ಶಿವಾಜಿ ಮಗ ಸಂಭಾಜಿ ರವರ ದೇಹವನ್ನು ತುಂಡು ತುಂಡುಗಳನ್ನಾಗಿ ಮಾಡಿ ಯಾಕೆ ಅವರನ್ನು ಸಾಯಿಸಲಾಯಿತು?? ಕಣ್ಣೀರು ತರಿಸುವ ವೀರ ಯೋಧನ ಜೀವನ ಕಥೆ
ಭಾರತ ದೇಶವನ್ನು ಮೊಘಲ ಸಾಮ್ರಾಜ್ಯಕ್ಕೆ ಸೇರಿದ ಔರಂಗಜೇಬರು ಮುಸ್ಲಿಮರ ದೇಶವನ್ನಾಗಿ ಮಾಡಬೇಳು ಎನ್ನುವ ಪ್ರಯತ್ನದಲ್ಲಿದ್ದಾಗ, ಅವರ ಪಾಲಿಗೆ ಸಿಂಹ ಸ್ವಪ್ನವಾಗಿ ನಿಂತವರು ಶಿವಾಜಿ ಮಹಾರಾಜ್. ಉತ್ತರ ಭಾರತದಲ್ಲಿ ಜನರನ್ನು ಮುಸ್ಲಿಮರನ್ನಾಗಿ ಮತಾಂತರ ಮಾಡುತ್ತಿದ್ದ ಔರಂಗಜೇಬರು, ದಕ್ಷಿಣ ಭಾರತದ ಕಡೆಗೆ ಬರಲು ಹೆದರುವ ಹಾಗಿತ್ತು, ಯಾಕಂದ್ರೆ ಇಲ್ಲಿನ ಮರಾಠ ದೊರೆಯಾಗಿದ್ದ ಶಿವಾಜಿ ಮಹಾರಾಜ್ ಇಲ್ಲಿದ್ದರು. ಬಿಜಾಪುರ, ಮಹಾರಾಷ್ಟ್ರದಲ್ಲಿ ಶಿವಾಜಿ ಮಹಾರಾಜ್ ಅವರು ಹಿಂದೂ ಧರ್ಮ ಉಳಿಯುವ ಹಾಗೆ ನೋಡಿಕೊಂಡರು. ಇವರಿಗೆ ಬೇರೆ ಮತದವರ ಮೇಲೆ ದ್ವೇಷ ಇರಲಿಲ್ಲ. ಮಹಾರಾಜರ ಜೊತೆಯಲ್ಲಿದ್ದ ಸಾಕಷ್ಟು ಸ್ನೇಹಿತರು ಮುಸ್ಲಿಮರಾಗಿದ್ದರು, ಸೈನ್ಯದಲ್ಲೂ ಸಾಕಷ್ಟು ಜನ ಮುಸ್ಲಿಮರಿದ್ದರು ಆದರೆ ಶಿವಾಜಿ ಮಹಾರಾಜರು ಯೋಚನೆ ಮಾಡಿದ್ದು, ಇಡೀ ರಾಜ್ಯವೇ ಮತಾಂತರವಾಗುವುದು ಬೇಡ ಎಂದು. ಶಿವಾಜಿ ಮಹಾರಾಜರು ಇರುವ ವರೆಗೂ ದಕ್ಷಿಣ ಭಾರತದಲ್ಲಿ ತಮ್ಮ ಹಿಡಿತ ಸಾಧಿಸಲು ಔರಂಗಜೇಬರಿಗೆ ಸಾಧ್ಯವಾಗಲಿಲ್ಲ.
