ಪುಷ್ಪ ಮುಂದಿನ ಭಾಗ ಪಾರ್ಟ್ 2 ನಿರ್ದೇಶನ ಮಾಡಲು ಸುಕುಮಾರ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?? ದಾಖಲೆ ನಿರ್ಮಾಣ. ಇಷ್ಟೊಂದು ಕೇವಲ ಒಂದು ಸಿನೆಮಾಗೆ??
ಪುಷ್ಪ ಸಿನಿಮಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹವಾ ಸೃಷ್ಟಿಸಿದ ಸಿನಿಮಾ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಪುಷ್ಪ ಸಿನಿಮಾ ಇಡೀ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ, 300 ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿತ್ತು. ಕೆಜಿಎಫ್ ಚಾಪ್ಟರ್1 ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ ಅನ್ನು ಬೀಟ್ ಮಾಡಿಟ್ಟಿ ಪುಷ್ಪ ಸಿನಿಮಾ. ಆದರೆ ಪುಷ್ಪ ಸಿನಿಮಾದ ಕಲೆಕ್ಷನ್ ಬೀಟ್ ಮಾಡಲು, ಕೆಜಿಎಫ್ ಚಾಪ್ಟರ್2 ಸಿನಿಮಾ ಬರಬೇಕಾಯಿತು. ಪ್ರಸ್ತುತ ಕೆಜಿಎಫ್ ಸಿನಿಮಾ 1200 ಕೋಟಿಗಿಂತ ಅಧಿಕ ಹಣ ಕಲೆಕ್ಷನ್ ಮಾಡಿದೆ, ಹಾಗಾಗಿ ಈಗ ಎಲ್ಲರ ಕಣ್ಣು ಪುಷ್ಪ2 ಸಿನಿಮಾ ಮೇಲಿದೆ. ಇದೀಗ ಪುಷ್ಪ ಸಿನಿಮಾ ನಿರ್ದೇಶಕ ಸುಕುಮಾರ್ ಅವರು ಪುಷ್ಪ2 ಸಿನಿಮಾಗೆ ಪಡೆದುಕೊಳ್ಳುತ್ತಿರುವ ಸಂಭಾವನೆಯ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ..
ಸುಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಭಾರಿ ಬಜೆಟ್ ಸಿನಿಮಾ ಪುಷ್ಪ. ಈ ಸಿನಿಮಾ ಸುಕುಮಾರ್ ಮತ್ತು ನಟ ಅಲ್ಲು ಅರ್ಜುನ್ ಇಬ್ಬರಿಗೂ ದೊಡ್ಡ ಸಕ್ಸಸ್ ತಂದುಕೊಟ್ಟಿತು. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ, ಬಾಲಿವುಡ್ ನಲ್ಲಿ ಮಾತ್ರವೇ 100 ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿ, ಅವರೆಲ್ಲರೂ ದಕ್ಷಿಣ ಭಾರತದ ಕಡೆಗೆ ತಿರುಗಿ ನೋಡುವ ಹಾಗೆ ಮಾಡಿತು. ಪುಷ್ಪ ಸಿನಿಮಾದ ಸಕ್ಸಸ್ ಹಾಗೂ ಕೆಜಿಎಫ್2 ಮಾಡಿರುವ ಕಲೆಕ್ಷನ್ ಮತ್ತು ಕೆಜಿಎಫ್2 ಕ್ರೇಜ್ ಎಲ್ಲವೂ ಸಹ ದಕ್ಷಿಣ ಭಾರತ ಚಿತ್ರರಂಗದ ಮೇಲೆ ಹೆಚ್ಚಿನ ನಿರೀಕ್ಷೆ ಹುಟ್ಟಿಹಾಕಿದ್ದು, ಪುಷ್ಪ 2 ಸಿನಿಮಾ ಬಗ್ಗೆ ಎಲ್ಲರೂ ಕಾಯುತ್ತಿದ್ದಾರೆ. ಪುಷ್ಪ2 ಸಿನಿಮಾ ಕೆಜಿಎಫ್2 ಸಿನಿಮಾವನ್ನು ಬೀಟ್ ಮಾಡುತ್ತಾ ಎಂದು ನೋಡಲು ಭಾರತ ಚಿತ್ರರಂಗ ಕಾದು ಕೂತಿದೆ. ಎಲ್ಲರ ಕಣ್ಣು ಈಗ ಸುಕುಮಾರ್ ಅವರು ಪುಷ್ಪ2 ಸಿನಿಮಾದ ಕಥೆಯನ್ನು ಹೇಗೆ ಹೆಣೆಯುತ್ತಾರೆ ಎನ್ನುವುದರ ಮೇಲೆ ನಾಟಿದೆ.
ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಕೆಜಿಎಫ್2 ಸಿನಿಮಾ ಬಿಡುಗಡೆಯಾದ ಬಳಿಕ ಪುಷ್ಪ2 ಸಿನಿಮಾದ ಕಥೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಸುಕುಮಾರ್ ಅವರು ಸಿನಿಮಾದ ಸಂಭಾಷಣೆ ಎಲ್ಲವೂ ಪವರ್ ಫುಲ್ ಆಗಿರಬೇಕು ಎಂದು ಸಂಭಾಷಣೆಕಾರರಿಗೆ ಹೇಳಿದ್ದಾರಂತೆ ನಿರ್ದೇಶಕ ಸುಕುಮಾರ್. ಇದೀಗ ಸುಕುಮಾರ್ ಅವರು ಪುಷ್ಪ2 ಸಿನಿಮಾಗೆ ಪಡೆದುಕೊಳ್ಳುತ್ತಿರುವ ಸಂಭಾವನೆ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದು, ಬರೋಬ್ಬರಿ 40 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರಂತೆ ನಿರ್ದೇಶಕ ಸುಕುಮಾರ್. ಆದರೆ ಈ ವಿಚಾರದ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ, ಈ ರೀತಿಯ ಗಾಸಿಪ್ ಒಂದು ಹರಿದಾಡುತ್ತಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಪುಷ್ಪ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.
Comments are closed.