಲ್ಲಿ ಟಿವಿ ಇದೆ, ನನ್ನ ಮಗಳು ಸುಹಾನ ರೂಮ್ ನಲ್ಲಿ ಇದೆ, ಅಬ್ರಹಾಂ ರೂಮ್ ನಲ್ಲಿ ಟಿವಿ, ಆರ್ಯನ್ ರೂಮ್ ನಲ್ಲಿ ಸಹ ಟಿವಿ ಇದೆ, ಜಿಮ್ ನಲ್ಲೂ ಟಿವಿ ಇದೆ. ಒಂದೊಂದು ಟಿವಿ ಯಿಂದ ಒಂದರಿಂದ ಒಂದುವರೆ ಲಕ್ಷ ಎಂದುಕೊಂಡರೆ, ನಾನು ತಿವಿಗಾಗಿ 30 ರಿಂದ 40 ಲಕ್ಷ ರೂಪಾಯಿ ಖರ್ಚು ಮಾದ್ದೇನೆ..” ಎಂದಿದ್ದಾರೆ ನಟ ಶಾರುಖ್ ಖಾನ್. ಈ ವಿಚಾರವನ್ನು ಟಿವಿ ಬ್ರಾಂಡ್ ಒಂದರ ಸಂದರ್ಶನ ನಲ್ಲಿ ಹೇಳಿದ್ದಾರೆ. ಕೆಲ ಸಮಯದಿಂದ ನಟನೆಯಿಂದ ದೂರ ಉಳಿದಿದ್ದ ಶಾರುಖ್ ಖಾನ್ ಅವರು, ಇದೀಗ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದು, ರಾಜ್ ಕುಮಾರ್ ಹಿರಾನಿ ಅವರೊಡನೆ ಒಂದು ಸಿನಿಮಾದಲ್ಲಿ ನಟಿಸಲಿದ್ದಾರೆ.
Comments are closed.