ವಿರಾಟ್ ಕೊಹ್ಲಿ ರವರ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಮೌನ ಮುರಿದ ಸೆಹ್ವಾಗ್. ಹೇಳಿದ್ದೇನು ಗೊತ್ತೇ??
ಐಪಿಎಲ್ ನ ಕ್ವಾಲಿಫೈಯರ್ 2 ಪಂದ್ಯದಲ್ಲಿ ಆರ್.ಸಿ.ಬಿ ತಂಡವು ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಹೀನಾಯವಾದ ಸೋಲು ಕಾಣುವ ಮೂಲಕ, ಆರ್.ಸಿ.ಬಿ ತಂಡವು ಐಪಿಎಲ್ ಲೀಗ್ ಇಂದ ಹೊರಬಿದ್ದಿದೆ. ಈ ಬಾರಿ ಕೂಡ ಆರ್.ಸಿ.ಬಿ ತಂಡ ಕಪ್ ಗೆಲ್ಲುವ ಕನಸು ನುಚ್ಚು ನೂರಾಗಿದೆ. ಈ ವರ್ಷ ಐಪಿಎಲ್ ನಲ್ಲಿ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೋಹ್ಲಿ ಅವರು ಫಾರ್ಮ್ ಕಳೆದುಕೊಂಡಿದ್ದರು. ವಿರಾಟ್ ಅವರು ಆಡಿದ 16 ಪಂದ್ಯಗಳಲ್ಲಿ ಅವರು ಗಳಿಸಿದ್ದು, 300 ರನ್ ಗಳು ಮಾತ್ರ. ಇದರಲ್ಲಿ ಎರಡೇ ಎರಡು ಅರ್ಧ ಶತಕ ಇದ್ದವು. ವಿರಾಟ್ ಕೋಹ್ಲಿ ಅವರ ಈ ಪ್ರದರ್ಶನದ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಮೌನ ಮುರಿದಿದ್ದಾರೆ.. ವಿರಾಟ್ ಕೋಹ್ಲಿ ಅವರು ಕೆಲವು ತಪ್ಪುಗಳನ್ನು ಮಾಡಿರುವ ಬಗ್ಗೆ ಹೇಳಿದ್ದಾರೆ ಸೆಹ್ವಾಗ್..
ಕೋಹ್ಲಿ ಅವರು ವಿಶ್ವಕಪ್ ಟಿ20 ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ, ಅವರು ಆಸ್ಟ್ರೇಲಿಯಾದಲ್ಲಿ ಈಗಾಗಲೇ ಪಂದ್ಯಗಳನ್ನು ಆಡಿರುವ ಕಾರಣ, ಅವರಿಗೆ ಕಷ್ಟ ಆಗುತ್ತಿರಲಿಲ್ಲ. ಆದರೆ ವಿರಾಟ್ ಅವರು ಫಾರ್ಮ್ ನಲ್ಲಿಲ್ಲ ಎನ್ನುವ ಕಾರಣದಿಂದ, ಅವರ ಬ್ಯಾಟಿಂಗ್ ಪ್ರದರ್ಶನ ಇದೇ ರೀತಿ ಇದ್ದರೆ, ತಂಡದ ಮೇಲೆ ದುರ್ಬಲ ಪರಿಣಾಮ ಬೀರುತ್ತದೆ ಎನ್ನಲಾಗುತ್ತಿದೆ. ಇದೀಗ ವೀರೇಂದ್ರ ಸೆಹ್ವಾಗ್ ಅವರು ಇದೇ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಕೋಹ್ಲಿ ಅವರು ತಪ್ಪು ಮಾಡಿದ್ದಾರೆ ಎಂದು ಹೇಳಿದ್ದಾರೆ.. “ನೀವು ಫಾರ್ಮ್ ನಲ್ಲಿ ಇಲ್ಲದೆ ಇರುವಾಗ, ಆತ್ಮವಿಶ್ವಾಸ ಪಡೆಯಲು ಪ್ರತಿ ಬಾಲ್ ನ ಮಧ್ಯದಲ್ಲಿ ಪ್ರಯತ್ನ ಮಾಡುತ್ತೀರಿ. ಮೊದಲ ಓವರ್ ನಡೆಯುವಾಗ ಅವರು ಕೆಲವು ಎಸೆತಗಳನ್ನು ಬಿಟ್ಟುಕೊಟ್ಟರು,ಫಾರ್ಮ್ ನಲ್ಲಿ ಇಲ್ಲದೆ ಇದ್ದಾಗ ಈ ರೀತಿ ಆಗುತ್ತದೆ. ನೀವು ಎಸೆಗಳಲ್ಲಿ ರನ್ ಗಳಿಸಲು ಪ್ರಯತ್ನ ಪಡುತ್ತೀರಿ..
ಕೆಲವು ಸಾರಿ ಅದೃಷ್ಟ ನಿಮ್ಮ ಜೊತೆ ಇರುತ್ತದೆ, ಬಾಲ್ ನಿಮ್ಮ ಬ್ಯಾಟ್ ನ ಅಂಚಿಗೆ ಬರುವುದಿಲ್ಲ, ಆದರೆ ಆ ರೀತಿ ಆಗಲಿಲ್ಲ. ಈ ಬಾರಿ ಆಡಿದ್ದು, ನಮಗೆ ಗೊತ್ತಿರುವ ವಿರಾಟ್ ಕೋಹ್ಲಿ ಅಲ್ಲ, ಇದು ಮತ್ತೊಬ್ಬ ವಿರಾಟ್ ಕೋಹ್ಲಿ ಇರಬಹುದು. ಈ ವರ್ಷದ ಐಪಿಎಲ್ ನಲ್ಲಿ ವಿರಾಟ್ ಅವರು ಮಾಡಿರುವ ತಪ್ಪುಗಳನ್ನು, ಅವರ ಇಡೀ ವೃತ್ತಿಜೀವನದಲ್ಲಿ ಮಾಡಿರುವುದಿಲ್ಲ. ರನ್ ಗಳಿಸಲು ಸಾಧ್ಯವಾಗದೆ ಇದ್ದಾಗ, ಬೇರೆ ಬೇರೆ ಕೆಲಸಗಳನ್ನು ಮಾಡುವ ಪ್ರಯತ್ನ ಮಾಡುತ್ತೀರಿ. ಈ ಬೇರೆ ಬೇರೆ ಕೆಲಸಗಳು ವಿಭಿನ್ನ ರೀತಿಯಲ್ಲಿ ಔಟ್ ಆಗುವ ಹಾಗೆ ಮಾಡುತ್ತದೆ. ಸಾಧ್ಯವಿರುವ ಎಲ್ಲಾ ರೀತಿಗಳಲ್ಲೂ ವಿರಾಟ್ ಕೋಹ್ಲಿ ಅವರು ಔಟ್ ಆಗುವ ಹಾಗೆ ಮಾಡಿದೆ. ಆ ಎಸೆತಗಳನ್ನು ಅವರು ಬಿಡಬಹುದಿತ್ತು, ಅಥವಾ ಅದನ್ನು ಕಠಿಣವಾಗಿ ತೆಗೆದುಕೊಳ್ಳಬಹುದಿತ್ತು. ಅಂತಹ ದೊಡ್ಡ ಪಂದ್ಯದಲ್ಲಿ ಅಭಿಮಾನಿಗಳನ್ನು ನಿರಾಶೆಗೊಳಿಸಿದ್ದಾರೆ..” ಎಂದು ಹೇಳಿದ್ದಾರೆ ಸೆಹ್ವಾಗ್.
Comments are closed.