ಶಿವಾಜಿ ಮಹಾರಾಜರು ವಿಧಿವಶರಾದ ಬಳಿಕ ಔರಂಗಜೇಬರಿಗೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು ಎನ್ನುವ ಆಸೆ ಮತ್ತೆ ಚಿಗುರೊಡೆಯಿತು, ಆದರೆ ಆಗಲೂ ಸಹ ದಕ್ಷಿಣ ಭಾರತದಲ್ಲಿ ಅವರ ಆಳ್ವಿಕೆ ಬರದೆ ಇರುವ ಹಾಗೆ ನೋಡಿಕೊಳ್ಳಲು ಶಿವಾಜಿ ಮಹಾರಾಜ್ ಅವರ ಮಗ ಧರ್ಮವೀರ್ ಸಂಭಾಜಿ ಮಹಾರಾಜ್ ಇದ್ದರು. ಸಂಭಾಜಿ ಅವರು ತಂದೆಯ ಹಾಗೆ ಪರಾಕ್ರಮಿ ಆಗಿದ್ದರು, ಹಲವು ವಿಷಯಗಳಲ್ಲಿ ಜ್ಞಾನ ಉಳ್ಳವರಾಗಿದ್ದರು. ಒಬ್ಬ ಹಿಂದು ಮಹಿಳೆಗೆ ತೊಂದರೆಯಾದರು ಸಹ ಅವರು ಸಹಿಸುತ್ತಿರಲಿಲ್ಲ. ಈ ರೀತಿ ಇದ್ದ ಸಂಭಾಜಿ ಮಹಾರಾಜ್ ಅವರು ಔರಂಗಜೇಬನ ಕೈಗೆ ಸಿಕ್ಕಿ, ಆತನಿಂದ ಕ್ರೂರವಾದ ಹಿಂಸೆಗೆ ಒಳಗಾಗಿ ಪ್ರಾಣ ಬಿಟ್ಟರು. ಸಂಭಾಜಿ ಮಹಾರಾಜ್ ಔರಂಗಜೇಬರ ಕೈಗೆ ಸಿಕ್ಕಿಹಾಕಿಕೊಳ್ಳುವ ಹಾಗೆ ಮಾಡಿದ್ದು, ಮತ್ಯಾರು ಅಲ್ಲ. ಅವರ ಜೊತೆಯಲ್ಲಿ ಇದ್ದವರೇ ಆಗಿದ್ದರು. ಸಂಭಾಜಿ ಅವರಿಗೆ ಮೋಸ ಮಾಡಿದ್ದು ಯಾರು? ಅವರ ಅಂತ್ಯವಾಗಿದ್ದು ಹೇಗೆ ಗೊತ್ತಾ? ಆ ವೀರಯೋಧನ ಕಥೆಯನ್ನು ಈಗ ತಿಳಿಸುತ್ತೇವೆ ನೋಡಿ..
ಛತ್ರಪತಿ ಶಿವಾಜಿ ಅವರ ಮೊದಲ ಮಗ ವೀರಧರ್ಮ ಸಂಭಾಜಿ ರಾಜೇ ಬೋಸಲೇ ಮಹಾರಾಜ್ ಅವರು ಮೇ 14, 1657 ರಂದು ಪುರಂಧರಕೋಟೆಯಲ್ಲಿ ಜನಿಸಿದರು. 2 ವರ್ಷವಿದ್ದಾಗಲೇ ತಾಯಿ ಸಾಯಿ ಬಾಯಿ ಅವರನ್ನು ಕಳೆದುಕೊಂಡರು. ಇವರನ್ನು ಅಜ್ಜಿ ಜೀಜಾಬಾಯಿ ಅವರು ಬೆಳೆಸಿದರು. ಸಂಭಾಜಿ ಅವರ ಬುದ್ಧಿವಂತಿಕೆ ಹೇಗಿತ್ತು ಅಂದ್ರೆ, 13 ವರ್ಷದವರಿದ್ದಾಗಲೇ, 13 ಭಾಷೆಯನ್ನು ಕಲಿತು ಪರಿಣಿತಿ ಹೊಂದಿದ್ದರು, 14 ವರ್ಷ ಆಗುವಷ್ಟದಲ್ಲಿ ಸಂಸ್ಕೃತದಲ್ಲಿ ಕೆಲವು ಗ್ರಂಥಗಳನ್ನು ರಚಿಸಿದ್ದರು. ಸಂಭಾಜಿ ಅವರನ್ನು ಜನರು ಚವಾ ಎಂದು ಕರೆಯುತ್ತಿದ್ದರು, ಚವಾ ಅಂದರೆ ಸಿಂಹದ ಮರಿ ಎಂದು ಮರಾಠಿಯಲ್ಲಿ ಅರ್ಥ. ಒಂದು ಸಾರಿ ಸಂಭಾಜಿ ಅವರಿಗೆ 9 ವರ್ಷ ವಯಸ್ಸಿದ್ದಾಗ, ಕಪಟಿಯಾದ ಔರಂಗಜೇಬ, ಶಿವಾಜಿ ಮಹಾರಾಜರ ಜೊತೆ ಚೆನ್ನಾಗಿರುವ ಹಾಗೆ ನಟಿಸಿ, ಅವರ ಕರೆಸಿಕೊಂಡನು, ಆಗ ಶಿವಾಜಿ ಮಹಾರಾಜರು ಮಗ ಸಂಭಾಜಿಯ ಜೊತೆ ಹೋಗಿ ಔರಂಗಜೇಬನನ್ನು ಭೇಟಿ ಮಾಡಿದರು. ಆ ಸಮಯದಲ್ಲಿ ಮೋಸ ಮಾಡಿದ ಔರಂಗಜೇಬ, ಇವರಿಬ್ಬರನ್ನು ಬಂಧಿಸಿದ್ದರು.
