ಕನ್ನಡದ ಟಾಪ್ ಜೋಡಿಗಳಲ್ಲಿ ಒಂದಾಗಿರುವ ಸ್ಪಂದನ ಹಾಗೂ ವಿಜಯ ರಾಘವೇಂದ್ರ ರವರ ಲವ್ ಸ್ಟೋರಿ ಹೇಗೆ ನಡೆಯಿತು ಗೊತ್ತೇ??
ಕನ್ನಡ ಚಿತ್ರರಂಗದಲ್ಲಿ ಚಿನ್ನಾರಿಮುತ್ತ ಎಂದೇ ಖ್ಯಾತಿಯಾಗಿರುವವರು ನಟ ವಿಜಯ್ ರಾಘವೇಂದ್ರ. ಅಣ್ಣಾವ್ರ ಜೊತೆ ಚಲಿಸುವ ಮೋಡಗಳು ಸಿನಿಮಾ ಮೂಲಕ ಬಾಲನಟನಾಗಿ ಎಂಟ್ರಿ ಕೊಟ್ಟವರು. ಬಳಿಕ ಚಿನ್ನಾರಿಮುತ್ತ ಸಿನಿಮಾ ಅಭಿನಯಕ್ಕೆ ರಾಜ್ಯಪ್ರಶಸ್ತಿ ಪಡೆದರು ವಿಜಯ್ ರಾಘವೇಂದ್ರ. ಅದಾದ ಬಳಿಕ ಕೊಟ್ರೇಶಿ ಕನಸು ಎನ್ನುವ ಸಿನಿಮಾದಲ್ಲಿ ಸಹ ನಟಿಸಿ, ಆ ಸಿನಿಮಾಗು ರಾಜ್ಯಪ್ರಶಸ್ತಿ ಪಡೆದರು. ಪ್ರಸ್ತುತ ವಿಜಯ್ ರಾಘವೇಂದ್ರ ಅವರು ಸಿನಿಮಾ ಮತ್ತು ರಿಯಾಲಿಟಿ ಶೋ ಎರಡರಲ್ಲೂ ಬ್ಯುಸಿ ಇದ್ದಾರೆ. ವಿಜಯ್ ರಾಘವೇಂದ್ರ ಅವರು ಪೊಲೀಸ್ ಅಧಿಕಾರಿಯ ಮಗಳು ಸ್ಪಂದನಾ ಅವರೊಡನೆ ಮದುವೆಯಾಗಿದ್ದಾರೆ. ಸ್ಪಂದನಾ ಮತ್ತು ವಿಜಯ್ ಅವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ?
ನಿನಗಾಗಿ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ವಿಜಯ್ ರಾಘವೇಂದ್ರ. ಇಲ್ಲಿಯವರೆಗೂ 50ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ವಿಜಯ್ ರಾಘವೇಂದ್ರ ಅವರು ಆಗಿನ ಕಾಲದಲ್ಲಿ ಎಲ್ಲಾ ಹುಡುಗಿಯರ ಪಾಲಿನ ಡ್ರೀಮ್ ಬಾಯ್ ಆಗಿದ್ದರು. ಲವರ್ ಬಾಯ್ ಎಂದು ಸಹ ಖ್ಯಾತಿಯಾಗಿದ್ದರು. ವಿಜಯ್ ರಾಘವೇಂದ್ರ ಅವರ ಮದುವೆಯಾದಾಗ ಸಾಕಷ್ಟು ಹುಡುಗಿಯರು ಬೇಸರ ಮಾಡಿಕೊಂಡು ಅತ್ತಿದ್ದರು. ಇವರು ಮದುವೆಯಾಗಿದ್ದು, ಸ್ಪಂದನಾ ಅವರೊಡನೆ. 2004 ರಲ್ಲಿ ಶೇಷಾದ್ರಿಪುರಂ ಕಾಫಿ ಡೇ ನಲ್ಲಿ ಸ್ಪಂದನಾ ಅವರನ್ನು ಮೊದಲ ಬಾರಿಗೆ ನೋಡಿದ್ದರಂತೆ ವಿಜಯ್ ರಾಘವೇಂದ್ರ. ಆಗ ಇಬ್ಬರ ನಡುವೆ ಸಂಗೀತದ..ವಿಚಾರಕ್ಕೆ ಸಣ್ಣದಾದ ಜಗಳ ಆಗಿತ್ತಂತೆ. ಬಳಿಕ ವಿಜಯ್ ರಾಘವೇಂದ್ರ ಅವರು ಸ್ಪಂದನಾ ಅವರನ್ನು ಎರಡನೇ ಸಾರಿ 2007ರಲ್ಲಿ ಕಾಫಿ ಡೇ ನಲ್ಲೇ ನೋಡಿದ್ದರು.
ಅದಾಗಲೇ ಸ್ಪಂದನಾ ಅವರನ್ನು ನೋಡಿ ಇಷ್ಟಪಟ್ಟಿದ್ದ ವಿಜಯ್, ಎರಡನೇ ಭೇಟಿಯಲ್ಲಿ ಪ್ರೊಪೋಸ್ ಮಾಡಬೇಕು ಅಂದುಕೊಂಡಿದ್ದರಂತೆ. ಜೊತೆಗೆ ವಿಜಯ್ ಅವರ ಮನೆಯಲ್ಲಿ ಸಹ ಸ್ಪಂದನಾ ಅವರನ್ನು ಇಷ್ಟಪಡುತ್ತಿರುವ ವಿಚಾರ ಗೊತ್ತಾಗಿ, ವಿಜಯ್ ರಾಘವೇಂದ್ರ ಅವರ ತಂದೆಯೇ ಮದುವೆ ಬಗ್ಗೆ ಸ್ಪಂದನಾ ಅವರ ತಂದೆಯ ಬಳಿ ಮಾತನಾಡಿದ್ದರಂತೆ. ಸ್ಪಂದನಾ ಅವರ ತಂದೆ ಪೊಲೀಸ್ ಕಮಿಷನರ್ ಆಗಿದ್ದು, ವಿಜಯ್ ರಾಘವೇಂದ್ರ ಅವರ ತಂದೆಗೆ ಅವರ ಪರಿಚಯ ಸಹ ಇತ್ತಂತೆ. ಹಾಗಾಗಿ ಇಬ್ಬರ ಮದುವೆಗೆ ಕಷ್ಟ ಆಗಲಿಲ್ಲ, ಒಂದೇ ತಿಂಗಳಲ್ಲಿ ವಿಜಯ್ ಮತ್ತು ಸ್ಪಂದನಾ ಮದುವೆ ನಿಶ್ಚಯವಾಯಿತು. 2007ರ ಆಗಸ್ಟ್ 26ರಂದು ಇವರಿಬ್ಬರ ಮದುವೆ ನಡೆಯಿತು. ಈಗ ವಿಜಯ್ ಸ್ಪಂದನಾ ದಾಂಪತ್ಯ ಜೀವನಕ್ಕೆ 15 ವರ್ಷ ತುಂಬಲಿದೆ. ಈ ದಂಪತಿಗೆ ಶೌರ್ಯ ಎಂಬ ಮಗನಿದ್ದು, ಸುಂದರವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ..
Comments are closed.