ಭಾರತದ ಭವಿಷ್ಯದ ಸ್ಪಿನ್ನರ್ ಯಾರು ಆಗಬಹುದು ಎಂದು ತಿಳಿಸಿದ ರಶೀದ್ ಖಾನ್. ಈತನೇ ಭಾರತವನ್ನು ಗೆಲ್ಲಿಸಲಿದ್ದಾನೆ ಎಂದು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?
ಪ್ರತಿ ಸಾರಿಯು ಐಪಿಎಲ್ ನಲ್ಲಿ ಕೆಲವು ಆಟಗಾರರು ಎಲ್ಲರ ಗಮನ ಸೆಳೆಯುತ್ತಾರೆ. ಅತ್ಯುತ್ತಮವಾದ ಪ್ರದರ್ಶನ ನೀಡುತ್ತಾರೆ. ಆ ರೀತಿ ಒಳ್ಳೆಯ ಪ್ರದರ್ಶನ ಕೊಟ್ಟವರು ನೇರವಾಗಿ ಟೀಮ್ ಇಂಡಿಯಾ ಪ್ರವೇಶ ಮಾಡುತ್ತಾರೆ. ಈ ವರ್ಷ ಸಹ ಕೆಲವು ಆಟಗಾರರು ಅಭಿಮಾನಿಗಳು ಮತ್ತು ಹಿರಿಯ ಆಟಗಾರ ಗಮನ ಸೆಳೆದಿದ್ದಾರೆ. ಅಂತಹ ಒಬ್ಬ ಯುವ ಬೌಲರ್ ಬಗ್ಗೆ ಕ್ರಿಕೆಟ್ ಲೋಕದ ಹಿರಿಯ ಆಟಗಾರ ರಶೀದ್ ಖಾನ್ ಹಾಡಿ ಹೊಗಳಿದ್ದಾರೆ. ರಶೀದ್ ಖಾನ್ ಅವರು ಮಾತನಾಡಿರುವ ಆ ಆಟಗಾರ ಯಾರು? ತಿಳಿಸುತ್ತೇವೆ ನೋಡಿ..
ರಶೀದ್ ಖಾನ್ ಮೂಲತಃ ಅಫ್ಗಾನಿಸ್ತಾನ್ ದೇಶದ ಕ್ರಿಕೆಟ್ ಪ್ಲೇಯರ್. ಐಪಿಎಲ್ ಮೂಲಕ ಭಾರತದಲ್ಲೂ ಇವರಿಗೆ ಜನಪ್ರಿಯತೆ ಇದೆ. ಈ ವರ್ಷ ಐಪಿಎಲ್ ನಲ್ಲಿ ರಶೀದ್ ಖಾನ್ ಅವರು ಗುಜರಾತ್ ಟೈಟನ್ಸ್ ತಂಡದ ಪರವಾಗಿ ಅದ್ಭುತವಾದ ಪ್ರದರ್ಶನ ನೀಡಿದರು. ಗುಜರಾತ್ ಟೈಟನ್ಸ್ ತಂಡ ಐಪಿಎಲ್ ಪ್ರವೇಶ ಮಾಡಿರುವುದು ಇದೇ ಮೊದಲ ಸಾರಿ, ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ನಡೆಯುತ್ತಿರುವ ಈ ಪಂದ್ಯ, ಮೊದಲ ವರ್ಷವೇ, ಅದ್ಭುತವಾದ ಪ್ರದರ್ಶನ ನೀಡಿ ಫಿನಾಲೆ ತಲುಪಿದೆ. ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ಧ ಇಂದು ಫಿನಾಲೆಯಲ್ಲಿ ಸೆಣೆಸಾಡಲಿದೆ ಗುಜರಾತ್ ತಂಡ. ಗುಜರಾತ್ ನ ಹೋಮ್ ಗ್ರೌಂಡ್ ನಲ್ಲಿ ಇಂದು ಪಂದ್ಯ ನಡೆಯುತ್ತಿದೆ. ಗುಜರಾತ್ ತಂಡದ ಪರವಾಗಿ ಆಡಿರುವ ರಶೀದ್ ಖಾನ್ ಅವರು 18 ವಿಕೆಟ್ಸ್ ಗಳನ್ನು ಪಡೆದಿದ್ದಾರೆ. ಇತ್ತೀಚೆಗೆ ಅವರು ಮಾತನಾಡಿ, ಐಪಿಎಲ್ ನ ಆ ಒಬ್ಬ ಪ್ಲೇಯರ್ ಟೀಮ್ ಇಂಡಿಯಾದ ಮುಂದಿನ ಸ್ಪಿನ್ನರ್ ಆಗುತ್ತಾರೆ ಎಂದು ಹೇಳಿದ್ದಾರೆ..
ರಶೀದ್ ಖಾನ್ ಅವರು ಹೇಳಿದ್ದು ಲಕ್ನೌ ಸೂಪರ್ ಜೈನ್ಟ್ಸ್ ತಂಡದ ರವಿ ಬಿಶ್ನೋಯ್ ಅವರ ಬಗ್ಗೆ. ಲಕ್ನೌ ತಂಡದ ಪರವಾಗಿ ಆಡಿದ 13 ಪಂದ್ಯಗಳಲ್ಲಿ 14 ವಿಕೆಟ್ ಗಳನ್ನು ಪಡೆದು ಅದ್ಭುತವಾದ ಪ್ರದರ್ಶನ ನೀಡಿದ್ದಾರೆ ರವಿ. “ರವಿ ಬಿಶ್ನೋಯ್ ಪ್ರತಿಭಾನ್ವಿತ ಯುವ ಆಟಗಾರ. ಸಾಕಷ್ಟು ಸಾರಿ ಅವರೊಡನೆ ಮಾತನಾಡಿ ಸಮಯ ಕಳೆದಿದ್ದೇನೆ, ಮುಂಬರುವ ದಿನಗಳಲ್ಲಿ ರವಿ ಅವರು ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಗಿ ಬೆಳೆಯುತ್ತಾರೆ. ಅವರು ಅವರ ಸಾಮರ್ಥ್ಯದ ಮೇಲೆ ನಂಬಿಕೆ ವಿಶ್ವಾಸ ಇಟ್ಟು, ಅದರ ರೀತಿಯಲ್ಲೇ ಆಡಬೇಕು. ಹಾಗೆ ಆದರೆ ಖಂಡಿತ ಅವರು ಟೀಮ್ ಇಂಡಿಯಾದ ಪ್ರಮುಖ ಬೌಲರ್ ಆಗುತ್ತಾರೆ..”ಎಂದಿದ್ದಾರೆ ರಶೀದ್ ಖಾನ್. ರವಿ ಅವರ ಬಗ್ಗೆ ಮಾತ್ರವಲ್ಲದೆ, ರಾಜಸ್ತಾನ್ ರಾಯಲ್ಸ್ ತಂಡದ ಹಾಗೂ ಆರ್.ಸಿ.ಬಿ ತಂಡದ ಮಾಜಿ ಆಟಗಾರ ಚಾಹಲ್ ಅವರ ಬಗ್ಗೆ ಮಾತನಾಡಿ, ಈಗ ಅವರೇ ಬೆಸ್ಟ್ ಪ್ಲೇಯರ್ ಎಂದಿದ್ದಾರೆ ರಶೀದ್ ಖಾನ್.
Comments are closed.