ಅದ್ಭುತವಾಗಿ ಮೂಡಿಬರುತ್ತಿದ್ದ ದೊರೆಸಾನಿ ಧಾರಾವಾಹಿಗೆ ಇದೇನಾಯ್ತು?? ಪ್ರೇಕ್ಷಕರು ಒಮ್ಮೆಲೇ ಅಸಮಾಧಾನ ವ್ಯಕ್ತ ಪಡಿಸಿ ಹೇಳಿದ್ದೇನು ಗೊತ್ತೇ??
ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಧಾರವಾಹಿ ದೊರಸಾನಿ. ಇದು ಅಪ್ಪ ಮಗಳ ಬಾಂಧವ್ಯದ ಬಗ್ಗೆ ರೂಪಿತವಾಗಿರುವ ಕಥೆ. ಈ ಕತೆಯಲ್ಲಿ ರೂಪಿಕಾ, ಪೃಥ್ವಿ, ಜೈದೇವ್ ಮೋಹನ್ ಹಾಗೂ ಭವಾನಿ ಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆರಂಭದ ದಿನಗಳಲ್ಲಿ ಈ ಧಾರಾವಾಹಿಯ ಕಥೆ ಚೆನ್ನಾಗಿ ಸಾಗಿತ್ತು, ಲವಲವಿಕೆಯಿಂದ ಕೂಡಿತ್ತು, ಆದರೆ ಈಗ ಒಂದೇ ರೀತಿಯ ದೃಶ್ಯಗಳು ಪದೇ ಪದೇ ಬರುತ್ತಿದ್ದು, ಕಿರುತೆರೆ ವೀಕ್ಷಕರಿಗೆ ಇದು ಬೋರ್ ಆಗಿದೆ, ಇದೀಗ ಧಾರವಾಹಿ ನೋಡಿ ಇರಿಟೇಟ್ ಆಗಲು ಶುರುವಾಗಿದೆ. ಇದಕ್ಕೆ ಕಾರಣ ಏನು? ವೀಕ್ಷಕರು ಹೇಳ್ತಾ ಇರೋದಾದರು ಏನು? ತಿಳಿಸುತ್ತೇವೆ ನೋಡಿ..
ದೊರಸಾನಿ ಧಾರಾವಾಹಿಯಲ್ಲಿ ಪುರುಷೋತಮ್ ಅವರು ಮಧ್ಯಮವರ್ಗದ ಮನುಷ್ಯ, ಮರಿಯಾದೆಗೆ ಅಂಜಿ, ಮರಿಯಾದೆಯೇ ಎಲ್ಲಾ ಎಂದು ಬದುಕುತ್ತಿರುವವರು. ಮಗಳು ದೀಪಿಕಾ ಅಂದ್ರೆ ಪುರುಷೋತ್ತಮ್ ಗೆ ಪ್ರಾಣ. ದೀಪಿಕಾಳಿಗೂ ತಂದೆ ಅಂದ್ರೆ ಇನ್ನಿಲ್ಲದ ಗೌರವ. ತಂದೆಯ ಸಂತೋಷಕ್ಕಾಗಿ ಯಾವ ತ್ಯಾಗ ಮಾಡಲು ಸಿದ್ಧಳಿರುತ್ತಾಳೆ. ದೊರಸಾನಿ ಧಾರವಾಹಿಯಲ್ಲಿ ಆನಂದ್ ದೀಪಿಕಾ ಮದುವೆ ನಡೆಯೋದು ಬೇಡ ಎಂದು ಪುರುಷೋತ್ತಮ್ ಮತ್ತೊಂದು ಸಾರಿ ಹೇಳಿದ್ದಾರೆ. ಈಗ ದೀಪಿಕಾ ತಾನೇ ಮದುವೆ ಮುರಿದುಕೊಳ್ಳುವ ಮಾತುಗಳನ್ನಾಡುತ್ತಿದ್ದಾಳೆ. ಇದರ ನಡುವೆ ಪುರುಷೋತ್ತಮ್ ಗೆ ಹಾರ್ಟ್ ಪ್ರಾಬ್ಲಮ್ ಇರುವ ವಿಚಾರ ಆರಂಭದಲ್ಲೇ ತೋರಿಸಿದ್ದರು. ಈಗ ಅದನ್ನೇ ಪದೇ ಪದೇ ತೋರಿಸುತ್ತಿದ್ದಾರೆ, ಏನಾದರು ಸಣ್ಣ ವಿಚಾರ ನಡೆದರು ಸಹ ಎದೆ ಹಿಡಿದು ಕುಳಿತುಕೊಳ್ಳುವ ದೃಶ್ಯ ನೋಡಿ ನೋಡಿ ವೀಕ್ಷಕರು ಬೇಸತ್ತು ಹೋಗಿದ್ದಾರೆ.ಈ ಕಡೆ ನಾಯಕಿ ದೀಪಿಕಾ, ತಂದೆಗೆ ಹಾಗಾಗಲು ತಾನೇ ಕಾರಣ ಎಂದು ಅಳಲು ಶುರುಮಾಡುತ್ತಾಳೆ.
