ಪೊಲ್ಲಾರ್ಡ್ ಗಿಂತಲೂ ಹೆಚ್ಚು ಸಿಕ್ಸರ್ ಗಳಿಸುವ ಸಾಮರ್ಥ್ಯ ವಿರುವ ಆಟಗಾರನನ್ನು ಆಯ್ಕೆ ಮಾಡಿದ ಹರ್ಭಜನ್, ಆ ಕನ್ನಡಿಗ ಯಾರು ಗೊತ್ತೇ??
ಐಪಿಎಲ್ 15ನೇ ಆವೃತ್ತಿ ಮೇ 29ರಂದು ನಡೆಯುವ ಫಿನಾಲೆ ಪಂದ್ಯದಿಂದ ಮುಕ್ತಾಯವಾಗಲಿದೆ. ಫಿನಾಲೆಯಲ್ಲಿ ಗುಜರಾತ್ ಟೈಟನ್ಸ್ ಜೊತೆಗೆ ಕಾಳಗಕ್ಕೆ ನಿಲ್ಲಲಿದೆ ರಾಜಸ್ತಾನ್ ರಾಯಲ್ಸ್ ತಂಡ. ಈ ಸಾಲಿನಲ್ಲಿ ಹಲವು ತಂಡಗಳು ಮತ್ತು ಆಟಗಾರರು ಉತ್ತಮವಾದ ಪ್ರದರ್ಶನ ನೀಡಿದ್ದಾರೆ. ಅವರಲ್ಲಿ ಒಬ್ಬ ಆಟಗಾರನಿಗೆ ವೆಸ್ಟ್ ಇಂಡೀಸ್ ಆಟಗಾರ ಕೈರೋನ್ ಪೋಲಾರ್ಡ್ಸ್ ಅವರಿಗಿಂತ ಹೆಚ್ಚು ಸಿಕ್ಸ್ ಗಳನ್ನು ಹೊಡೆಯುವ ಸಾಮರ್ಥ್ಯ ಇದೆ ಎಂದು, ಭಾರತ ಕ್ರಿಕೆಟ್ ತಂಡ ಮಾಜಿ ಲೆಗ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹರ್ಭಜನ್ ಸಿಂಗ್ ಅವರು ಹೇಳಿರುವುದು, ಕನ್ನಡಿಗನ ಬಗ್ಗೆ. ಆ ಆಟಗಾರ ಯಾರು? ಹರ್ಭನ್ ಸಿಂಗ್ ಆ ಆಟಗಾರನ ಬಗ್ಗೆ ಹೇಳಿದ್ದೇನು ?
ಈ ವರ್ಷದ ಐಪಿಎಲ್ ನಲ್ಲಿ ಲಕ್ನೌ ಸೂಪರ್ ಜಯಂಟ್ಸ್ ತಂಡ ಸಹ ಪ್ರಮುಖವಾದ ತಂಡವಾಗಿತ್ತು. ಆರಂಭದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು, ಟಾಪ್2 ನಲ್ಲಿತ್ತು ಈ ತಂಡ . ಲಕ್ನೌ ತಂಡವನ್ನು ಮುನ್ನಡೆಸುತ್ತಿರುವುದು ಮತ್ಯಾರು ಅಲ್ಲ, ಹೆಮ್ಮೆಯ ಕನ್ನಡಿಗ ಕೆ.ಎಲ್.ರಾಹುಲ್ ಅವರು. ಪ್ಲೇಆಫ್ಸ್ ವರೆಗೂ ತಲುಪಿದ್ದ ಲಕ್ನೌ ತಂಡ, ಎಲಿಮಿನೇಟರ್ ಪಂದ್ಯದಲ್ಲಿ ಆರ್.ಸಿ.ಬಿ ವಿರುದ್ಧ ಸೋಲನ್ನು ಕಂಡಿತು. ಮೊನ್ನೆಯ ಪಂದ್ಯದಲ್ಲಿ ಎಲ್.ಎಸ್.ಜಿ ತಂಡದ ಪರವಾಗಿ ರಾಹುಲ್ ಉತ್ತಮವಾದ ಪ್ರದರ್ಶನ ನೀಡಿದರು, 79 ರನ್ ಗಳಿಸಿದರು ಸಹ, ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಇದರಿಂದಗಿ, ಐಪಿಎಲ್ ಇಂದ ಹೊರಗುಳಿಯಿತು ಲಕ್ನೌ ತಂಡ. ರಾಹುಲ್ ಅವರು ಎಷ್ಟು ಪ್ರಯತ್ನ ಪಟ್ಟು, ತಂಡವನ್ನು ಒಳ್ಳೆಯ ರೀತಿಯಲ್ಲಿ ಮುಂದುವರೆಸಿ, ಪ್ಲೇಆಫ್ಸ್ ವರೆಗೂ ಕರೆತಂದರು ಸಹ, ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ.
ಇದೀಗ ಟೀಮ್ ಇಂಡಿಯಾದ ಮಾಜಿ ಲೆಗ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಮೊನ್ನೆ ನಡೆದ ಎಲಿಮಿನೇಟರ್ ಪಂದ್ಯದ ಬಳಿಕ ಕೆ.ಎಲ್.ರಾಹುಲ್ ಅವರ ಬಗ್ಗೆ ಮಾತನಾಡಿದ್ದಾರೆ. “ಆರ್.ಸಿ.ಬಿ ವಿರುದ್ಧದ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಆಂಕರ್ ಪಾತ್ರ ನಿರ್ವಹಿಸಿದರು. ವೆಸ್ಟ್ ಇಂಡೀಸ್ ನ ಪ್ರಮುಖ ಆಟಗಾರ ಕೈರೋನ್ ಪೋಲಾರ್ಡ್ ಅವರಿಗಿಂತೆ ಹೆಚ್ಚು ಸಿಕ್ಸ್ ಹೊಡೆಯು ಆ ಸಾಮರ್ಥ್ಯ ರಾಹುಲ್ ಅವರಿಗೆ ಇದೆ. ಆದರೆ ಪವರ್ ಪ್ಲೇ ಓವರ್ ಗಳಲ್ಲಿ ಇನ್ನು ಹೆಚ್ಚಿನ ಆಕ್ರಮಣಕಾರಿ ಬ್ಯಾಟಿಂಗ್ ಅವಶ್ಯಕತೆ ಇತ್ತು. ಇದರಿಂದ ಡೆತ್ ಓವರ್ ನಲ್ಲಿ ಒತ್ತಡ ಹೆಚ್ಚಾಗಿತ್ತು. ಹರ್ಷಲ್ ಪಟೇಲ್ ಮತ್ತು ಹೇಜಲ್ ವುಡ್ ಡೆತ್ ಓವರ್ ನಲ್ಲಿ ಉತ್ತಮವಾದ ಬೌಲಿಂಗ್ ಪ್ರದರ್ಶನ ನೀಡಿದರು. ಲಕ್ನೌ ತಂಡ ಓವರ್ ಪ್ಲೇ ನಲ್ಲಿ ಇನ್ನು ಹೆಚ್ಚಿನ ರನ್ಸ್ ಗಳಿಸಿದ್ದರೆ,ಒಳ್ಳೆಯದಾಗುತ್ತಿತ್ತು, ಅದರಿಂದಲೇ ರಾಹುಲ್ ಟೀಮ್ ಪಂದ್ಯ ಸೋತಿತು..” ಎಂದಿದ್ದಾರೆ ಹರ್ಭಜನ್ ಸಿಂಗ್.
Comments are closed.