ಕೆಜಿಎಫ್ 2 ಯಶಸ್ಸು ಪಡೆದ ಬೆನ್ನಲ್ಲೇ ಶ್ರೀ ಶೆಟ್ಟಿ ಸಂಭಾವನೆ ಕೇಳಿ ನಿರ್ಮಾಪಕರೇ ಶಾಕ್. ರಶ್ಮಿಕಾ, ಪೂಜಾ ಹೆಗ್ಡೆ ಗಿಂತಲೂ ಹೆಚ್ಚು ಕೇಳಿದ್ದು ಎಷ್ಟು ಗೊತ್ತೇ??
ಕೆಜಿಎಫ್ ಚಾಪ್ಟರ್1 ಮತ್ತು ಕೆಜಿಎಫ್ ಚಾಪ್ಟರ್ 2 ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ನಟಿ ಶ್ರೀನಿಧಿ ಶೆಟ್ಟಿ. ಮೊದಲೆರಡು ಸಿನಿಮಾಗಳೇ ಶ್ರಿನಿಧಿ ಅವರಿಗೆ ಅವರೇ ಊಹಿಸದಂತಹ ಬಿಗ್ ಹಿಟ್ ಆಗಿದೆ. ಹಾಗಾಗಿ ಶ್ರೀನಿಧಿ ಶೆಟ್ಟಿ ಅವರಿಗೆ ಬೇಡಿಕೆ ಭಾರತ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ. ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ, ಗೆದ್ದಿದ್ದ ಶ್ರೀನಿಧಿ ಅವರು ಕೆಜಿಎಫ್ ಮೂಲಕ ನಾಯಕಿಯಾದರು. ಇದೀಗ ಎರಡು ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಬಳಿಕ ಶ್ರೀನಿಧಿ ಶೆಟ್ಟಿ ಅವರು ಸಂಭಾವನೆ ಹೆಚ್ಚಿಸಿಕೊಂಡಿದ್ದು, ಇವರು ಡಿಮ್ಯಾಂಡ್ ಮಾಡುತ್ತಿರುವ ಮೊತ್ತ ಕೇಳಿ ಸಿನಿಮಾ ನಿರ್ಮಾಪಕರೇ ಶಾಕ್ ಆಗಿದ್ದಾರಂತೆ. ತೆಲುಗಿನಲ್ಲಿ ಶ್ರೀನಿಧಿ ಅವರಿಗೆ ಒಳ್ಳೆಯ ಆಫರ್ ಗಳಿವೆ, ಆದರೆ ಶ್ರೀನಿಧಿ ಅವರು ಬೇಡಿಕೆ ಇಟ್ಟ ಸಂಭಾವನೆಯ ಮೊತ್ತ ಕೇಳಿ ಶಾಕ್ ಆದ ನಿರ್ಮಾಪಕರು ಇವರ ಕಾಲ್ ಶೀಟ್ ಪಡೆದಿಲ್ಲ..
ಶ್ರೀನಿಧಿ ಅವರು ಕೆಜಿಎಫ್ ಚಾಪ್ಟರ್ 1 ಮತ್ತು ಕೆಜಿಎಫ್2 ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಎನ್ನುವ ವಿಚಾರ ಇಲ್ಲಿಯವರೆಗೂ ತಿಳಿದುಬಂದಿಲ್ಲ. ಆದರೆ ಮೊದಲೆರಡು ಸಿನಿಮಾಗಳು ಬಿಡುಗಡೆಯಾಗಿ ಸೂಪರ್ ಹಿಟ್ ಆದ ಬಳಿಕ ಶ್ರೀನಿಧಿ ಅವರಿಗೆ ಅವಕಾಶ ಮತ್ತು ಬೇಡಿಕೆ ಎರಡು ಸಹ ಹೆಚ್ಚಾಗಿದೆ. ಕೆಜಿಎಫ್ ಸಿನಿಮಾಗಳನ್ನು ಹೊರತುಪಡಿಸಿ, ಶ್ರೀನಿಧಿ ಅವರು ತಮಿಳಿನ ಕೋಬ್ರಾ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಕೋಬ್ರಾ ಸಿನಿಮಾ ಟೀಸರ್ ಬಿಡುಗಡೆ ಆಗಿದ್ದು, ಟೀಸರ್ ನೋಡಿದ ಅಭಿಮಾನಿಗಳು ಶ್ರೀನಿಧಿ ಅವರನ್ನು ನೋಡಿ ಖುಷಿಪಟ್ಟಿದ್ದರು. ಶ್ರೀನಿಧಿ ಅವರು ಸ್ಪಷ್ಟವಾಗಿ ಕನ್ನಡ ಮಾತನಾಡುವುದರಿಂದ ಅಭಿಮಾನಿಗಳು ಹೆಚ್ಚಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಆದರೆ ಈಗ ಶ್ರೀನಿಧಿ ಅವರು ಸಂಭಾವನೆಯನ್ನು ಹೆಚ್ಚಿಸಿಕೊಂಡಿರುವ ಜೋರಾಗಿ ಸದ್ದು ಮಾಡುತ್ತಾರೆ.
ತೆಲುಗಿನಲ್ಲಿ ಸಧ್ಯದ ಟಾಪ್ ನಟಿಯರು ಪೂಜಾ ಹೆಗ್ಡೆ ಮತ್ತು ರಶ್ಮಿಕಾ ಮಂದಣ್ಣ. ಪೂಜಾ ಹೆಗ್ಡೆ ಅವರು ಒಂದು ಸಿನಿಮಾಗೆ 3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದು, ರಶ್ಮಿಕಾ ಮಂದಣ್ಣ 4 ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ ಇವರಿಬ್ಬರನ್ನು ಹಿಂದಿಕ್ಕಬೇಕು ಎಂದುಕೊಂಡಿರುವ ಶ್ರೀನಿಧಿ, ಈ ಇಬ್ಬರು ಕಲಾವಿದೆಯರಿಗಿಂತ ಹೆಚ್ಚಿನ ಸಂಭಾವನೆ ಡಿಮ್ಯಾಂಡ್ ಮಾಡಿದ್ದು, ಆ ಮೊತ್ತ ಕೇಳಿ ನಿರ್ಮಾಪಕರಿಗೆ ಶಾಕ್ ಆಗಿದೆಯಂತೆ. ಶ್ರೀನಿಧಿ ಶೆಟ್ಟಿ ಅವರ ಡೇಟ್ಸ್ ಪಡೆಯಲು ಕೆಲವು ತೆಲುಗು ನಿರ್ಮಾಪಕರು ಟ್ರೈ ಮಾಡಿದ್ದು, ಸಂಭಾವನೆ ಕೇಳಿ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ. ಕೋಬ್ರಾ ಬಳಿಕ ಶ್ರೀನಿಧಿ ಅವರು ಇನ್ಯಾವುದೇ ಸಿನಿಮಾ ಒಪ್ಪಿಕೊಂಡಿರುವ ಬಗ್ಗೆ ಅನೌನ್ಸ್ ಮಾಡಿಲ್ಲ. ಹಾಗಾಗಿ ಶ್ರೀನಿಧಿ ಶೆಟ್ಟಿ ನಟಿಸಲಿರುವ ಮುಂದಿನ ಸಿನಿಮಾ ಯಾವುದಿರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.
Comments are closed.