ಕೇವಲ 9 ವರ್ಷದವರಾಗಿದ್ದ ಸಂಭಾಜಿ ಇದಕ್ಕೆ ಹೆದರದೆ, ತಂದೆಯ ಆಸೆಯೇ ತನ್ನ ಆಸೆ ಎಂದು ಭಾವಿಸಿ, ಅಲ್ಲಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿ, ಇಬ್ಬರು ಬಂಧನದಿಂದ ತಪ್ಪಿಸಿಕೊಂಡಿದ್ದರು. 10 ವರ್ಷದವರಿದ್ದಾಗಲೇ, ಅಮೀರ್ ರನ್ನು ಭೇಟಿ ಮಾಡಿ, ರಾಜ್ಯಪಾಲನೆ ಹೇಗೆ ಮಾಡುವುದು ಎಂದು ತರಬೇತಿ ಪಡೆಯುತ್ತಿದ್ದರು. ಬೇರೆ ರಾಜ್ಯದ ರಾಜರನ್ನು ಭೇಟಿ ಮಾಡಿ, ಸ್ನೇಹ ಬೆಳೆಸಿಕೊಂಡಿದ್ದರು. ಶಿವಾಜಿ ಮಹಾರಾಜರಿಗೆ ಮೂವರು ಪತ್ನಿಯರು, ಮೊದಲ ಪತ್ನಿ ಸಾಯಿ ಬಾಯಿ ವಿಧಿವಶರಾದ ಬಳಿಕ, ಸೌರ ಬಾಯಿ ಅವರೊಡನೆ ಮದುವೆಯಾದರು. ಅವರ ಮಗನ ಹೆಸರು ರಾಜಾರಾಮ್. ಜೊತೆಗೆ ಇನ್ನು ಸಹೋದರಿಯರು ಸಂಭಾಜಿ ಅವರಿಗೆ ಇದ್ದರು. ಸಂಭಾಜಿ ಅವರು ಬೆಳೆದು ದೊಡ್ಡವರಾಗುವ ಸಮಯದಲ್ಲಿ ಸೌರ ಬಾಯಿ ಅವರಿಗೆ ಸಂಭಾಜಿ ಅವರ ಮೇಲೆ ದ್ವೇಷ ಹೆಚ್ಚಾಗುತ್ತಾ ಸಾಗಿತು. ಯಾಕೆಂದರೆ ಸಂಭಾಜಿ ರಾಜನಾಗುವುದು ಸೌರ ಬಾಯಿ ಅವರಿಗೆ ಇಷ್ಟವಿರಲಿಲ್ಲ.
ಹಾಗಾಗಿ ಶಿವಾಜಿ ಮಹಾರಾಜ್ ಮತ್ತು ಸಂಭಾಜಿ ಅವರ ನಡುವೆ ಜಗಳ ಬರುವ ಹಾಗೆ ಮಾಡುತ್ತಿದ್ದರು. ಇದನ್ನು ಬಹಳ ಸಮಯ ಸಹಿಸಿಕೊಂಡಿದ್ದ ಸಂಭಾಜಿ, ಒಂದು ಸಾರಿ ಈ ವಿಚಾರದ ಬಗ್ಗೆ ತಂದೆಯ ಬಳಿ ಹೇಳಿದಾಗ, ಅವರು ಯಾರು ಕೂಡ ಸಂಭಾಜಿಯನ್ನು ನಂಬಲಿಲ್ಲ, ಸಂಭಜಿಗೆ ಶಿಕ್ಷೇ ಕೊಡುವ ಪ್ರಯತ್ನ ನಡೆದಾಗ, ಅವರು ರಾಜ್ಯಬಿಟ್ಟು ಓಡಿ ಹೋಗಿ ಮೊಘಲರ ಸಾಮ್ರಾಜ್ಯಕ್ಕೆ ಸೇರಿಕೊಂಡರು, ಆಗ ಶಿವಾಜಿ ಮಹಾರಾಜರಿಗೆ ಸ್ವಂತ ಮಗ ಶತ್ರುಗಳ ರಾಜ್ಯಕ್ಕೆ ಹೋಗಿದ್ದಾನೆ ಎಂದು ಬಹಳ ಬೇಸರ ಆಗಿತ್ತು. ಅಲ್ಲಿ ಮೊಘಲರು ಹಿಂದೂ ಜನರಿಗೆ ಕೊಡುತ್ತಿರುವ ಹಿಂಸೆ ನೋಡಿ, ಸಂಭಾಜಿ ಅಲ್ಲಿಂದ ವಾಪಸ್ ಬಂದು, ತಂದೆಯ ಬಳಿ ಕ್ಷಮೆ ಕೇಳಿದರು. ಮಗನನ್ನು ಕ್ಷಮಿಸಿ ಜೊತೆಯಲ್ಲೇ ಇರಿಸಿಕೊಂಡರು ಶಿವಾಜಿ ಮಹಾರಾಜ್. ತಂದೆಯ ಜೊತೆ ಯುದ್ಧಗಳಲ್ಲಿ ಪಾಲ್ಗೊಂಡರು ಸಂಭಾಜಿ. ಸಂಭಾಜಿ ಅವರಿಗೆ 23 ವರ್ಷ ಇದ್ದಾಗ ಶಿವಾಜಿ ಮಹಾರಾಜರು ಅನಾರೋಗ್ಯದಿಂದ ವಿಧಿವಶರಾದರು.