ದೊರಸಾನಿ ಧಾರವಾಹಿಯಲ್ಲಿ ಇದನ್ನು ಬಿಟ್ಟು ಇನ್ನೇನು ನಡೆಯುತ್ತಿಲ್ಲ ಎಂದು ವೀಕ್ಷಕರಿಗೆ ಧಾರವಾಹಿ ನೋಡಲು ಆಸಕ್ತಿ ಕಡಿಮೆಯಾಗಿದೆ. ಮಧ್ಯಮವರ್ಗದ ಪುರುಷೋತ್ತಮ್ ಅಭಿನಯ ಹೇಗಿದೆ ಅಂದ್ರೆ, ತಾನು ಮಧ್ಯಮವರ್ಗದಲ್ಲಿ ಹುಟ್ಟಿರುವುದು ಪಾಪ ಎನ್ನುವ ಹಾಗಿದೆ, ಯಾಕೆ ಇನ್ಯಾರು ಮಿಡ್ಲ್ ಕ್ಲಾಸ್ ಸಂತೋಷವಾಗಿಲ್ವಾ, ಎನ್ನುತ್ತಿದ್ದಾರೆ ಅಭಿಮಾನಿಗಳು. ಪುರುಷೋತ್ತಮ್ ಪ್ರತಿಸಾರಿ ಎದೆ ಹಿಡಿದುಕೊಂಡು ಕೂರೋದು ನೋಡಿ, ಮನೆಯಲ್ಲಿ ಧಾರವಾಹಿ ನೋಡುತ್ತಿರುವ ಪುಟ್ಟ ಮಕ್ಕಳು ಸಹ, ಏನಾದರೂ ಆದರೆ ಈಗ ಅಂಕಲ್ ಎದೆ ಹಿಡಿದುಕೊಂಡು ಕೂತ್ಕೊಳ್ತಾರೆ ಎಂದು ತಮಾಷೆ ಮಾಡುವ ಹಾಗೆ ಆಗಿದೆ. ನಾಯಕಿ ದೀಪಿಲಾ ತಂದೆಗೆ ಹಾಗಾಯ್ತು ಎಂದು ಅಳೋದನ್ನ ಬಿಟ್ಟು ಇನ್ನೇನು ಮಾತಾಡೋದೆ ಇಲ್ಲ. ನಾಯಕಿಗೆ, ಪ್ರಮುಖ ಪಾತ್ರಗಳಿಗೆ ಒಳ್ಳೆಯ ಡೈಲಾಗ್ಸ್ ಕೊಡಬೇಕು. ಕಥೆ ಆಸಕ್ತಿದಾಯಕವಾಗಿರಬೇಕು. ಒಂದೇ ರೀತಿಯ ಕಥೆ ನೋಡಿ ಸಾಕಾಗಿದೆ ಎನ್ನುತ್ತಿದ್ದಾರೆ ವೀಕ್ಷಕರು.
Comments are closed.