ಬಳಿಕ ಸೌರ ಬಾಯಿ ತನ್ನ ಮಗ ರಾಜಾರಾಮ್ ಮಹಾರಾಜನಾಗಬೇಕು ಎಂದು ಎಷ್ಟೇ ಪ್ರಯತ್ನಪಟ್ಟರೂ ಅದು ನಡೆಯಲಿಲ್ಲ, ಪ್ರಜೆಗಳ ಆಯ್ಕೆಯ ಅನುಸಾರ ಸಂಭಾಜಿ ಮಹಾರಾಜರಾದರು. ಈ ವಿಷಯ ತಿಳಿದ ಔರಂಗಜೇಬರು, ಮರಾಠ ಸಾಮ್ರಾಜ್ಯವನ್ನು ಆಕ್ರಮಿಸಲು ಇದೇ ಸರಿಯಾದ ಸಮಯ ಎಂದು ಸಂಭಾಜಿ ಮಹಾರಾಜರ ರಾಜ್ಯದ ಮೇಲೆ ತನ್ನ ಲಕ್ಷಾಂತರ ಸೈನಿಕ ಪಡೆಯನ್ನು ಕಳಿಸಿ, ಯುದ್ಧ ಸಾರಿದರು. ಸಂಭಾಜಿಯನ್ನು ಅಲ್ಲಿಂದ ಓಡಿಸಬೇಕು, ಸೋಲಿಸಬೇಕು ಎಂದು ಎಷ್ಟೇ ಪ್ರಯತ್ನ ಪಟ್ಟರು ಔರಂಗಜೇಬನಿಗೆ ಸಾಧ್ಯವಾಗಲಿಲ್ಲ. ಎರಡು ಮೂರು ಬಾರಿ, ತನ್ನ ಬಳಿ ಇದ್ದ 20 ಸಾವಿರ ಸೈನಿಕರ ಸಹಾಯದಿಂದ ಲಕ್ಷಾಂತರ ಸೈನಿಕರನ್ನು ಸೋಲಿಸಿದ್ದರು ಸಂಭಾಜಿ. ಕೊನೆಗೆ ಔರಂಗಜೇಬ ಪೋರ್ಚುಗೀಸರ ಸಹಾಯ ಪಡೆದು, ಸಂಭಾಜಿ ಮೇಲೆ ಯುದ್ಧಕ್ಕೆ ಕಳಿಸಿದರು ಸಹ ಅವರನ್ನು ಕೂಡ ಸೋಲಿಸಿದ್ದರು ಸಂಭಾಜಿ.
ರಾಜ್ಯದ ಪ್ರಜೆಗಳನ್ನು ಸಂಭಾಜಿ ಅವರು ತಮ್ಮ ಸ್ವಂತ ಮಕ್ಕಳ ಹಾಗೆ ನೋಡಿಕೊಳ್ಳುತ್ತಿದ್ದರು. ಇವರ ರಾಜನ ಸ್ಥಾನಕ್ಕೆ ಬರಬೇಕೆನ್ನುವ ಆ ಹಠ, ಕೋಪದಲ್ಲಿ ಸಂಭಾಜಿ ಮಹಾರಾಜನ ಕುಟುಂಬದವರೆ, ಔರಂಗಜೇಬನ ಬಳಿ ಹೋಗಿ, ಮೋಸದಿಂದ ಹೊಂಚು ಹಾಕಿ, ಸಂಭಾಜಿ ಮಹಾರಾಜರು ಒಂಟಿಯಾಗಿ ಒಂದು ಸ್ಥಳಕ್ಕೆ ಹೋಗುವಾಗ, ವೈರಿಗಳ ಕೈಗೆ ಸಿಕ್ಕಿಹಾಕಿಕೊಳ್ಳುವ ಹಾಗೆ ಮಾಡಿದರು. ಮರಾಠ ಸಾಮ್ರಾಜ್ಯದ ಮಹಾರಾಜ ತಮ್ಮ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ಮೊಘಲರು ಹಬ್ಬ ಮಾಡಿದ್ದರು. ಸಂಭಾಜಿ ಅವರನ್ನು ಬಹಳ ಕಾಲ ಹಿಂಸಿಸಿ, ಅವರನ್ನು ವಾಪಸ್ ಬಿಡಲು ಮೂರು ಷರತ್ತುಗಳನ್ನು ಹಾಕಿದರು, ಒಂದು ಔರಂಗಜೇಬ ಎಲ್ಲರಿಗಿಂತ ಪರಾಕ್ರಮಶಾಲಿಯಾದ ರಾಜ ಎಂದು ಸಂಭಾಜಿ ಒಪ್ಪಿಕೊಳ್ಳಬೇಕು, ಎರಡನೆಯದು ಇಡೀ ರಾಜ್ಯವನ್ನು ತನಗೆ ಬಿಟ್ಟುಕೊಡಬೇಕು, ಮೂರನೆಯದು ಸಂಭಾಜಿ ಮುಸ್ಲಿಂ ಆಗಿ ಮತಾಂತರಗೊಳ್ಳಬೇಕು ಎನ್ನುವುದಾಗಿತ್ತು. ಆದರೆ ಸಂಭಾಜಿ ಅವರು ಇದ್ಯಾವುದಕ್ಕೂ ಒಪ್ಪಿಕೊಳ್ಳದ ಕಾರಣ ವಿವಿಧ ರೀತಿಯಲ್ಲಿ ಅವರಿಗೆ ಚಿತ್ರಹಿಂಸೆ ನೀಡಲಾಯಿತು.
ಸುಮಾರು ದಿನಗಳ ಕಾಲ ಸಂಭಾಜಿ ಅವರಿಗೆ ಟಾರ್ಚರ್ ಕೊಡಲಾಗಿತ್ತು, ಅವರ ಕೈನ ಉಗುರುಗಳನ್ನು ಕಿತ್ತು ಹಾಕಿ, ಕಣ್ಣುಗಳನ್ನು ಕಿತ್ತು ಹಾಕಿ, ಅವರ ದೇಹದ ಚರ್ಮವನ್ನು ಸುಲಿದು ನಾಯಿಗಳಿಗೆ ಹಾಕಲಾಗಿತ್ತು. ಸಭಾಜಿ ಅವರ ದೇಹದ ಭಾಗಗಳನ್ನು ಬೇರೆ ಬೇರೆಯಾಗಿ ಕತ್ತರಿಸಿ ನದಿಗೆ ಎಸೆಯಲಾಯಿತು. ಒಂದಲ್ಲ ಎರಡಲ್ಲ ಹಲವು ರೀತಿಯಲ್ಲಿ ಸಂಭಾಜಿ ಅವರಿಗೆ ಹಿಂಸೆ ನೀಡಿದರು, ಮತಾಂತರವಾಗಲು ಅವರು ಒಪ್ಪಿಕೊಳ್ಳಲಿಲ್ಲ. ಕೊನೆಗೆ ಸಂಭಾಜಿ ಮಹಾರಾಜರ ಅಂತ್ಯವಾದ ಬಳಿಕ ಆ ನದಿಯ ಸಮೀಪ ಇದ್ದ ವಧು ಎನ್ನುವ ಹಳ್ಳಿಯ ಜನರು ಸಾಧ್ಯವಾದಷ್ಟು ಸಂಭಾಜಿ ಮಹಾರಾಜರ ದೇಹದ ಅಂಗಾಂಗಳನ್ನು ಶೇಖರಿಸಿ ಅಂತ್ಯ ಸಂಸ್ಕಾರ ನಡೆಸಿದರು ಎನ್ನಲಾಗುತ್ತಿದೆ.
Comments are closed.